ತಲೆ ಕೂದಲ ಬಿಟ್ಹಾಕಿ, ಗಡ್ಡ, ಮೀಸೆಯೂ ಉದುರುತ್ತಾ? ಏನ್ಮಾಡಬಹುದು?

First Published Sep 1, 2022, 7:07 PM IST

ಇಂದಿನ ಕಾಲದಲ್ಲಿ, ಪುರುಷರಲ್ಲಿ ಸ್ಟೈಲಿಶ್ ಆಗಿರೋ ಗಡ್ಡ ಮತ್ತು ಮೀಸೆ ಟ್ರೆಂಡ್. ಬೆಳೆದ ಗಡ್ಡ ಮತ್ತು ಮೀಸೆ ಸೆಟ್ ಮಾಡೋದು ಟ್ರೆಂಡ್ ಆಗಿದೆ. ಗಡ್ಡ-ಮೀಸೆಯ ಟ್ರೆಂಡ್ ಎಷ್ಟು ಹೆಚ್ಚಾಗಿದೆಯೆಂದರೆ ಈಗ ಪ್ರತಿಯೊಬ್ಬ ವ್ಯಕ್ತಿಯು ತನ್ನ ಗಡ್ಡ ಮತ್ತು ಮೀಸೆ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಇಂದಿನ ಕಾಲದಲ್ಲಿ, ಸರಿಯಾಗಿ ಆಹಾರ ಸೇವಿಸದೇ ಇರೋದ್ರಿಂದ ಮತ್ತು ವೇಗದ ಲೈಫ್ ಸ್ಟೈಲ್ ನಿಂದಾಗಿ, ಗಡ್ಡ ಮತ್ತು ಮೀಸೆಯ ಕೂದಲು ಉದುರುವ ಸಮಸ್ಯೆಯೂ ಜನರಲ್ಲಿ ಕಂಡುಬರುತ್ತಿದೆ. ಗಡ್ಡದ ಕೂದಲು ಉದುರುವಿಕೆಯ ಸಮಸ್ಯೆಯು ನಿಮ್ಮ ವ್ಯಕ್ತಿತ್ವದ (Personality) ಮೇಲೂ ಪರಿಣಾಮ ಬೀರುತ್ತದೆ. 

ದೇಹದಲ್ಲಿ ಜೀವಸತ್ವಗಳು ಮತ್ತು ಅಗತ್ಯ ಖನಿಜ ಕೊರತೆಯಿಂದಾಗಿ, ಗಡ್ಡ ಮತ್ತು ಮೀಸೆ ಕೂದಲು ಉದುರಲು ಆರಂಭವಾಗುತ್ತೆ. ಒಂದೆಡೆ, ಜನರು ಆಕರ್ಷಕ ಮತ್ತು ದಪ್ಪ ಗಡ್ಡ-ಮೀಸೆ ಪಡೆಯಲು ಬಯಸಿದರೆ, ಇನ್ನೊಂದೆಡೆ ನೀವು ಗಡ್ಡ-ಮೀಸೆಯ ಕೂದಲು ಉದುರುವ ಸಮಸ್ಯೆಯಿಂದ ಕಂಗೆಟ್ಟಿರುತ್ತೀರಿ. ಈ ಕಾರಣದಿಂದಾಗಿ, ವ್ಯಕ್ತಿಯು ಮಾನಸಿಕವಾಗಿಯೂ ತೊಂದರೆಗೊಳಗಾಗಬಹುದು. 

ಗಡ್ಡ-ಮೀಸೆಯ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಅಥವಾ ವೃದ್ಧಾಪ್ಯದಲ್ಲಿ ಕೂದಲು ಉದುರಿ ಬೀಳುವುದು ಸಾಮಾನ್ಯ, ಆದರೆ ನೀವು ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಯನ್ನು ಹೊಂದಿದ್ದರೆ, ಆಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆ ಗಡ್ಡ ಮತ್ತು ಮೀಸೆಯ ಕೂದಲು ಉದುರುತ್ತೆ ಅನ್ನೋದನ್ನು ನೋಡೋಣ. 

ಗಡ್ಡ ಕೂದಲು ಉದುರುವಿಕೆಗೆ ಕಾರಣಗಳು

ಗಡ್ಡ ಮತ್ತು ಮೀಸೆಯ ಕೂದಲು ಉದುರುವಿಕೆಯ ಹಿಂದೆ ಅನೇಕ ಕಾರಣಗಳಿರಬಹುದು. ಕೆಲವು ಜನರಲ್ಲಿ, ಈ ಸಮಸ್ಯೆಯು ಸರಿಯಾದ ಆಹಾರ ಸೇವಿಸದೇ ಇರೋದು ಮತ್ತು ಒತ್ತಡ (Stress)-ತುಂಬಿದ ಜೀವನಶೈಲಿಯಿಂದ (lifestyle) ಉಂಟಾಗುತ್ತದೆ. ಅದೇ ಸಮಯದಲ್ಲಿ, ಕೆಲವು ಜನರಲ್ಲಿ ಅನಾರೋಗ್ಯ ಅಥವಾ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ, ಗಡ್ಡ ಮತ್ತು ಮೀಸೆಯ ಕೂದಲು ಉದುರಲು ಪ್ರಾರಂಭಿಸುತ್ತದೆ. 

ಕ್ಯಾನ್ಸರ್ (Cancer) ರೋಗ ಮತ್ತು ಕೀಮೋಥೆರಪಿಯಿಂದಾಗಿ (chemotherapy) ಜನರು ಕೂದಲು ಉದುರುವ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಿ ಬರುತ್ತದೆ. ಈ ಕಾರಣದಿಂದಾಗಿ, ಗಡ್ಡ ಮತ್ತು ಮೀಸೆಯ ಕೂದಲು ಸಹ ಬೀಳಲು ಪ್ರಾರಂಭಿಸುತ್ತದೆ. ಗಡ್ಡದ ಕೂದಲು ಉದುರುವಿಕೆಗೆ ಇತರ ಕೆಲವು ಪ್ರಮುಖ ಕಾರಣಗಳು ಈ ಕೆಳಗಿನಂತಿವೆ:

ಅನುವಂಶಿಕ ಕಾರಣಗಳಿಂದಾಗಿ ಗಡ್ಡದ ಕೂದಲು ಉದುರುವಿಕೆಯ ಸಮಸ್ಯೆ
ಶಿಲೀಂಧ್ರ ಸೋಂಕು
ಟೆಸ್ಟೋಸ್ಟೆರಾನ್ ಹಾರ್ಮೋನ್ (testosterone hormone) ಕೊರತೆ
ಕೀಮೋಥೆರಪಿ
ಆಟೋಇಮ್ಯೂನ್ ರೋಗ
ಪ್ರೋಟೀನ್ ಕೊರತೆ
ದೇಹದಲ್ಲಿ ಸತುವಿನ ಕೊರತೆ
ಅಲೋಪೆಸಿಯಾ ಬಾರ್ಬೆ
ಶುಚಿತ್ವದ ಕೊರತೆ

ಗಡ್ಡದ ಕೂದಲು ಉದುರುವುದನ್ನು ತಡೆಯುವುದು ಹೇಗೆ?

ಗಡ್ಡ ಮತ್ತು ಮೀಸೆಯ ಕೂದಲು ಉದುರುವಿಕೆಯ ಹಿಂದೆ ಅನೇಕ ಕಾರಣಗಳಿವೆ. ದೇಹದಲ್ಲಿ ಜೀವಸತ್ವಗಳು ಮತ್ತು ಖನಿಜಗಳ (Minerals) ಕೊರತೆಯಿಂದಾಗಿ, ಗಡ್ಡ ಮತ್ತು ಮೀಸೆಯ ಕೂದಲು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ.
 

ನಿಮ್ಮ ಗಡ್ಡ-ಮೀಸೆಯ ಕೂದಲು (beard hair fall) ಉದುರಲು ಆರಂಭವಾದರೆ, ಮೊದಲು ನಿಮ್ಮ ಆಹಾರ (Food System) ಕ್ರಮವನ್ನು ಸುಧಾರಿಸಿಕೊಳ್ಳಿ. ಗಡ್ಡ ಮತ್ತು ಮೀಸೆಯ ಕೂದಲು ಉದುರುವಿಕೆಗೆ ಕೆಲವು ಜೀವನಶೈಲಿ ಅಭ್ಯಾಸಗಳು ಸಹ ಕಾರಣವಾಗಿದೆ. ಗಡ್ಡ-ಮೀಸೆ ಕೂದಲು ಉದುರುವಿಕೆಯ ಸಮಸ್ಯೆಯನ್ನು ತೊಡೆದುಹಾಕಲು, ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ-
 

ಸಾಕಷ್ಟು ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಿ.
ಆಹಾರದಲ್ಲಿ ನೆಲ್ಲಿಕಾಯಿ ಸೇರಿಸಿ, ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಗಳು ಕೂದಲಿಗೆ ಒಳ್ಳೆಯದು.
ನೆಲ್ಲಿಕಾಯಿ ಅಥವಾ ಕೊಬ್ಬರಿ ಎಣ್ಣೆಯಿಂದ ಗಡ್ಡ ಮೀಸೆ ಮಸಾಜ್ ಮಾಡಿ.
ಮೀಸೆ ಮತ್ತು ಗಡ್ಡವನ್ನು ಸಾಸಿವೆ ಎಣ್ಣೆಯಿಂದ (mustard oil) ಮಸಾಜ್ ಮಾಡಿ.
ದೇಹದಲ್ಲಿ ಸತುವಿನ ಕೊರತೆ ನಿವಾರಿಸಲು ಒಣ ಹಣ್ಣುಗಳನ್ನು ಸೇವಿಸಿ.

ಗಡ್ಡ ಮತ್ತು ಮೀಸೆಯ ಕೂದಲು ಉದುರಿದಾಗ ಮೇಲೆ ತಿಳಿಸಿದ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಇದಲ್ಲದೆ, ನೀವು ನಿರಂತರವಾಗಿ ಈ ಸಮಸ್ಯೆಯನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸಿ. ಅನೇಕ ಜನರಲ್ಲಿ, ಕೂದಲು ಉದುರುವಿಕೆಯ ಸಮಸ್ಯೆಯು ಅನಾರೋಗ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಂದ ಉಂಟಾಗುತ್ತದೆ, ಆದ್ದರಿಂದ ವೈದ್ಯರನ್ನು ಸಂಪರ್ಕಿಸಬೇಕು.

click me!