ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ಬೆನ್ನಲ್ಲೇ ಒಂದೊಂದೆ ವಲಯದ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ. ಗಿಗ್ ಕಾರ್ಮಿಕರು ಇಂದು ಮುಷ್ಕರ ಘೋಷಿಸಿದ್ದಾರೆ. ಇಂದು ಎಷ್ಟು ಗಂಟೆಗಳ ಕಾಲ ಆನ್‌ಲೈನ್ ಡೆಲಿವರಿ ಇರುವುದಿಲ್ಲ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಜನಸಾಮಾನ್ಯರ ಬದುಕು ಮತ್ತಷ್ಟು ದುಬಾರಿಯಾಗಲಿದೆ. ವಿದೇಶಿ ವಿನಿಮಯ ಕೊರತೆಯಿಂದ ಹಣದುಬ್ಬರ ಸಮಸ್ಯೆಗಳು ತಲೆದೋರಿದೆ. ಇದರ ಬೆನ್ನಲ್ಲೇ ಹಲವು ಕಾರ್ಮಿಕ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ಗಿಗ್ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ.
26
ಇವತ್ತು ಆನ್‌ಲೈನ್ ಡೆಲಿವರಿ ಬರಲ್ಲ
ಗಿಗ್ ಕಾರ್ಮಿಕರು ಇಂದು ಐದು ಗಂಟೆಗಳ ಕಾಲ ಮುಷ್ಕರ ನಡೆಸುತ್ತಿದ್ದಾರೆ. ಮಧ್ಯಾಹ್ನ 12:00 ರಿಂದ ಸಂಜೆ 5:00 ರವರೆಗೆ, ಗಿಗ್ ಕಾರ್ಮಿಕರು ತಮ್ಮ ಅಪ್ಲಿಕೇಶನ್‌ಗಳನ್ನು ಆಫ್‌ಲೈನ್‌ನಲ್ಲಿ ಇಡಲಿದ್ದಾರೆ. ಈ ಮೂಲಕ ಗ್ರಾಹಕರು ಆರ್ಡರ್ ಮಾಡಲು, ಡೆಲಿವರಿ ಸಾಧ್ಯವಾಗುವುದಿಲ್ಲ.
36
ಸ್ವಿಗ್ಗಿ, ಜೊಮಾಟೋ ಸೇರಿ ಎಲ್ಲಾ ಆನ್‌ಲೈನ್ ಸೇವೆ ಅಸ್ತವ್ಯಸ್ತ
ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ , ಜೆಪ್ಟೊದಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಡೆಲಿವರಿ ಮಾಡುವ ಎಜೆಂಟ್‌ಗಳು ಮುಷ್ಕರದ ವೇಳೆ ಕಾರ್ಯನಿರ್ವಹಿಸುವುದಿಲ್ಲ. ಎಲ್ಲಾ ಆನ್‌ಲೈನ್ ಡೆಲಿವರಿ ಎಜೆಂಟ್‌ಗಳು ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಮುಷ್ಕರಿಂದ ಆನ್‌ಲೈನ್ ಡೆಲಿವರಿ ಸೇವೆಗಳು ಸಂಪೂರ್ಣ ಅಸ್ತವ್ಯಸ್ತವಾಗಲಿದೆ.
ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವಾ ಕಾರ್ಮಿಕರ ಸಂಘ (GIPSWU) ಮುಷ್ಕರ ಘೋಷಣೆ ಮಾಡಿದೆ. ಮುಷ್ಕರದ ವೇಳೆ ಗಿಗ್ ಕಾರ್ಮಿಕರು ತಮ್ಮ ಅಪ್ಲಿಕೇಶನ್ ಆಫ್ ಲೈನ್ ಮೂಡ್ ನಲ್ಲಿ ಇರಿಸಲಿದ್ದಾರೆ. ಇದರಿಂದ ಗ್ರಾಹಕರು ಬುಕ್ ಮಾಡಿದರೂ ಯಾವುದೇ ಆರ್ಡರ್ ಡೆಲಿವರಿ ಆಗುವುದಿಲ್ಲ. ಇದು ದೇಶಾದ್ಯಂತ ಹಮ್ಮಿಕೊಂಡಿರುವ ಮುಷ್ಕರವಾಗಿದ್ದು, ತೀವ್ರ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
56
ಆನ್‌ಲೈನ್ ನೆಚ್ಚಿಕೊಂಡವರಿಗೆ ಇಂದು ಸಮಸ್ಯೆ
ಇದೀಗ ಬಹುತೇಕರು ಆನ್‌ಲೈನ್ ಶಾಪಿಂಗ್ ನೆಚ್ಚಿಕೊಂಡಿದ್ದಾರೆ. ತರಕಾರಿ, ಆಹಾರ ಸೇರಿದಂತೆ ಯಾವುದೇ ವಸ್ತುಗಳನ್ನು ಆನ್‌ಲೈನ್ ಮೂಲಕವೇ ಖರೀದಿಸುತ್ತಾರೆ. ಆನ್‌ಲೈನ್ ಶಾಪಿಂಗ್ ನೆಚ್ಚಿಕೊಂಡವರಿಗೆ ಇಂದು ತೀವ್ರ ಸಮಸ್ಯೆಯಾಗಲಿದೆ. ಆರ್ಡರ್ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಲಿದೆ.
66
12 ಮಿಲಿಯನ್ ಗಿಗ್ ಕಾರ್ಮಿಕರ ಮುಷ್ಕರ
ಭಾರತದಲ್ಲಿ 12 ಮಿಲಿಯನ್ ಗಿಕ್ ಕಾರ್ಮಿಕರು ಸಕ್ರಿಯವಾಗಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರ 3 ರೂಪಾಯಿ ಏರಿಕೆಯಿಂದ ಗಿಗ್ ಕಾರ್ಮಿಕರಿಗೆ ಇದೀಗ ಡೆಲಿವರಿ ದುಬಾರಿಯಾಗಲಿದೆ.ತಮ್ಮ ದುಡಿಯ ಬಹುತೇಕ ಪಾಲು ಪೆಟ್ರೋಲ್‌ಗೆ ಸುರಿಯಬೇಕಾಗುತ್ತದೆ ಎಂದು ಮುಷ್ಕರ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ