Published : Apr 09, 2025, 09:19 AM ISTUpdated : Apr 09, 2025, 09:44 AM IST
ಕೇಂದ್ರ ಸರ್ಕಾರವು ಹೊಸ ಡಿಜಿಟಲ್ ಆಧಾರ್ ಆ್ಯಪ್ ಬಿಡುಗಡೆ ಮಾಡಿದೆ. ಇದು ಭೌತಿಕ ಕಾರ್ಡ್ ಇಲ್ಲದೆ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಇನ್‌ಸ್ಟಾಗ್ರಾಮ್ ಬಳಕೆಗೆ ನಿರ್ಬಂಧ ಹೇರಲಾಗಿದೆ.
ಕೇಂದ್ರ ಸರ್ಕಾರವು ಹೊಸ ಆಧಾರ್ ಆ್ಯಪ್ ಅನ್ನು ಮಂಗಳವಾರ ಹೊರತಂದಿದ್ದು, ಬಳಕೆದಾರರು ಭೌತಿಕ ಕಾರ್ಡ್ ಅಥವಾ ನಕಲು ಪ್ರತಿ ಅಗತ್ಯವಿಲ್ಲದೆ ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
25
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಈ ವಿಷಯ ತಿಳಿಸಿದ್ದಾರೆ. ಈ ಆ್ಯಪ್‌ನ ಪರೀಕ್ಷಾ ಆವೃತ್ತಿ ಈಗ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಆ್ಯಪ್ ಅಧಿಕೃತವಾಗಿ ವಿಡುಗಡೆ ಆಗಲಿದೆ. ಇದರಲ್ಲಿ ಬಳಕೆದಾರರ ಗೌಪ್ಯತೆ ರಕ್ಷಣೆ ಆಗಲಿದೆ ಎಂದು ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.
35
ಬಳಕೆ ಹೇಗೆ?:
ಅಂಗಡಿ, ಹೋಟೆಲ್, ಪ್ರಯಾಣ ಚೆಕ್‌ಪೋಸ್ಟ್ ಅಥವಾ ಇತರೆಡೆ ಆಧಾರ್ ದೃಢೀಕೃತ ಗುರುತು ಬೇಕಿದ್ದರೆ ಅಲ್ಲಿನ ಸಿಬ್ಬಂದಿ ಯುಪಿಐ ರೀತಿಯ ಕ್ಯುಆರ್ ಕೋಡ್ ಇಟ್ಟುಕೊಂಡಿರುತ್ತಾರೆ. ಆ ಕ್ಯುಆರ್ ಕೋಡ್ ಅನ್ನು ಹೊಸ ಆಧಾರ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿದರೆ ನಮ್ಮ ವಿವರ ಅವರಿಗೆ ಲಭಿಸುತ್ತದೆ. ಇದು ಸ್ಕ್ಯಾನ್ ಮಾಡಿದ ಅಥವಾ ಮುದ್ರಿತ ಆಧಾರ್ ಪ್ರತಿಗಳ ಅಗತ್ಯ ನಿವಾರಿಸುತ್ತದೆ. ಅಲ್ಲದೆ, ಆಧಾರ್ ಮಾಹಿತಿಯ ನಕಲಿ ಗುರುತನ್ನು ತಡೆಯುತ್ತದೆ.
45
16ಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳ ಇನ್‌ಸ್ಟಾ ಬಳಕೆಗೆ ನಿರ್ಬಂಧ
ಲಂಡನ್: ಖ್ಯಾತ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅದರ ಸ್ವಚ್ಛಂದ ಬಳಕೆ ಮೇಲೆ ನಿರ್ಬಂಧ ಹೇರಿದೆ. ಮೊದಲಿಗೆ ಈ ಕ್ರಮವು ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಜಾರಿಗೆ ಬರಲಿದ್ದು, ಮುಂಬರುವ ತಿಂಗಳುಗಳಲ್ಲಿ ಭಾರತ ಸೇರಿ ಇತರೆಡೆ ಜಾರಿಗೆ ಬರಲಿದೆ ಎಂದು ತಿಳಿಸಿದೆ.
55
ಪೋಷಕರ ನಿಯಂತ್ರಣ (ಪೇರೆಂಟಲ್ ಕಂಟ್ರೋಲ್) ಅನ್ನು ಜಾರಿಗೆ ತಂದಿದ್ದು, 16 ವರ್ಷಕ್ಕಿಂತ ಕೆಳಗಿನ ಮಕ್ಕಳು ಇನ್ನು ಲೈವ್ ಸ್ಟ್ರೀಂ ನೋಡಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಜೊತೆಗೆ ಅಶ್ಲೀಲ ಚಿತ್ರಗಳನ್ನು ಅನ್‌ಬ್ಲರ್ ಮಾಡಲು ಪೋಷಕರ ಅನುಮತಿ ಕಡ್ಡಾಯವಾಗಿರಲಿದೆ ಎಂದು ಇನ್‌ಸ್ಟಾ ಸಂಸ್ಥೆ ಮೆಟಾ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ