"ನಮ್ಮ ವಾಯುನೆಲೆಗಳು ಮತ್ತು ಲಾಜಿಸ್ಟಿಕ್ಸ್‌ಗಳನ್ನು ಗುರಿಯಾಗಿಸುವುಸು ಬಹಳ ಕಷ್ಟ. ಅದು 1970 ರ ದಶಕ ಅಂತ ನಾನು ನಂಬುತ್ತೇನೆ. ಆ ಸಮಯದಲ್ಲಿ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಪ್ರಸಿದ್ಧ ಆಶಸ್ ಸರಣಿ ನಡೆಯುತ್ತಿತ್ತು. ಆ ಸಮಯದಲ್ಲಿ, ಆಸ್ಟ್ರೇಲಿಯಾದ ಶ್ರೇಷ್ಠ ವೇಗದ ಬೌಲರ್‌ಗಳಾದ ಜೆಫ್ ಥಾಮ್ಸನ್ ಮತ್ತು ಡೆನ್ನಿಸ್ ಲಿಲ್ಲೆ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್‌ಗೆ ಹೊಡೆತ ನೀಡಿದರು ಎನ್ನುತ್ತಾ ಆಶಸ್ ಕ್ರಿಕೆಟ್ ಸರಣಿಯ ಪುರಾತನ ಗಾದೆಯ ಉದಾಹರಣೆಯನ್ನು ಕೊಟ್ಟು, "ಬೂದಿಗೆ ಬೂದಿ, ಧೂಳಿನಿಂದ ಧೂಳಿಗೆ. ಥಾಮ್ಸಗೆ ಆಗದಿದ್ದರೆ, ಲಿಲ್ಲಿಯೇ ಮಾಡಬೇಕು!" (Ashes to ashes, dust to dust, if Thommo don't get ya, then Lillee surely must) ಎಂಬ ಗಾದೆಯನ್ನು ಉಲ್ಲೇಖಿಸಿದರು. ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆಂದು ನಿಮಗೆ ಅರ್ಥವಾಗುತ್ತದೆ. ನಮ್ಮ ಗಡಿರೇಖೆಯನ್ನು ದಾಟಿ ಬರುವುದು ನಿಮಗೆ ಕಷ್ಟ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ನೀಡಿದ್ದಾರೆ.