Health Tips: ಮಹಿಳೆಯರ ಮೆದುಳು ಪುರುಷರ ಮೆದುಳಿಗಿಂತ ಚಿಕ್ಕದಾಗಿದೆ ಗೊತ್ತಾ?

First Published | Apr 7, 2023, 7:00 AM IST

ಯಾರು ಹೆಚ್ಚು ಬುದ್ಧಿವಂತರು ಎಂಬುದರ ಬಗ್ಗೆ ಮಹಿಳೆಯರು ಮತ್ತು ಪುರುಷರ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿರುತ್ತವೆ. ಅದರ ಬಗ್ಗೆ ಕನ್ ಕ್ಲೂಶನ್ ಗೆ ಇನ್ನೂ ಬಂದಿಲ್ಲ ಜನ. ಇದೆಲ್ಲದರ ನಡುವೆ ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್‌ನ ಸಂಶೋಧಕರು ಈ ಇಬ್ಬರ ಮೆದುಳಿನ ಗಾತ್ರದ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ನೀಡಿದ್ದಾರೆ.

ಮೆದುಳು ಇಲ್ಲದಿದ್ದರೆ, ಮನುಷ್ಯ ಏನಾಗುತ್ತಿದ್ದ, ಅನ್ನೋದು ಹೇಳೋದಕ್ಕೂ ಕಷ್ಟ. ಬುದ್ಧಿವಂತ ಮನುಷ್ಯನಾಗಿರಲು ಆರೋಗ್ಯಕರವಾಗಿ ಮತ್ತು ಬಲವಾದ ಮೆದುಳನ್ನು ಹೊಂದಿರೋದು ಬಹಳ ಮುಖ್ಯ. ಆದರೆ ಪುರುಷರು ಮತ್ತು ಮಹಿಳೆಯರಲ್ಲಿ ಯಾರು ದೊಡ್ಡ ಮೆದುಳನ್ನು (bigger brain) ಹೊಂದಿದ್ದಾರೆಂದು ನಿಮಗೆ ತಿಳಿದಿದೆಯೇ? ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಇದಕ್ಕೆ ಉತ್ತರಿಸಿದ್ದಾರೆ.

ಗಾತ್ರ ಹೋಲಿಕೆ: ನಿಮಗೊಂದು ಇಂಟ್ರೆಸ್ಟಿಂಗ್ ಫ್ಯಾಕ್ಟ್ ಗೊತ್ತಾ? ಪುರುಷರ ಮೆದುಳಿನ ಪರಿಮಾಣವು ಮಹಿಳೆಯರಿಗಿಂತ 8ರಿಂದ 13 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.

Tap to resize

ಮಹಿಳೆಯರ ಮಿದುಳು ಚಿಕ್ಕದಾಗಿರಲು(women brain is smaller)  ಕಾರಣ ಏನು?
ಮಹಿಳೆಯರು ಮತ್ತು ಪುರುಷರ ಮೆದುಳಿನ ಗಾತ್ರದಲ್ಲಿನ ವ್ಯತ್ಯಾಸವು ದೈಹಿಕ ನೋಟದಿಂದಾಗಿ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ, ಪುರುಷರ ಎತ್ತರವು ಮಹಿಳೆಯರಿಗಿಂತ ದೊಡ್ಡದಾಗಿದೆ, ಇದರಿಂದಾಗಿ ಅವರ ಮೆದುಳಿನ ಗಾತ್ರವೂ ಪರಿಣಾಮ ಬೀರುತ್ತದೆ. ಈ ವ್ಯತ್ಯಾಸವು ತಿಳುವಳಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮಹಿಳೆಯರು ಯಾವ ಪ್ರಯೋಜನವನ್ನು ಪಡೆಯುತ್ತಾರೆ?
ಅಧ್ಯಯನದಲ್ಲಿ, ಮಹಿಳೆಯರ ಇನ್ಸುಲರ್ ಕಾರ್ಟೆಕ್ಸ್ ಪುರುಷರಿಗಿಂತ ದೊಡ್ಡದಾಗಿದೆ ಎಂದು ಕಂಡುಬಂದಿದೆ. ಮೆದುಳಿನ ಈ ಭಾಗವು ಭಾವನೆಗಳು, ವರ್ತನೆಗಳು, ತಿಳುವಳಿಕೆ ಮತ್ತು ಸ್ವಯಂ ಜಾಗೃತಿಗೆ ಸಂಬಂಧಿಸಿದೆ. ಮಹಿಳೆಯರು ಹೆಚ್ಚು ಭಾವುಕರಾಗಲು (more emotional) ಇದು ಕಾರಣವಾಗಿರಬಹುದು.

ಪುರುಷರು ಈ ಪ್ರಯೋಜನವನ್ನು ಪಡೆಯುತ್ತಾರೆ
ಅದೇ ಸಮಯದಲ್ಲಿ, ಪುರುಷರ amygdalae ದೊಡ್ಡದಾಗಿದೆ. ಮೆದುಳಿನ ಈ ಭಾಗವನ್ನು ಮೋಟಾರು ಸ್ಕಿಲ್ ಮತ್ತು ಸರ್ವೈವಲ್ ಬೇಸ್ಡ್ ಇಮೋಶನ್ ಕಾರಣವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ಪುರುಷರು ಉತ್ತಮ ಆನಂದ, ದೈಹಿಕ ಚಟುವಟಿಕೆ, ಕಲಿಯುವ ಮತ್ತು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

brain cells

ಮಹಿಳೆಯರು ಈ ರೋಗಗಳ ಅಪಾಯದಲ್ಲಿದ್ದಾರೆ…
ನಾರ್ತ್ ವೆಸ್ಟರ್ನ್ ಮೆಡಿಸಿನ್ ಪ್ರಕಾರ, ಮಹಿಳೆಯರು ಖಿನ್ನತೆ, ಅಲ್ಝೈಮರ್ (Alzheimer), ಮಲ್ಟಿಪಲ್ ಸ್ಕ್ಲೆರೋಸಿಸ್ ಮತ್ತು ಪಾರ್ಶ್ವವಾಯುವಿಗೆ ಹೆಚ್ಚಿನ ಅಪಾಯದಲ್ಲಿದ್ದಾರೆ. ಆದ್ದರಿಂದ, ಅವರು ಈ ರೋಗಗಳ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು.

ಪುರುಷರಿಗೂ ಅಪಾಯ
ಪುರುಷರ ಆರೋಗ್ಯ ಸಮಸ್ಯೆಗಳ ಅಪಾಯವು ಬದಲಾಗುತ್ತದೆ. ಅವರು ಆಲ್ಕೊಹಾಲ್ ವ್ಯಸನ, ಸಮಾಜ ವಿರೋಧಿ ವ್ಯಕ್ತಿತ್ವದ ಅಸ್ವಸ್ಥತೆ (anti social health issues), ಆಟಿಸಂ ಮತ್ತು ಪಾರ್ಕಿನ್ಸನ್ಗೆ ಹೆಚ್ಚು ಒಳಗಾಗುತ್ತಾರೆ. ಇವುಗಳ ಬಗ್ಗೆ ಹೆಚ್ಚು ಜಾಗೃತಿ ಹೊಂದಲು ಪ್ರಯತ್ನಿಸಬೇಕು. 

Latest Videos

click me!