ಪುರುಷರಿಗಿಂತ ಮಹಿಳೆಯರಿಗೆ ಸದಾ ಏನನ್ನಾದರೂ ತಿನ್ನಬೇಕು ಅನಿಸೋದು ಯಾಕೆ?

First Published | Jun 27, 2023, 2:42 PM IST

ಪುರುಷರಿಗಿಂತ ಮಹಿಳೆಯರಿಗೆ ಏನನ್ನಾದರೂ ತಿನ್ನಲು ಆಸೆ ಹೆಚ್ಚಾಗಿರುತ್ತೆ. ಈ ಕಾರಣದಿಂದಾಗಿಯೇ ಹೆಣ್ಣು ಮಕ್ಕಳಿಗೆ ಹಲವಾರು ಸಮಸ್ಯೆಗಳು ಕಾಡುತ್ತವೆ. ಇದನ್ನು ತಡೆಗಟ್ಟಲು, ಮನಸ್ಸಿನ ಬ್ಯಾಲೆನ್ಸ್ ಸರಿಯಾಗಿರಬೇಕು.

ಹಸಿವಾದಾಗ, ಏನನ್ನಾದರೂ ತಿನ್ನಬೇಕೆಂದು ಅಂದುಕೊಳ್ತೀರಿ ಅಲ್ವಾ? ಅನೇಕ ಬಾರಿ ಹೊಟ್ಟೆ ತುಂಬಿದ ನಂತರವೂ, ಮನಸ್ಸು ಏನನ್ನಾದರೂ ತಿನ್ನಬೇಕು ಅಂತ ಬಯಸುತ್ತೆ. ಇದನ್ನು ಕಡುಬಯಕೆ ಅಥವಾ ಕ್ರೇವಿಂಗ್ (craving) ಎಂದು ಕರೆಯಲಾಗುತ್ತದೆ. ಇದಕ್ಕೆ ದೈಹಿಕ ಮತ್ತು ಮಾನಸಿಕ ಕಾರಣಗಳೆರಡೂ ಇರಬಹುದು. ತಜ್ಞರ ಪ್ರಕಾರ, ಕ್ರೇವಿಂಗ್ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಇದರಿಂದಾಗಿ ಮಹಿಳೆಯರು ಹೆಚ್ಚಾಗಿ ಅನಾರೋಗ್ಯಕರ ಆಹಾರ ಸೇವಿಸುತ್ತಾರೆ. 

ಮಹಿಳೆಯರಿಗೆ ಕ್ರೇವಿಂಗ್ ಹೆಚ್ಚಲು ಕಾರಣ ಏನು? 
ತಜ್ಞರ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ಜಂಕ್, ಮಸಾಲೆ ಅಥವಾ ಸಂಸ್ಕರಿಸಿದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಅವರ ದೈನಂದಿನ ದಿನಚರಿಯಲ್ಲಿ ಹೆಚ್ಚಿನ ಏರಿಳಿತ. ಪ್ರತಿ ತಿಂಗಳು, ಋತುಚಕ್ರ, ನಂತರ ಗರ್ಭಧಾರಣೆ ಮತ್ತು ನಂತರದ ಋತುಬಂಧವು ಮಹಿಳೆಯರಲ್ಲಿ ಹಾರ್ಮೋನುಗಳ ಏರಿಳಿತಗಳಿಗೆ ಕಾರಣವಾಗುತ್ತದೆ, ಇದರಿಂದಾಗಿ ಅವರಿಗೆ ಫುಡ್ ಕ್ರೇವಿಂಗ್ ಆರಂಭವಾಗುತ್ತೆ. 

Tap to resize

ಯಾವ ಯಾವ ಕಾರಣಕ್ಕೆ ಮಹಿಳೆಯರಿಗೆ ಫುಡ್ ಕ್ರೇವಿಂಗ್ ಉಂಟಾಗುತ್ತೆ?
 
ಗರ್ಭಧಾರಣೆ  (Pregnancy)
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ, ಮಹಿಳೆಯರ ವಾಸನೆ ಮತ್ತು ರುಚಿಯಲ್ಲಿ ವ್ಯತ್ಯಾಸ ಉಂಟಾಗುತ್ತೆ. ಈ ಸಮಯದಲ್ಲಿ, ಅವರಿಗೆ ಏನನ್ನಾದರೂ ತಿನ್ನಬೇಕೆಂಬ ಅತಿಯಾದ ಬಯಕೆ ಕಾಡುತ್ತೆ. ನೀವು ಬಯಸಿದರೂ ಅದನ್ನು ನಿಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್ (Premenstrual syndrome)
ಋತುಚಕ್ರದ ಮೊದಲು, ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ನಲ್ಲಿ ಬದಲಾವಣೆ ಉಂಟಾಗುತ್ತದೆ. ಇದು ಕಾರ್ಬೋಹೈಡ್ರೇಟ್ಗಳನ್ನು ಸೇವಿಸುವ ದೇಹದ ಹಂಬಲವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆ ಟೈಮಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆಹಾರ ಸೇವಿಸಬೇಕು. 
 

ನಿದ್ರೆಯ ಕೊರತೆ (Lack of sleep)
ನೀವು ಮಲಗಲು ಪ್ರಯತ್ನಿಸಿದಾಗಲೆಲ್ಲಾ ನಿದ್ರೆ ಬರೋದೇ ಇಲ್ಲ, ಅಥವಾ ನಿದ್ರೆ ಬಂದಾಗ ಉತ್ತಮ ಗುಣಮಟ್ಟದ ನಿದ್ರೆ ಬರೋದಿಲ್ಲ. ಪದೇ ಪದೆ ಎಚ್ಚರವಾಗುತ್ತಿರುತ್ತೆ.. ನಿದ್ರೆಗೆ ಕಾರಣವಾಗುವ ಹಾರ್ಮೋನುಗಳು ನಿಮ್ಮ ನಿದ್ರೆಗೆ ಇನ್ನಷ್ಟು ಹದಗೆಡಲು ಕಾರಣವಾಗಬಹುದು. ಈ ಸಂದರ್ಭದಲ್ಲೂ ನಿಮಗೆ ಏನಾದರೂ ತಿನ್ನಬೇಕೆಂಬ ಕಡು ಬಯಕೆ ಉಂಟಾಗುತ್ತೆ. 
 

ಅತಿಯಾದ ಒತ್ತಡ  (Over stress)
ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಹೆಚ್ಚಿನ ಕಾರ್ಟಿಸೋಲ್ ಹಸಿವು, ಕಡುಬಯಕೆ, ಏನನ್ನಾದರೂ ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ, ನಾವು ನಮ್ಮನ್ನು ಕಂಟ್ರೋಲ್ ಮಾಡಬೇಕು. 

ಮನಸ್ಸನ್ನು ಕಂಟ್ರೋಲ್ ಮಾಡಿ (control your mind)
ಪುರುಷರಿಗಿಂತ ಮಹಿಳೆಯರಿಗೆ ಏನನ್ನಾದರೂ ತಿನ್ನಲು ಹೆಚ್ಚು ಆಸೆ ಇರುತ್ತದೆ. ಈ ಕಾರಣಕ್ಕಾಗಿ, ಅವರು ಅನಾರೋಗ್ಯಕರ ಆಹಾರ ಸೇವನೆಗೆ ಬಲಿಯಾಗುತ್ತಾರೆ. ಇದನ್ನು ತಡೆಗಟ್ಟಲು, ಮನಸ್ಸಿನ ಸಮತೋಲನ ಮತ್ತು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಬೇಕು. 

Latest Videos

click me!