ವ್ಯಾಯಾಮ ಮಾಡಿದ ಬಳಿಕ ತಲೆನೋವು ಕಾಣಿಸಿಕೊಳ್ಳೋದ್ಯಾಕೆ ?
First Published | Jun 29, 2021, 3:33 PM ISTಆರೋಗ್ಯವಾಗಿರಲು ಮತ್ತು ಸದೃಢವಾಗಿರಲು ಬಯಸಿದರೆ, ತಜ್ಞರು ವರ್ಕ್ ಔಟ್ ಮಾಡಲು ಶಿಫಾರಸು ಮಾಡುತ್ತಾರೆ. ಆದರೆ ವರ್ಕ್ ಔಟ್ ಮಾಡುವುದರಿಂದ ತಲೆನೋವು ಬರುತ್ತದೆ. ಹೌದು. ನಮ್ಮಲ್ಲಿ ಹೆಚ್ಚಿನವರು ಉತ್ತಮ ವರ್ಕ್ ಔಟ್ ನಂತರ ತಲೆನೋವು ಅನುಭವಿಸುತ್ತಾರೆ. ತಜ್ಞರ ಪ್ರಕಾರ, ದೀರ್ಘಕಾಲದ ಬೆವರುವಿಕೆಯ ನಂತರ ತಲೆನೋವು ಉಂಟಾಗುವುದು ಅಸಾಮಾನ್ಯವೇನಲ್ಲ. ವ್ಯಾಯಾಮದ ನಂತರ ಜನರು ಸಾಮಾನ್ಯವಾಗಿ ತಲೆಯ ಒಂದು ಬದಿಯಲ್ಲಿ ನೋವು ಅನುಭವಿಸುತ್ತಾರೆ ಅಥವಾ ಕಾರ್ಡಿಯೋ ಸೆಷನ್ನ ನಂತರ ತೀವ್ರ ತಲೆನೋವು ಅನುಭವಿಸುತ್ತಾರೆ. ಇದು ಏಕೆ ಸಂಭವಿಸುತ್ತದೆ ಎಂದು ಈಗ ಯೋಚಿಸುತ್ತಿರಬೇಕು? ತಜ್ಞರ ಪ್ರಕಾರ, ಅನೇಕ ಅಂಶಗಳು ಇದಕ್ಕೆ ಕಾರಣವಾಗಬಹುದು!