ಸ್ಯಾನಿಟರಿ ಪ್ಯಾಡ್ ತಯಾರಾಗಿದ್ದು ಮಹಿಳೆಯರಿಗಲ್ಲ… ಯೋಧರಿಗೆ!

Published : Apr 06, 2023, 04:56 PM IST

ಕೆಲವು ವಸ್ತುಗಳು ಎಷ್ಟು ಪರಿಚಿತವಾಗಿವೆಯೆಂದ್ರೆ ನಾವು ಅವುಗಳನ್ನು ಲಘುವಾಗಿ ಪರಿಗಣಿಸುತ್ತೇವೆ. ಅವುಗಳ ಮೂಲವನ್ನು ಎಂದಿಗೂ ಪ್ರಶ್ನಿಸೋದಿಲ್ಲ. ಅದು ಯಾರಿಗೆ ಬೇಕು ಎಂದುಕೊಳ್ಳುತ್ತೇವೆ. ಜಿಪಿಎಸ್, ಅರ್ಪಾನೆಟ್ ನಂತಹ ವಸ್ತುಗಳನ್ನು ಮೂಲತಃ ಮಿಲಿಟರಿ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬುದು ನಮಗೆಲ್ಲಾ ಗೊತ್ತಿರೋ ವಿಚಾರ. ಆದರೆ ಸ್ಯಾನಿಟರಿ ಪ್ಯಾಡ್ ಗಳಂತಹ ವಸ್ತುಗಳ ಬಗ್ಗೆ ನಿಮಗೆ ಗೊತ್ತಾ?  ನಾವು ಬಳಸುವ ಅನೇಕ ದೈನಂದಿನ ವಸ್ತುಗಳನ್ನು ಮೊದಲು ಮಿಲಿಟರಿ ಬಳಕೆಗಾಗಿ ರಚಿಸಲಾಯಿತು. ಅವು ಯಾವುವು ನೋಡಿ..

PREV
110
ಸ್ಯಾನಿಟರಿ ಪ್ಯಾಡ್ ತಯಾರಾಗಿದ್ದು ಮಹಿಳೆಯರಿಗಲ್ಲ… ಯೋಧರಿಗೆ!

ಮೈಕ್ರೋವೇವ್ ಓವನ್ (Microwave oven)
1946 ರಲ್ಲಿ, ಈ ಸಾಮಾನ್ಯ ಅಡುಗೆ ಉಪಕರಣವನ್ನು ನೀವು ಎಲ್ಲಿಯೂ ಕಂಡಿರಲಿಕ್ಕಿಲ್ಲ, ಆದರೆ ರಾಡಾರೆಂಜ್ ಎಂದು ಕರೆಯಲ್ಪಡುವ ಮೂಲ ಉಪಕರಣವನ್ನು ಕಂಡಿರಬಹುದು. ಆದರೆ, ಅದು ಫ್ರಿಡ್ಜ್ ನಷ್ಟು ದೊಡ್ಡದಾಗಿತ್ತು! ಆಧುನಿಕ ಮೈಕ್ರೋವೇವ್‌ನ ಪಿತಾಮಹ ಅಮೆರಿಕದ ಎಂಜಿನಿಯರ್ ಪರ್ಸಿ ಸ್ಪೆನ್ಸರ್, ಇವರು ಎರಡನೇ ಮಹಾಯುದ್ಧದ ನಂತರ ರಾಡಾರ್ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದ್ದರು. ರಾಡಾರ್ ಸೆಟ್‌ನಿಂದ ಮೈಕ್ರೊವೇವ್‌ಗಳು ಶಾಖವನ್ನು ಹೊರಸೂಸುತ್ತವೆ ಎಂದು ತಿಳಿದುಬಂತು, ಆದ್ದರಿಂದ ಅವರು ಅವುಗಳನ್ನು ಲೋಹದ ಪೆಟ್ಟಿಗೆಯೊಳಗೆ ಸುತ್ತಿದರು, ಮತ್ತು ಉಳಿದವು ಇತಿಹಾಸ!

210

ರಿಸ್ಟ್ ವಾಚ್ (Wrist watch)
ಈ ಪೋರ್ಟಬಲ್ ಟೈಮ್ ಪೀಸ್ ನ ಇತಿಹಾಸ ಸುಮಾರು 16ನೇ ಶತಮಾನದಷ್ಟು ಹಳೆಯದು. ಆದರೆ 19ನೇ ಶತಮಾನದ ಅಂತ್ಯದವರೆಗೂ ಮಿಲಿಟರಿ ಕೈಗಡಿಯಾರಗಳನ್ನು ಬಳಸಲು ಪ್ರಾರಂಭಿಸಿರಲಿಲ್ಲ. ರೋಲೆಕ್ಸ್ ನಂತಹ ಕಂಪನಿಗಳು ಶತಮಾನದ ಕೊನೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರೂ, ಕೈಗಡಿಯಾರದ ಜನಪ್ರಿಯತೆಯು ನಿಜವಾಗಿಯೂ ಮೊದಲನೇ ಮಹಾಯುದ್ಧದ ನಂತರ ಬೆಳೆಯಲು ಪ್ರಾರಂಭಿಸಿತು. ಇಂದು, ಕೈಗಡಿಯಾರವನ್ನು ವಿಶ್ವದಾದ್ಯಂತ ಶತಕೋಟಿ ಜನರು ಧರಿಸುತ್ತಾರೆ

310

ಸ್ಯಾನಿಟರಿ ಪ್ಯಾಡ್ ಗಳು(Sanitary pad)
ಎರಡನೆಯ ಮಹಾಯುದ್ಧದ ಸಮಯದಲ್ಲಿ ಹತ್ತಿಯ ಕೊರತೆಯ ಪರ್ಯಾಯವಾಗಿ ಕಿಂಬರ್ಲಿ-ಕ್ಲಾರ್ಕ್ ಕಂಪನಿ ಹೊಸ ಹೀರಿಕೊಳ್ಳುವ ವಸ್ತುವನ್ನು ಕಂಡು ಹಿಡಿಯಲು ಮುಂದಾಯಿತು. ನಂತರ, ಅವರಿಗೆ ಯುದ್ಧಕ್ಕಾಗಿ ಬ್ಯಾಂಡೇಜ್ ಅಗತ್ಯವಿತ್ತು, ಆದ್ದರಿಂದ ಅವರು ಸೆಲ್ಯುಕೋಟನ್ ಎಂದು ಕರೆಯಲ್ಪಡುವ ಮರದ ತಿರುಳಿನಿಂದ ತಯಾರಿಸಿದ ಉತ್ಪನ್ನವನ್ನು ಅಭಿವೃದ್ಧಿಪಡಿಸಿದರು. ಸೆಲ್ಯುಕೋಟನ್ ದ್ರವವನ್ನು ತುಂಬಾ ಹೀರಿಕೊಳ್ಳುತ್ತಿತ್ತು, ಆದ್ದರಿಂದ ರೆಡ್ ಕ್ರಾಸ್ ದಾದಿಯರು ಮುಟ್ಟಿನ ಸಮಯದಲ್ಲಿ ಇದನ್ನು ಬಳಸಲು ಪ್ರಾರಂಭಿಸಿದರು. ಯುದ್ಧದ ನಂತರ, ಅವುಗಳನ್ನು ವಾಣಿಜ್ಯಿಕವಾಗಿ ಮಾರಲು ಪ್ರಾರಂಭಿಸಲಾಯಿತು, ಮತ್ತು ಉಳಿದವು ಹಿಸ್ಟ್ರಿ.

410

ಡ್ರೋನ್ (Drone)
ಮಾನವರಹಿತ ವೈಮಾನಿಕ ವಾಹನ (ಯುಎವಿ) ಮೂಲಭೂತವಾಗಿ ಪೈಲಟ್ ಸೇರಿದಂತೆ ಯಾವುದೇ ಮಾನವರಿಲ್ಲದ ವಿಮಾನವಾಗಿದೆ. ಇವುಗಳನ್ನು ಸಾಮಾನ್ಯವಾಗಿ ದೂರದಿಂದಲೇ ನಿಯಂತ್ರಿಸಲಾಗುತ್ತೆ ಮತ್ತು ಇದನ್ನು ರಿಮೋಟ್-ಪೈಲಟ್ ಏರ್ಕ್ರಾಫ್ಟ್ (ಆರ್ಪಿಎ) ಎಂದೂ ಕರೆಯಲಾಗುತ್ತೆ, ಇದನ್ನು ಡ್ರೋನ್ ಎಂದು ಸಹ ಕರೆಯಲಾಗುತ್ತೆ. ಮಿಲಿಟರಿಯಲ್ಲಿ ಡ್ರೋನ್ಗಳ ಬಳಕೆಯು ಎರಡನೇ ಮಹಾಯುದ್ಧದಷ್ಟು ಹಿಂದಿನದು. ವರ್ಷ ಕಳೆದಂತೆ ಹೆಚ್ಚು ಅತ್ಯಾಧುನಿಕ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಯಿತು, ಮತ್ತು ಇತ್ತೀಚಿನವರೆಗೂ ಡ್ರೋನ್ಗಳನ್ನು ಪ್ರೊಫೆಷನಲ್ ಮತ್ತು ಮನರಂಜನಾ ದೃಷ್ಟಿಯಿಂದ ಉಪಯೋಗಿಸಲು ಪ್ರಾರಂಭಿಸಿದರು.

510

ಏರೋಸಾಲ್ ಬಗ್ ಸ್ಪ್ರೇ (Bug spray)
ಬಗ್ ರಿಪೆಲ್ಲೆಂಟ್ ಇಲ್ಲದಿದ್ರೆ ನಾವು ಎಲ್ಲಿರುತ್ತೇವೆ, ಅಲ್ಲವೇ? ಬಹುಶಃ ಸೊಳ್ಳೆಗಳು ನಮ್ಮನ್ನು ತಿಂದು ಮುಗಿಸುತ್ತಿದ್ದವು! ಏರೋಸಾಲ್ ನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಅಭಿವೃದ್ಧಿಪಡಿಸಲಾಯಿತು, ವಿಶೇಷವಾಗಿ ದಕ್ಷಿಣ ಪೆಸಿಫಿಕ್‌ನಲ್ಲಿ ಬೀಡುಬಿಟ್ಟಿರುವ ಸೈನಿಕರಿಗಾಗಿ. 1941 ರಲ್ಲಿ ಇದು ಪೇಟೆಂಟ್ ಪಡೆಯಿತು ಮತ್ತು ಯಶಸ್ವಿಯಾಯಿತು. ಎಷ್ಟರ ಮಟ್ಟಿಗೆ ಎಂದರೆ ಅದನ್ನು ಸೈನಿಕರು "ಬಗ್ ಬಾಂಬ್" ಎಂದು ಅಡ್ಡಹೆಸರಿನಿಂದ ಕರೆಯುತ್ತಿದ್ದರು!  

610

ಡಕ್ಟ್ ಟೇಪ್(Duck tape)
ಜಾನ್ಸನ್ & ಜಾನ್ಸನ್ ಕಂಪನಿಯು ಎರಡನೇ ಮಹಾಯುದ್ಧದ ಸಮಯದಲ್ಲಿ ಸಾಕಷ್ಟು ಪ್ರಬಲವಾದ ಟೇಪ್ ಗಾಗಿ ಹುಡುಕಾಟದಲ್ಲಿತ್ತು. 1942 ರಲ್ಲಿ, ಅವರು ಡಕ್ಟ್ ಟೇಪ್ ಅಭಿವೃದ್ಧಿಪಡಿಸಿದರು! ಅದರ ವಾಟರ್ ಪ್ರೂಫ್ ಗುಣಲಕ್ಷಣಗಳಿಂದಾಗಿ, ಇದನ್ನು "ಡಕ್ ಟೇಪ್" ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ಡಕ್ಟ್ ವರ್ಕ್‌ಗೆ ಸೀಲ್ ಹಾಕಲು ಬಳಸಲಾಯಿತು, ಆದ್ದರಿಂದ ಈ ವಾಣಿಜ್ಯ ಹೆಸರು ಬಂತು.

710

ರೇ ಬಾನ್ ಏವಿಯೇಟರ್ಸ್
ಹೆಸರೇ ಸೂಚಿಸುವಂತೆ, ಈ ಕ್ಲಾಸಿಕ್ ಸನ್ಗ್ಲಾಸ್(Sunglass) ಮಾದರಿಯನ್ನು ಮೊದಲಿಗೆ ಯುಎಸ್ ಮಿಲಿಟರಿ ಪೈಲಟ್ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ಅಂತಿಮವಾಗಿ 1937 ರಲ್ಲಿ ಬ್ರಾಂಡ್ ರೇ ಬಾನ್ ಎಂದು ಸಾರ್ವಜನಿಕವಾಗಿ ವಾಣಿಜ್ಯೀಕರಿಸಲಾಯಿತು. ಈ ಮಾಡೆಲ್ ಇಂದಿಗೂ ಜನಪ್ರಿಯವಾಗಿದೆ.

810

ಸೂಪರ್ ಗ್ಲೂ (Super glue)
ಸೂಪರ್ ಗ್ಲೂವಿನ ಸೂಪರ್ ಪವರ್  ಎಷ್ಟಿದೆ ಎಂದು ನಿಮಗೆ ತಿಳಿದಿದೆ ಅಲ್ವಾ? ಈಸ್ಟ್ಮನ್ ಕೊಡಾಕ್ ಕಂಪನಿಯು ಪ್ಲಾಸ್ಟಿಕ್ ರೈಫಲ್ ಸೈಟ್ ಬಳಸಲು ಉತ್ಪನ್ನವನ್ನು ತಯಾರಿಸುತ್ತಿದ್ದ ವೇಳೆ ಇದನ್ನು ತಯಾರಿಸಿತು. ಕೆಲವು ವರ್ಷಗಳ ನಂತರ ಅವರು ಅದರ ಸಾಮರ್ಥ್ಯ ಅರಿತುಕೊಂಡರು ಮತ್ತು 1958 ರಲ್ಲಿ ಅದನ್ನು ಸಾರ್ವಜನಿಕರಿಗೆ ಮಾರಲು ಪ್ರಾರಂಭಿಸಿದರು. ಸೂಪರ್ ಗ್ಲೂ ಅಂತಿಮವಾಗಿ ಮಿಲಿಟರಿಗೆ ಉಪಯುಕ್ತವೆಂದು ಸಾಬೀತಾಯಿತು: ವಿಯೆಟ್ನಾಂ ಯುದ್ಧದ ಸಮಯದಲ್ಲಿ ತೆರೆದ ಗಾಯಗಳನ್ನು ತ್ವರಿತವಾಗಿ ಮುಚ್ಚಲು ಇದನ್ನು ಸ್ಪ್ರೇಯಾಗಿ ಬಳಸಲಾಯಿತು.

910

ಅಂಡರ್ ಶರ್ಟ್
ಮಿಲಿಟರಿ ಉದ್ದೇಶಗಳಿಗಾಗಿ ಮೂಲ, ಸರಳ ಬಿಳಿ ಟಿ-ಶರ್ಟ್ ಅನ್ನು ಸಹ ಅಭಿವೃದ್ಧಿಪಡಿಸಲಾಯಿತು. ಕಾಟನ್ ಅಂಡರ್ ಶರ್ಟ್‌ಗಳನ್ನು ಮೊದಲ ಬಾರಿಗೆ ಯುಎಸ್ ನೌಕಾಪಡೆಯು 20 ನೇ ಶತಮಾನದ ಆರಂಭದಲ್ಲಿ ಧರಿಸಿತು.ಅಂದಿನಿಂದ ಟಿ-ಶರ್ಟ್(T shirt) ಫ್ಯಾಷನ್ ಲೈಮ್ ಲೈಟ್ ಗೆ ಬಂತು ಎಂದು ಹೇಳಬೇಕಾಗಿಲ್ಲ ಅಲ್ವಾ.

1010

ಜೀಪ್(Jeep)
ಅಮೇರಿಕನ್ ಬ್ಯಾಂಟಮ್ ಕಾರ್ ಕಂಪನಿಯು ತಯಾರಿಸಿದ ಅತ್ಯುತ್ಕೃಷ್ಟ 4-ವ್ಹೀಲ್ ಡ್ರೈವ್ ವಾಹನವನ್ನು ಮೊದಲು ಜನರಲ್ ಪರ್ಪಸ್ ಅಥವಾ ಜಿಪಿ ಎಂದು ಕರೆಯಲಾಗುತ್ತಿತ್ತು, ಆದ್ದರಿಂದ ಜೀಪ್ ಎಂಬ ಹೆಸರು ಬಂದಿತು. ಜೀಪ್ ಮೊದಲ ಮಾದರಿಯನ್ನು 1940 ರಲ್ಲಿ ತಯಾರಿಸಲಾಯಿತು. ಯುದ್ಧದ ನಂತರ ಹೆಚ್ಚುವರಿ ಜೀಪುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಯಿತು ಮತ್ತು ಇದು ಯಶಸ್ವಿಯಾಯಿತು.  

click me!

Recommended Stories