ಅಸ್ಸಾಂನ ಕಾಜಿರಂಗಾದಲ್ಲಿ ಅತೀ ಅಪರೂಪದ ಗೋಲ್ಡನ್ ಟೈಗರ್ ಪತ್ತೆ: ಇಡೀ ಪ್ರಪಂಚದಲ್ಲೇ ಇವುಗಳಿರೋದು ಬರೀ 30

Published : Apr 10, 2025, 08:40 AM ISTUpdated : Jul 08, 2025, 01:20 PM IST

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುವ ಅಪರೂಪದ ಚಿನ್ನದ ಬಣ್ಣದ ಹುಲಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

PREV
15
ಅಸ್ಸಾಂನ ಕಾಜಿರಂಗಾದಲ್ಲಿ ಅತೀ ಅಪರೂಪದ ಗೋಲ್ಡನ್ ಟೈಗರ್ ಪತ್ತೆ: ಇಡೀ ಪ್ರಪಂಚದಲ್ಲೇ ಇವುಗಳಿರೋದು ಬರೀ 30

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇತ್ತೀಚೆಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುವ ಅಪರೂಪದ ಗೋಲ್ಡನ್‌ ಟೈಗರ್‌(ಚಿನ್ನದ ಬಣ್ಣದ ಟೈಗರ್) ಹುಲಿಯ ಆಕರ್ಷಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ವಿಶಿಷ್ಟವಾದ ಅಪರೂಪದ  ಈ ಹುಲಿಯನ್ನು ರಕ್ಷಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

25

ಭಾರತದಲ್ಲಿ ಮೊದಲ ಬಾರಿಗೆ 2014 ರಲ್ಲಿ ಗೋಲ್ಡನ್ ಟೈಗರ್‌ ಇರುವುದನ್ನು ದೃಢಪಡಿಸಲಾಯಿತು. ಇದು ಸಾಮಾನ್ಯ ಹುಲಿಯ ಅಪರೂಪದ ಆನುವಂಶಿಕ ರೂಪಾಂತರವಾಗಿದೆ. ವಿಶಿಷ್ಟವಾದ ತಿಳಿ ಚಿನ್ನದ ಬಣ್ಣದ ಕೂದಲು ಮತ್ತು ಪಟ್ಟೆಗಳ ಮೂಲಕ ಇವುಗಳನ್ನು ಗುರುತಿಸಲಾಗುತ್ತದೆ. ಈ ಅಪರೂಪದ ಹುಲಿ ಜಗತ್ತಿನಲ್ಲಿ ಕೇವಲ 30 ಮಾತ್ರ ಇದೆ ಎಂದು ಹೇಳಲಾಗುತ್ತದೆ.

35

ಅಪರೂಪದ ವನ್ಯಜೀವಿಗಳನ್ನು ರಕ್ಷಿಸುವ ಅಗತ್ಯವನ್ನು ಸಚಿವ ಸಿಂಧಿಯಾ ಒತ್ತಿ ಹೇಳಿದರು. ಛಾಯಾಗ್ರಾಹಕ ಸುಧೀರ್ ಶಿವರಾಂ ತೆಗೆದ ಚಿತ್ರಗಳು ಇವಾಗಿದ್ದು, ಈ ಫೋಟೋಗಳು ಹುಲಿಯ ಅದ್ಭುತ ನೋಟವನ್ನು ಬಹಿರಂಗಪಡಿಸುವುದಲ್ಲದೆ, ಈಶಾನ್ಯ ಭಾರತದ ಪರಿಸರ ಸಮೃದ್ಧಿಯನ್ನು ನೆನಪಿಸುತ್ತವೆ.

45

ಚಿನ್ನದ ಹುಲಿ ಛಾಯಾಚಿತ್ರ ತೆಗೆದ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು 430 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ ಜೀವವೈವಿಧ್ಯ ತಾಣವಾಗಿದೆ. ಇದು ಜಗತ್ತಿನಲ್ಲಿಯೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಸ್ಥಳವೆಂದು ಪ್ರಸಿದ್ಧವಾಗಿದೆ. ದಟ್ಟವಾದ ಅಪರೂಪದ ಸಸ್ಯಗಳು ಸಹ ಉದ್ಯಾನವನದಲ್ಲಿವೆ. ಭಾರತೀಯ ಒಂಟಿ ಕೊಂಬಿನ ಘೇಂಡಾಮೃಗಗಳು, ಲೆಕ್ಕವಿಲ್ಲದಷ್ಟು ಪಕ್ಷಿ ಪ್ರಭೇದಗಳಿಗೆ ಈ ಉದ್ಯಾನವನವು ನೆಲೆಯಾಗಿದೆ. ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಒಂದು ಪ್ರಮುಖ ಅಭಯಾರಣ್ಯವಾಗಿದೆ.

55

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಕಾಜಿರಂಗ ಉದ್ಯಾನವನದಲ್ಲಿ ಕುಟುಂಬದೊಂದಿಗೆ ಸವಾರಿ ಮಾಡಿದರು. ಅವರ ಪ್ರಯಾಣದ ಸಮಯದಲ್ಲಿ, ಚಿನ್ನದ ಹುಲಿ, ರಾಯಲ್ ಬೆಂಗಾಲ್ ಹುಲಿ ಮತ್ತು ಭಾರತೀಯ ಘೇಂಡಾಮೃಗದಂತಹ ಅನೇಕ ಜೀವಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು ಎಂದು ವರದಿಯಾಗಿದೆ.

Read more Photos on
click me!

Recommended Stories