ಆದರೆ ಈರುಳ್ಳಿ ಆರೋಗ್ಯಕ್ಕೆ ಒಳ್ಳೆದಲ್ಲ ಎಂದು ಅಮೆರಿಕ, ಕೆನಾಡದ ಆರೋಗ್ಯ ಪ್ರಾಧಿಕಾರ ತಿಳಿಸಿದೆ.
ಈರುಳ್ಳಿ ಮೂಲಕ ಬಹಳ ಬೇಗನೆ ಇನ್‌ಫೆಕ್ಷನ್ ಆಗುತ್ತದೆ ಎನ್ನುತ್ತಿದೆ ಅಮೆರಿಕ ಹಾಗೂ ಕೆನಡಾದ ಆರೋಗ್ಯ ಪ್ರಾಧಿಕಾರ
ತಮ್ಮ ಆರೋಗ್ಯಕ್ಕೆ ಈರುಳ್ಳಿಯಿಂದ ತೊಂದರೆ ಆಗಬಹುದೆಂದು ಅಮೆರಿಕ ಮತ್ತು ಕೆನಡಾದ ಜನ ಊಹಿಸಿಯೂ ಇರಲಿಲ್ಲ.
ಕ್ಯಾಲಿಫೋರ್ನಿಯಾ ಮೂಲದ ಥಾಮ್ಸನ್ ಇಂಟರ್‌ನ್ಯಾಷನಲ್ ಕಂಪನಿ ಸರಬರಾಜು ಮಾಡುವ ಈರುಳ್ಳಿಯನ್ನು ಬಳಸಬೇಡಿ ಎಂದು ಆರೋಗ್ಯ ಅಧಿಕಾರಿಗಳು ನಾಗರಿಕರಿಗೆ ಸೂಚನೆ ನೀಡಿದ್ದಾರೆ.
ಥಾಮ್ಸನ್ ಇಂಟರ್‌ನ್ಯಾಷನಲ್ ಪೂರೈಸಿದ ಈರುಳ್ಳಿಗೆ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಸೋಂಕಿನೊಂದಿಗೆ ಹೊಂದಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾಗಳು ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಈ ಬ್ಯಾಕ್ಟೀರಿಯಾ ಮನುಷ್ಯರ ದೇಹಕ್ಕೆ ಸೇರಿದರೆ ಸಾಲ್ಮೊನೆಲೋಸಿಸ್ ಉಂಟಾಗುತ್ತದೆ. ಇದು ನೇರವಾಗಿ ಕರುಳಿಗೆ ತೊಂದರೆ ಉಂಟು ಮಾಡುತ್ತದೆ.
ಇದಲ್ಲದೆ ಅತಿಸಾರ, ವಾಂತಿ, ಜ್ವರ, ಹೊಟ್ಟೆ ನೋವು, ಮಲ ಮತ್ತು ವಾಂತಿಯಲ್ಲಿ ರಕ್ತಸ್ರಾವವಾಗುತ್ತದೆ.
5 ವರ್ಷದ ಕೆಳಗಿನ ಮಕ್ಕಳಿಗೆ ಮತ್ತು ವೃದ್ಧರಿಗೆ ಈ ಬ್ಯಾಕ್ಟೀರಿಯಾ ಬಹಳ ಅಪಾಯಕಾರಿ. ಸೋಂಕು ತಗಲಿದ ಶೇ.1ರಷ್ಟು ಜನ ಮಾತ್ರ ಸಾವನ್ನಪ್ಪುವ ಸಾಧ್ಯತೆ ಇದೆ ಎನ್ನುತ್ತವೆ ವರದಿಗಳು.
ಈ ಬ್ಯಾಕ್ಟಿರಿಯಾ ಆಹಾರ ಅಥವಾ ನೀರಿನ ಮೂಲಕ ದೇಹ ಪ್ರವೇಶಿಸುತ್ತದೆ. ಬ್ಯಾಕ್ಟೀರಿಯಾವ ಕಲುಷಿತ ಈರುಳ್ಳಿ ಮೂಲಕ ಹರಡುತ್ತದೆ,
ಈ ನಿಟ್ಟಿನಲ್ಲಿ ಕ್ರಮ ಕೈಗೊಂಡ ಕೆನಡಾ ಸರ್ಕಾರ ರೆಸ್ಟೋರೆಂಟ್, ಚಿಲ್ಲರೆ ವ್ಯಾಪಾರಿಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದೆ.
ಥಾಮ್ಸನ್ ಇಂಟರ್ನ್ಯಾಷನಲ್ ಬೆಳೆದ ಯಾವುದೇ ಕೆಂಪು, ಹಳದಿ, ಬಿಳಿ ಮತ್ತು ಸಿಹಿ ಹಳದಿ ಈರುಳ್ಳಿಯನ್ನು ತಿನ್ನಬೇಡಿ, ಬಳಸಬೇಡಿ, ಮಾರಾಟ ಮಾಡಬೇಡಿ ಎಂದು ಕೆನಡಾ ಸರ್ಕಾರ ಸೂಚನೆ ನೀಡಿದೆ.
ತಾವು ಬಳಸುತ್ತಿರುವ ಈರುಳ್ಳಿ ಬೆಳೆದಿದ್ದೆಲ್ಲಿ ಎಂದು ತಿಳಿಯದಿದ್ದರೆ, ಅದನ್ನು ಬಳಸಬೇಡಿ, ಎಸೆಯಿರಿ ಎಂದು ಆರೋಗ್ಯ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ.