ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ, ದೇಹವು ವೈರಲ್ ಸೋಂಕುಗಳ ವಿರುದ್ಧ ಹೋರಾಡಬಹುದು. COVID-19 ನಿಂದ ರಕ್ಷಿಸುವ ಯಾವುದೇ ಔಷಧಿ ಅಥವಾ ದೃಢ ಪಡಿಸಿದ ಮನೆಮದ್ದು ಇಲ್ಲ. ಆದರೆ, ದೈನಂದಿನ ಆಹಾರದಲ್ಲಿ ವಿಟಮಿನ್‌ಗಳನ್ನು ಸೇರಿಸುವ ಮೂಲಕ ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಹೊಂದಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳು ಇಲ್ಲಿವೆ.
ಸಿಟ್ರಸ್ ಹಣ್ಣುಗಳು - ಬಹುತೇಕ ಎಲ್ಲಾ ಸಿಟ್ರಸ್ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಮುಖ್ಯವಾಗಿದೆ. ದ್ರಾಕ್ಷಿಹಣ್ಣು, ಕಿತ್ತಳೆ, ಮೂಸುಂಬಿ ಮತ್ತು ನಿಂಬೆಹಣ್ಣು .
ಪಪ್ಪಾಯಿ - ವಿಟಮಿನ್ ಸಿ ತುಂಬಿರುವ ಈ ಹಣ್ಣು ಪಪಾಯಾಸ್ ಪಪೈನ್ ಎಂಬ ಜೀರ್ಣಕಾರಿ ಕಿಣ್ವವನ್ನು ಹೊಂದಿರುತ್ತದೆ. ಪಪ್ಪಾಯಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲೇಟ್ ಇದೆ, ಇವೆಲ್ಲವೂ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಅರಿಶಿನ - ಅರಿಶಿನ ಅಉಗೆಯ ಮನೆಯ ಒಂದು ಮುಖ್ಯ ಸಾಮಾಗ್ರಿ ಇದು ಸಂಧಿವಾತಕ್ಕೆ ಉರಿಯೂತ ನಿವಾರಣೆಗೆ ಚಿಕಿತ್ಸೆ ನೀಡಲು ವರ್ಷಗಳಿಂದ ಬಳಸಲಾಗುತ್ತದೆ.
ಸೂರ್ಯಕಾಂತಿ ಬೀಜಗಳು - ಸೂರ್ಯಕಾಂತಿ ಬೀಜಗಳು ರಂಜಕ, ಮೆಗ್ನೀಸಿಯಮ್ ಮತ್ತು ಬಿ -6 ಮತ್ತು ಇ ವಿಟಮಿನ್ ಸೇರಿದಂತೆ ಹಲವು ಪೋಷಕಾಂಶಗಳ ಮಿಶ್ರಣವಾಗಿದೆ. ಇಮ್ಯೂನಿಟಿ ವ್ಯವಸ್ಥೆಯ ಕೆಲಸವನ್ನು ಉತ್ತಮಗೊಳಿಸಲು ವಿಟಮಿನ್ ಇ ಅತ್ಯಗತ್ಯ.
ಬಾದಾಮಿ - ಆಂಟಿಆಕ್ಸಿಡೆಂಟ್‌ಗಳು ಇಮ್ಯೂನಿಟಿ ಹೆಚ್ಚಿಸಲು ಮುಖ್ಯ, ಬಾದಾಮಿಯಲ್ಲಿ fat-soluble ವಿಟಮಿನ್ ಇದೆ. ಬಾದಾಮಿ ವಿಟಮಿನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸಹ ಹೊಂದಿರುತ್ತವೆ.
ಪಾಲಕ್ ಸೊಪ್ಪು- ಈ ತರಕಾರಿ ಅನೇಕ ಆಂಟಿಆಕ್ಸಿಡೆಂಟ್‌ಗಳು ಮತ್ತು ಬೀಟಾ ಕ್ಯಾರೋಟಿನ್ ಹೊಂದಿದೆ, ಇದು ನಮ್ಮ ರೋಗನಿರೋಧಕ ಹಾಗೂ ಸೋಂಕು-ಹೋರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಬೆಳ್ಳುಳ್ಳಿ - ಬಹಳ ಹಿಂದಿನಿಂದಲ್ಲೂ ರೋಗಗಳ ವಿರುದ್ಧ ಹೋರಾಡುವ ಬೆಳ್ಳುಳ್ಳಿಯ ಮೌಲ್ಯವನ್ನು ಅರಿತುಕೊಂಡಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಹಾರದಲ್ಲಿ ಬೆಳ್ಳುಳ್ಳಿ ಬಳಸುವುದು ಬೆಸ್ಟ್.
ಬ್ರೊಕೊಲಿ - ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ತರಕಾರಿ ಹಾಗೂ ವಿಟಮಿನ್ ಎ, ಸಿ, ಇ ಮತ್ತು ಇತರ ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದೆ ಬ್ರೊಕೊಲಿ.
ಶುಂಠಿ - ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗಂಟಲು ಮತ್ತು ಉರಿಯೂತದ ಕಾಯಿಲೆಗಳನ್ನು ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ.