ಬಿಹಾರ ಚುನಾವಣೆಯಲ್ಲಿ AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸೀಮಾಂಚಲದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮುಸ್ಲಿಂ ಹಕ್ಕುಗಳ ಬಗ್ಗೆ ಭಾವನಾತ್ಮಕ ಭಾಷಣ ಮಾಡುತ್ತಿದ್ದಾರೆ.
AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಬಿಹಾರ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿ ಘೋಷಿಸಿದ್ದಾರೆ. ಈಗಾಗಲೇ ಸೀಮಾಂಚಲ ನ್ಯಾಯ ಯಾತ್ರೆಯನ್ನು ಅಸಾದುದ್ದೀನ್ ಓವೈಸಿ ಮನ್ನಡೆಸುತ್ತಿದ್ದಾರೆ. ನಾಲ್ಕು ಜಿಲ್ಲೆಗಳ 24 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿರುವ ಓವೈಸಿ, ತಮ್ಮ ಪ್ರಖರ ಮಾತುಗಳಿಂದ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
25
AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ ಪ್ರತಿದಿನ 12ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಜನರೊಂದಿಗೆ ಬೆರೆತು ಸಾಲು ಸಾಲು ಸಭೆಗಳನ್ನು ಮಾಡುತ್ತಿದ್ದಾರೆ. ಮುಸ್ಲಿಮರ ಹಕ್ಕುಗಳ ಬಗ್ಗೆ ಮಾತನಾಡಿದರು ಮತ್ತು ವಕ್ಫ್ ತಿದ್ದುಪಡಿ ಕಾಯ್ದೆಯಂತಹ ಮುಸ್ಲಿಮರಿಗೆ ಸಂಬಂಧಿಸಿದ ಭಾವನಾತ್ಮಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ
35
ಎಐಎಂಐಎಂ ಶಾಸಕ ಅಖ್ತರುಲ್ ಇಮಾನ್
ಎಐಎಂಐಎಂ ಶಾಸಕ ಅಖ್ತರುಲ್ ಇಮಾನ್ ಅವರ ಕ್ಷೇತ್ರವಾದ ಅಮೌರ್‌ಗೆ ಭೇಟಿ ನೀಡಿರುವ ಎಬಿಪಿ ನ್ಯೂಸ್ ಅಲ್ಲಿಯ ಜನರೊಂದಿಗೆ ಮಾತನಾಡಿದೆ. ಅಮೌರ್ ಕ್ಷೇತ್ರದ ರಾಮನಗರ ಹಳ್ಳಿಯಲ್ಲಿ ಸುಮಾರು 500ಕ್ಕೂ ಅಧಿಕ ಮುಸ್ಲಿಂ ಮತದಾರರಿರುವ ಗ್ರಾಮವಾಗಿದೆ. ಇಲ್ಲಿಯ ಜನರು ಎಬಿಪಿ ನ್ಯೂಸ್ ಜೊತೆ ಮಾತನಾಡಿದ್ದು, ಓವೈಸಿ ಚುನಾವಣೆ ಪ್ರಚಾರ ಸಂಬಂಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಮನಗರ ಗ್ರಾಮದ ಬಹುತೇಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಸರ್ಕಾರದ ಯೋಜನೆಗಳಿಂದ ನೇರವಾಗಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ಸೌಲಭ್ಯ, ಡಿತರ ಚೀಟಿಗಳ ಮೂಲಕ ಉಚಿತ ಆಹಾರ ವಸ್ತುಗಳು ಸೇರಿದಂತೆ ಅನೇಕ ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಈ ಗ್ರಾಮದ ಮತಗಳು ಆಡಳಿತರೂಢ ನಿತೀಶ್ ಕುಮಾರ್ ಪಕ್ಷಕ್ಕೆ ಹೋಗುತ್ತವೆ ಎಂದು ಎಬಿಪಿ ವರದಿ ಮಾಡಿದೆ.
ನಮ್ಮ ಪರವಾಗಿ ಯಾರು ಕೆಲಸ ಮಾಡುತ್ತಾರೋ, ನಾವು ಅವರನ್ನು ಬೆಂಬಲಿಸುತ್ತೇವೆ. ಅಸಾದುದ್ದೀನ್ ಓವೈಸಿ ಇಲ್ಲಿಗೆ ಬಂದು ಪ್ರಚೋದನಕಾರಿ ಭಾಷಣದ ಜೊತೆ ಜನರನ್ನು ಸೆಳೆಯುವಂತಹ ರೋಮಾಂಚಕಾರಿ ಮಾತುಗಳನ್ನು ಮಾತನಾಡುತ್ಥಾರೆ. ಆದ್ರೆ ನಾವು ನಿತೀಶ್ ಕುಮಾರ್ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಂಡಿದ್ದೇವೆ ಎಂದು ರಾಮನಗರದ ಮುಸ್ಲಿಂ ಸಮುದಾಯದವರು ಹೇಳುತ್ತಾರೆ.