ರೈಡ್‌ಗೂ ಮುನ್ನವೇ ಪ್ರಯಾಣಿಕರಿಂದ ಟಿಪ್ಸ್ ಕೇಳುತ್ತಿದ್ದ ಓಲಾಗೆ 10 ಲಕ್ಷ ರೂಪಾಯಿ ದಂಡ

Published : Nov 14, 2026, 07:46 AM IST

ಪ್ರಯಾಣಕ್ಕೂ ಮುನ್ನವೇ 'ಟಿಪ್ಸ್' ಅಥವಾ ಹೆಚ್ಚುವರಿ ಹಣ ಪಾವತಿಸಲು ಗ್ರಾಹಕರಿಗೆ ಒತ್ತಾಯಿಸಿದ ಕಾರಣಕ್ಕಾಗಿ ಓಲಾ ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ₹10 ಲಕ್ಷ ದಂಡ ವಿಧಿಸಿದೆ. ತಕ್ಷಣವೇ ಈ ಪದ್ಧತಿಯನ್ನು ನಿಲ್ಲಿಸುವಂತೆ ಆದೇಶಿಸಿದೆ.

PREV
14
ಓಲಾ ಸಂಸ್ಥೆಗೆ ₹10 ಲಕ್ಷ ದಂಡ

ಪ್ರಯಾಣಕ್ಕೆ ವಾಹನ ಬುಕ್‌ ಮಾಡುವ ವೇಳೆಯೇ ಹೆಚ್ಚುವರಿ ಹಣ ಪಾವತಿಸುವಂತೆ ( ಟಿಪ್ಸ್‌) ಗ್ರಾಹಕರಿಗೆ ಕೋರುತ್ತಿದ್ದ ಕಾರಣಕ್ಕೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಓಲಾ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿದೆ.

24
ಹೆಚ್ಚಿನ ಹಣ ಕೇಳುವ ಸಂದೇಶ ನಿಲ್ಲಿಸುವಂತೆ ಆದೇಶ

ಪ್ರಿ-ರೈಡ್ ಟಿಪ್ ಅಥವಾ ಆಡ್-ಆನ್ ಫೀಚರ್‌ ಗ್ರಾಹಕರನ್ನು ದಾರಿ ತಪ್ಪಿಸುತ್ತದೆ. ಇದು ಅನ್ಯಾಯದ ವ್ಯಾಪಾರ ಪದ್ಧತಿಗೆ ಸಮನಾಗಿರುತ್ತದೆ ಎಂದು ಪ್ರಾಧಿಕಾರ ಹೇಳಿದೆ. ‘ಪ್ರಯಾಣ ಪೂರ್ಣಗೊಳ್ಳುವ ಮೊದಲು, ಮುಂಗಡ ದರಕ್ಕಿಂತ ಹೆಚ್ಚಿನ ಪಾವತಿಯನ್ನು ಕೋರುವ ಎಲ್ಲಾ ಸಂದೇಶಗಳನ್ನು ತಕ್ಷಣವೇ ನಿಲ್ಲಿಸಿ’ ಸಿಸಿಪಿಎ ಆದೇಶಿಸಿದೆ.

34
ಟಿಪ್ಸ್‌ ಸಂದೇಶಕ್ಕೆ ಮರುನಾಮಕರಣ ಮಾಡಿದ್ದ ಓಲಾ ಸಂಸ್ಥೆ

ಪ್ರಯಾಣಿಕರು ಆ್ಯಪ್‌ನಲ್ಲಿ ರೈಡ್‌ ಬುಕ್ಕಿಂಗ್‌ ಮಾಡಿಕೊಳ್ಳುವ ವೇಳೆ ವೇಗದ ಬುಕ್ಕಿಂಗ್‌ಗೆ ಹೆಚ್ಚುವರಿ ಹಣವನ್ನು ಪಾವತಿಸುವಂತೆ ಪ್ರೇರೇಪಿಸುವ ಟಿಪ್ಸ್‌ ಸಂದೇಶ ಆ್ಯಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಓಲಾ ಆ ಬಳಿಕ ಟಿಪ್‌ ಅನ್ನು ಆ್ಯಡ್‌ ಆನ್‌ ಎಂದು ಮರುನಾಮಕರಣ ಮಾಡಿತು.

44
ಹೆಚ್ಚಿನ ಹಣ ಪಾವತಿಸುವಂತೆ ಒತ್ತಾಯಿಸುವಂತಿಲ್ಲ

ಹೆಸರು ಬದಲಿಸುವ ಮೂಲಕ ಪ್ರಯಾಣಿಕರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟಿರುವುದನ್ನು ನಿಲ್ಲಿಸಿರಲಿಲ್ಲ. ಹಾಗಾಗಿ ಇದನ್ನು ಪರಿಶೀಲಿಸಿದ ಸಿಸಿಪಿಎ ದಂಡ ವಿಧಿಸಿ ತಕ್ಷಣವೇ ಈ ಪದ್ಧತಿ ನಿಲ್ಲಿಸುವಂತೆ ಸೂಚಿಸಿದೆ. ಮೊದಲೇ ನಿಗದಿಪಡಿಸಿದ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವಂತೆ ಅನ್ಯ ಮಾರ್ಗ ಬಳಸಿ ಒತ್ತಾಯಿಸ ಕೂಡದು ಎಂದು ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories