ಮತಾಂತರ ನಿಯಂತ್ರಣಕ್ಕಾಗಿ ದಲಿತರ ಬಡಾವಣೆಯಲ್ಲಿ 5 ಸಾವಿರ ತಿರುಪತಿ ದೇವಸ್ಥಾನ ಸ್ಥಾಪನೆ

Published : Sep 27, 2025, 12:06 PM IST

Temples in Dalit colonies Andhra Pradesh: ಆಂಧ್ರಪ್ರದೇಶದಲ್ಲಿ ಮತಾಂತರವನ್ನು ನಿಯಂತ್ರಿಸುವ ಉದ್ದೇಶದಿಂದ, ಟಿಟಿಡಿಯು ದಲಿತರ ಕಾಲೋನಿಗಳಲ್ಲಿ 5,000 ಶ್ರೀನಿವಾಸ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸಲು ಮುಂದಾಗಿದೆ.

PREV
15
ಶ್ರೀನಿವಾಸ ಸ್ವಾಮಿಯ ದೇವಸ್ಥಾನ ನಿರ್ಮಾಣ

ಮತಾಂತರ ನಿಯಂತ್ರಣಕ್ಕಾಗಿ ದಲಿತರ ಕಾಲೋನಿಯಲ್ಲಿ 5 ಸಾವಿರ ಶ್ರೀನಿವಾಸ ಸ್ವಾಮಿಯ ದೇವಸ್ಥಾನ ನಿರ್ಮಾಣಕ್ಕೆ TTD ಮುಂದಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಅವರ ಈ ನಡೆಯನ್ನು ಬಿಜೆಪಿ ಸ್ವಾಗತಿಸಿದೆ. ಈ ಕುರಿತು ಬಿಜೆಪಿ ನಾಯಕಿ ಎಸ್.ಯಾಮಿನಿ ಶರ್ಮಾ (BJP leader Sadineni Yamini Sharma) ಮಾತನಾಡಿದ್ದಾರೆ.

25
5 ವರ್ಷದಲ್ಲಿ ಅತ್ಯಧಿಕ ಮತಾಂತರ

ಕಳೆದ ಐದು ವರ್ಷಗಳಲ್ಲಿ ಜಗನ್‌ ಮೋಹನ್ ರೆಡ್ಡಿ ಆಡಳಿತದ ವೇಳೆ ತುಂಬಾ ಮತಾಂತರ ನಡೆದಿವೆ. ಆ ಅವಧಿಯಲ್ಲಿ ಸಾವಿರಕ್ಕೂ ಅಧಿಕ ಅಕ್ರಮ ಚರ್ಚೆಗಳು ನಿರ್ಮಾಣಗೊಂಡಿವೆ. ಇದೆಲ್ಲದರ ಉದ್ದೇಶ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದಾಗಿತ್ತು ಎಂದು ಯಾಮಿನಿ ಶರ್ಮಾ ಆರೋಪಿಸಿದ್ದಾರೆ.

35
ಎಸ್‌ಸಿ/ಎಸ್‌ಟಿ ದಲಿತರ ಬಡಾವಣೆ

ಟಿಟಿಡಿಯಿಂದ ಸುಮಾರು 5 ಸಾವಿರಕ್ಕೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನು ವಿಶೇಷವಾಗಿ ಎಸ್‌ಸಿ/ಎಸ್‌ಟಿ ದಲಿತರ ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯದಲ್ಲಿಯೇ ಅತ್ಯಧಿಕವಾಗಿ ಮತಾಂತರ ನಡೆಯುತ್ತಿದೆ ಎಂದು ಹೇಳಿದ್ದಾರೆ.

45
ಯಾಮಿನಿ ಶರ್ಮಾ

ಮುಂದುವರಿದು ಮಾತನಾಡಿದ ಯಾಮಿನಿ ಶರ್ಮಾ, ಬಾಲಾಜಿಯನ್ನು ನಾವು ಕಲಿಯುಗದ ಪ್ರತ್ಯಕ್ಷ ದೇವರು ಎಂದು ಕರೆಯುತ್ತವೆ. ದಲಿತರ ಬಡಾವಣೆಯಲ್ಲಿ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನ ನಿರ್ಮಾಣದಿಂದ ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಆಗಲಿದೆ. ಎಲ್ಲರಿಗೂ ಶ್ರೀನಿವಾಸ ಸ್ವಾಮಿಯನ್ನು ಪ್ರಾರ್ಥನೆ ಮಾಡಲು ಅವಕಾಶ ಸಿಗಲಿದೆ ಎಂದರು.

ಇದನ್ನೂ ಓದಿ: I Love Muhammad: ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

55
ಭಾರತೀಯ ಜನತಾ ಪಾರ್ಟಿ

ಭಾರತೀಯ ಜನತಾ ಪಾರ್ಟಿ ಈ ನಿರ್ಧಾರವನ್ನು ಸ್ವಾಗತಿಸುತ್ತದೆ. ಈ ಹಿಂದೆ ಸಮೃತಾ ಸೇವಾ ಫೌಂಡೇಶನ್ (ಎಸ್‌ಎಸ್ಎಫ್) ದಲಿತರ ಬಡಾವಣೆಯಲ್ಲಿ 800ಕ್ಕೂ ಅಧಿಕ ದೇವಸ್ಥಾನ ಸ್ಥಾಪಿಸಿದೆ. ಆಂಧ್ರ ಪ್ರದೇಶದ ಮೈತ್ರಿ ಸರ್ಕಾರ ಮತಾಂತರ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯಲ್ಲಿಯೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೆ ಎಂಬಬ ಭರವಸೆ ನಮಗಿದೆ ಎಂದು ಯಾಮಿನಿ ಶರ್ಮಾ ಹೇಳುತ್ತಾರೆ.

ಇದನ್ನೂ ಓದಿ: 46 ವರ್ಷಗಳ ಹಿಂದೆ ತಿರುಮಲದ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇಂದಿಗೂ ಸಿಕ್ಕಿಲ್ಲ ಉತ್ತರ 

Read more Photos on
click me!

Recommended Stories