Published : Aug 10, 2026, 11:28 AM ISTUpdated : Aug 10, 2026, 11:42 AM IST
Why You Get Sleepy After Eating lunch r ಮಧ್ಯಾಹ್ನದ ಊಟದ ನಂತರ ವಿಪರಿತ ನಿದ್ದೆ ಬರುತ್ತದೆಯೇ? ಯಾವುದೇ ಕೆಲಸ ಮಾಡಲಾಗದಷ್ಟು ದಿಢೀರ್ ಬರುವ ಈ ನಿದ್ದೆ ಅನಾರೋಗ್ಯದ ಲಕ್ಷಣವೇ? ಮಧ್ಯಾಹ್ನ ನಿದ್ರೆ ಬರಲು ಕಾರಣವೇನು?
ಮಧ್ಯಾಹ್ನದ ಊಟದ ಬಳಿಕ ಕೆಲವರಿಗೆ ಜೋರು ನಿದ್ದೆ ಶುರುವಾಗುತ್ತೆ. ಯಾವುದೇ ಕೆಲಸ ಮಾಡಲು ಇಷ್ಟವಾಗುವುದಿಲ್ಲ. ಆಫೀಸ್‌ನಲ್ಲಿದ್ದರೆ ಎಷ್ಟೇ ಸಲ ಮುಖ ತೊಳೆದುಕೊಂಡು ಬಂದ ಚೇರ್ ಮೇಲೆ ಕುಳಿತರೂ ಒಂದು ನಿಮಿಷ ಕಣ್ಣು ತೆರೆಯಲಾಗದಷ್ಟು ಕಣ್ಣು ಮುಚ್ಚಿಕೊಳ್ಳುವುದು, ಆಕಳಿಸುವುದು, ನಮಗರಿವಿಲ್ಲದಂತೆ ನಿದ್ರೆ ಮಾಡಿ ಕೊನೆಗೆ ಎಚ್ಚರವಾಗಿ ಬೆಚ್ಚಿಬಿಳ್ತೇವೆ. ಯಾಕೆ ಹೀಗೆ? ಮಧ್ಯಾಹ್ನ ಊಟದ ಬಳಿಕ ನಿದ್ರೆ ಆವರಿಸುವುದು ಏಕೆ? ಕಾರಣವೇನು ಎಂದಾದರೂ ಯೋಚಿಸಿದ್ದೀರ?
25
ಮಧ್ಯಾಹ್ನ ಊಟದ ನಂತರ ನಿದ್ದೆ ಅನಾರೋಗ್ಯದ ಲಕ್ಷಣವೇ?
ಮಧ್ಯಾಹ್ನದ ನಿದ್ದೆ. ಇದು ಒಬ್ಬರ ಸಮಸ್ಯೆ ಅಲ್ಲ, ಬಹುತೇಕರ ಸಮಸ್ಯೆ. ಸ್ವಂತ ವ್ಯಾಪಾರಿಗಳಾದರೆ ಮಧ್ಯಾಹ್ನದ ಊಟದ ಬಳಿಕ ಮನೆಗೆ ಹೋಗಿ ತಾಸು ನಿದ್ದೆ ಮಾಡುತ್ತಾರೆ. ಆದರೆ ಐಟಿ ಕಂಪನಿ ಉದ್ಯೋಗಿಗಳಾಗಿದ್ದರೆ, ವೈದ್ಯರಾಗಿದ್ದರೆ ಊಹಿಸಿ ಮಧ್ಯಾಹ್ನನದ ನಿದ್ದೆ ಅದೆಷ್ಟು ಕಿರಿಕಿರಿ, ಅನಾಹುತಕ್ಕೆ ಕಾರಣವಾಗಬಹುದು? ಊಟದ ಬಳಿಕ ನಿದ್ರೆ ಬರುವುದು ಸಾಮಾನ್ಯವಾಗಿ post-meal drowsiness ಎಂದು ಕರೆಯಲಾಗುತ್ತದೆ.
ಊಟದ ನಿದ್ರೆ ಬರುತ್ತಿದ್ದರೆ ಅದು ಅನಾರೋಗ್ಯದ ಲಕ್ಷಣವಲ್ಲ. ದೇಹದ ನೈಸರ್ಗಿಕ ಗಡಿಯಾರ, ಸೇವಿಸುವ ಆಹಾರದ ಪ್ರಮಾಣ ಮತ್ತು ಆಹಾರದಲ್ಲಿರುವ ಪದಾರ್ಥಗಳಿಂದ ಈ ರೀತಿ ನಿದ್ದೆಗೆ ಕಾರಣವಿರುತ್ತವೆ. ಇನ್ನೊಂದು ವಿಷಯ ಏನೆಂದರೆ ಮಧ್ಯಾಹ್ನದ ಸಮಯಕ್ಕೆ ದೇಹದ ನೈಸರ್ಗಿಕ 24-ಗಂಟೆಗಳ ಗಡಿಯಾರವು ಬದಲಾಗುತ್ತದೆ. ದೇಹ ಎಚ್ಚರವಾಗಿರುವುದನ್ನ ಮಂದಗೊಳಿಸುತ್ತದೆ. ಅದಕ್ಕಾಗಿಯೇ ಅನೇಕ ಜನರು ಮಧ್ಯಾಹ್ನದ ಸಮಯದಲ್ಲಿ ಊಟ ಮಾಡದಿದ್ದರೂ ಸಹ ನಿದ್ದೆ, ಅಲಸ್ಯ ಅನುಭವಿಸುತ್ತಾರೆ. ಈ ವೇಳೆ ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ತಣ್ಣನೆಯ ಸ್ಥಳ, ಮಲಗುವ ಕೋಣೆ, ಚಾಪೆ ಕಣ್ಣಿಗೆ ಬಿದ್ದರೂ ಸಾಕು ಹೋಗಿ ಮಲಗಿಬಿಡ್ತಾರೆ.
35
ಮಧ್ಯಾಹ್ನ ನಿದ್ರೆ ಬರಲು ಕಾರಣವೇನು?
ಹೊಟ್ಟೆಬಿರಿಯುವಂತೆ ಉಣ್ಣವುದರಿಂದ ನಿದ್ರೆ, ಆಲಸ್ಯ ಹೆಚ್ಚು ನೀವು ಮಧ್ಯಾಹ್ನದ ಮೇಲೆ ಫುಲ್ ಮೀಲ್ಸ್, ಜೊತೆ ಹಣ್ಣು, ಲಸ್ಸಿ, ಜ್ಯೂಸ್ ಹೀಗೆ ಒಂದರ ಮೇಲೊಂದು ಏನಾದರೂ ತಿಂದರೆ ಮುಂದೆ ಯಾವುದೇ ಕೆಲಸ ಮಾಡಲು ಅಸಾಧ್ಯ ಎನ್ನುವಷ್ಟು ನಿದ್ರೆ ಒತ್ತರಿಸಿ ಬರುತ್ತದೆ. ಅದರಲ್ಲೂ ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಸೇವನೆ, ಹುರಿದ ತಿಂಡಿ ಅಥವಾ ಸಿಹಿತಿನಿಸುಗಳು ತಿಂದರೆಂದರೆ ನಿದ್ರೆಯ ಪ್ರಮಾಣ ಇನ್ನು ಹೆಚ್ಚಿರುತ್ತದೆ. ತಿಂದ ನಂತರ ದೇಹದಲ್ಲಿ ಹಲವಾರು ಜೀರ್ಣಕಾರಿ ಬದಲಾವಣೆಗಳು ಸಂಭವಿಸುತ್ತವೆ. ರಕ್ತದಲ್ಲಿನ ಗ್ಲೂಕೋಸ್, ಇತರ ಪೋಷಕಾಂಶಗಳಲ್ಲಿನ ಬದಲಾವಣೆಗಳು ಮತ್ತು ಮೆದುಳಿನ ಎಚ್ಚರಗೊಳ್ಳುವಿಕೆಯ ಸಿಗ್ನಲ್‌ನಲ್ಲಿನ ಬದಲಾವಣೆಗಳು ಇವುಗಳು ನಿದ್ರೆ ಬರಲು ಕಾರಣವಾಗಬಹುದು.
ರಾತ್ರಿ ನಿದ್ದೆ ಕೊರತೆ, ಮಧ್ಯಾಹ್ನ ಊಟದ ಬಳಿಕ ನಿದ್ದೆಗೆ ಕಾರಣ
ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಕೂಡ ಮಧ್ಯಾಹ್ನ ಊಟದ ನಂತರ ನಿದ್ದೆ ಹೆಚ್ಚು. ಈಗಿನ ಪೀಳಿಗೆ ಜನರು ಸಾಮಾನ್ಯವಾಗಿ ತಡರಾತ್ರಿ ಮಲಗುವುದು. ಹೆಚ್ಚು ಕಾಲ ನಿದ್ರೆ ಇಲ್ಲದಿರುವುದು ಕೂಡ ಹಗಲಿನಲ್ಲಿ ನಿದ್ರೆ ಬರುತ್ತೆ. ಹೀಗಾಗಿ ರಾತ್ರಿ ಸಮಯ ಸಾಕಷ್ಟು ನಿದ್ದೆ ಮಾಡುವುದು ಅಗತ್ಯವಾಗಿದೆ.
55
ಈ ಸಮಸ್ಯೆ ಬರದಿರಲು ಏನು ಮಾಡಬೇಕು?
ಮಧ್ಯಾಹ್ನ ಊಟದ ನಂತರ ಬರುವ ನಿದ್ದೆ ಕೆಲಸ ಕಾರ್ಯಗಳಿಗೆ ಕಿರಿಕಿರಿ ಉಂಟು ಮಾಡುವುದಲ್ಲದೆ, ಆಫೀಸ್‌ಗಳಲ್ಲಿ ಮುಜುಗರ ಸನ್ನಿವೇಶ ಸೃಷ್ಟಿಸುತ್ತದೆ. ಹೀಗಾಗಿ ಮಧ್ಯಾಹ್ನದ ನಿದ್ದೆ ತಡೆಯಲು ನೀವು ಮಾಡಬೇಕಾಗಿದ್ದೇನೆಂದರೆ ಮಧ್ಯಾಹ್ನ ಊಟ ಸಮತೋಲನವಾಗಿರಲಿ, ಹೊಟ್ಟೆಬಿರಿಯುವಂತೆ ತಿನ್ನುವುದು ಬೇಡ. ಊಟದ ಬಳಿಕ ವಿಪರೀತ ಆಕಳಿಕೆ ತೂಕಡಿಕೆ ಕಡಿಮೆ ಮಾಡಲು ಲಘುವಾಗಿ ನಡೆದಾಡುವುದು, ಆಗಾಗ ಗ್ಲಾಸ್ ನೀರು ಕುಡಿಯುವುದು ಇದರೊಂದಿಗೆ ರಾತ್ರಿ ವೇಳೆ ಉತ್ತಮ ನಿದ್ದೆ ಅಗತ್ಯವಾಗಿದೆ. ಒಂದು ವೇಳೆ ಈ ಸಮಸ್ಯೆ ಪ್ರತಿದಿನ ಬರುತ್ತಿದ್ದರೆ, ತಲೆ ತಿರುಗುವಿಕೆ, ದುರ್ಬಲ, ಅಸ್ವಸ್ಥರಾದಂತೆ ಅನಿಸಿದರೆ ವೈದ್ಯರನ್ನ ಸಂಪರ್ಕಿಸಿ. ಏಕೆಂದರೆ ಕೆಲವೊಮ್ಮೆ ಅತಿಯಾದ ನಿದ್ರೆ ಸಮಸ್ಯೆಗಳು ರಕ್ತಹೀನತೆ, ಥೈರಾಯ್ಡ್ ಸಮಸ್ಯೆಗಳು, ರಕ್ತದಲ್ಲಿನ ಸಕ್ಕರೆ ಸಮಸ್ಯೆಗಳಿಂದಲೂ ಆಗಿರಬಹುದು. ಹೀಗಾಗಿ ಇಂತಹ ವೇಳೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.