ವಿಶ್ವದ ಸ್ಲೋ ಸಿಟಿ ಪಟ್ಟಿ ಪ್ರಕಟ, ಭಾರತದ 3 ನಗರ ಪೈಕಿ ಬೆಂಗಳೂರಿಗಿಂತ ಮುಂದಿದೆ ಈ ನಗರ

Published : Apr 08, 2025, 05:16 PM ISTUpdated : Apr 08, 2025, 05:52 PM IST

 ವಿಶ್ವದ ಸ್ಲೋ ಸಿಟಿ ಯಾವುದು? ನೀವು ಊಹಿಸಿದಂತೆ ಭಾರತದ ಮೂರು ನಗರಗಳಿದೆ. ಆದರೆ ಬೆಂಗಳೂರಿಗಿಂತ ಮುಂದೆ ಬೇರೊಂದು ನಗರ ಸ್ಥಾನ ಪಡೆದಿದೆ. ನಿಧಾನಗತಿಯ ನಗರ ಯಾವುದು? 

PREV
15
ವಿಶ್ವದ ಸ್ಲೋ ಸಿಟಿ ಪಟ್ಟಿ ಪ್ರಕಟ, ಭಾರತದ 3 ನಗರ ಪೈಕಿ ಬೆಂಗಳೂರಿಗಿಂತ ಮುಂದಿದೆ ಈ ನಗರ

ಟ್ರಾಫಿಕ್ ಕಾರಣದಿಂದ ಹಲವು ನಗಗಳು ಸ್ಲೋ ಸಿಟಿ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ. ಭಾರತದಲ್ಲಿ ಟ್ರಾಫಿಕ್ ಕಾರಣದಿಂದ ಹೆಚ್ಚು ಸುದ್ದಿಯಾಗುವ ನಗರ ಬೆಂಗಳೂರು. ಆದರೆ ವಿಶ್ವದ ರ್ಯಾಂಕಿಂಗ್‌ನಲ್ಲಿ ಬೆಂಗಳೂರಿಗಿಂತ ಮುಂಚೆ ಭಾರತದ ಮತ್ತೊಂದು ನಗರ ಸ್ಲೋ ಸಿಟಿ ಅನ್ನೋ ಕುಖ್ಯಾತಿಗೆ ಪಾತ್ರವಾಗಿದೆ. ವಿಶ್ವದ ಸ್ಲೋ ಸಿಟಿ ಅಂದರೆ ಗರಿಷ್ಠ ಟ್ರಾಫಿಕ್ ಕಾರಣ ಜನರು ನಿಗಧಿತ ಸ್ಥಳ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುವ ನಗರಗಳ ವಿವರ ಇಲ್ಲಿದೆ.

25

ಟಾಮ್‌ಟಾಮ್ ಇಂಡೆಕ್ಸ್ ಟ್ರಾಫಿಕ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೊಲಂಬಿಯಾದ ಬ್ರಾಂಕ್ವಿಲಾ ನಗರ ವಿಶ್ವದ ಅತೀ ನಿಧಾನಗತಿ ನಗರ ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿದೆ. 10 ಕಿಮಿ ಪ್ರಯಾಣ ಮಾಡಲು ಇಲ್ಲಿ 36 ನಿಮಿಷ 6 ಸೆಕೆಂಡ್ ಹೆಚ್ಚುವರಿ ಸಮಯ ಟ್ರಾಫಿಕ್‌ನಲ್ಲಿ ಕಳೆಯಬೇಕು ಎಂದು ವರದಿ ಹೇಳುತ್ತಿದೆ.

35

ವಿಶ್ವದ ಅತೀ ನಿಧಾನಗತಿ ಅಥವಾ ಟ್ರಾಫಿಕ್‌ನಿಂದ ಕಂಗೆಡುವ ಸಿಟಿಗಳಲ್ಲಿ ಕೋಲ್ಕತಾ 2ನೇ ಸ್ಥಾನ ಪಡೆದುಕೊಂಡಿದೆ. ಭಾರತ ನಗರಗಳ ಪೈಕಿ ಕೋಲ್ಕಾತ ಮೊದಲ ಸ್ಥಾನದಲ್ಲಿದೆ. ಕೋಲ್ಕತಾ ನಗರದಲ್ಲಿ ಒಂದು ಗಂಟೆಯಲ್ಲಿ ಕೇವಲ 17 ಕಿಲೋಮೀಟ್ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಯನ ವರದಿ ಹೇಳುತ್ತದೆ. ಇನ್ನು ಶೇಕಜಾ 32 ರಷ್ಟು ನಗರದ ರಸ್ತೆಗಳು ಅತ್ಯಂತ ಕಿರಿದು ಎಂದು ವರದಿ ಮಾಡಿದೆ. ಒಬ್ಬ ಸಾಮಾನ್ಯ ಕೋಲ್ಕತಾದಲ್ಲಿ ಪ್ರತಿ ವರ್ಷ ಅನಗತ್ಯವಾಗಿ 110 ಗಂಟೆ ಟ್ರಾಫಿಕ್‌ನಲ್ಲಿ ಕಳೆಯುತ್ತಾನೆ ಎಂದು  ವರದಿ ಮಾಡಿದೆ

45

ಟ್ರಾಫಿಕ್ ವಿಚಾರದಲ್ಲಿ ಎಲ್ಲರೂ ಬೆಂಗಳೂರನ್ನೇ ಬೊಟ್ಟು ಮಾಡುತ್ತಾರೆ. ಆದರೆ ಬೆಂಗಳೂರು ವಿಶ್ವದ ಸ್ಲೋ ಸಿಟಿಗಳಲ್ಲಿ 3ನೇ ಸ್ಥಾನದಲ್ಲಿದೆ. ಜೊತೆಗೆ ಭಾರತದ 2ನೇ ಸ್ಥಾನದಲ್ಲಿದೆ ಎಂದು ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿ ಮಾಡಿದೆ. ಬೆಂಗಳೂರಲ್ಲಿ 1 ಗಂಟೆಯಲ್ಲಿ 17.5 ಕಿ.ಮೀ ಪ್ರಯಾಣ ಮಾಡಲು ಮಾತ್ರ ಸಾಧ್ಯವಾಗುತ್ತದೆ ಎಂದು ವರದಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮತ್ತೆ 50 ಸೆಕೆಂಡ್ ಹೆಚ್ಚಾಗಿದೆ.

55

ಪುಣೆ ವಿಶ್ವ ರ್ಯಾಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಪುಣೆ ಭಾರತದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ. ಇಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪುಣೆ ಹೆಚ್ಚು ವಿಶಾಲವಾದ ರಸ್ತೆಗಳನ್ನು ಹೊಂದಿದ್ದರೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ.

Read more Photos on
click me!

Recommended Stories