Ayurveda Health Tips: ಭಾದ್ರಪದ ಮಾಸದಲ್ಲಿ ಮೊಸರು ತಿನ್ನೋದ್ರಿಂದ ಏನಾಗುತ್ತೆ?

First Published | Aug 31, 2022, 10:34 AM IST

ಆಯುರ್ವೇದವು ಭಾರತದ ಅತ್ಯಂತ ಹಳೆಯ ವೈದ್ಯ ಪದ್ಧತಿಗಳಲ್ಲಿ ಒಂದಾಗಿದೆ. ಆಯುರ್ವೇದ ವೈದ್ಯಪದ್ಧತಿಯನ್ನು ಧರ್ಮಗ್ರಂಥಗಳು ಮತ್ತು ಪುರಾಣಗಳಲ್ಲಿ ಸಹ ಉಲ್ಲೇಖಿಸಲಾಗಿದೆ. ರಾಮಾಯಣದ ಕಾಲದಿಂದ ಮಹಾಭಾರತದ ಕಾಲದವರೆಗೆ ಯುದ್ಧದ ಸಮಯದಲ್ಲಿ ಸೈನಿಕರ ಗಾಯಗಳನ್ನು ಗುಣಪಡಿಸಲು ಆಯುರ್ವೇದ ಔಷಧಿಗಳನ್ನು ಬಳಸಲಾಗಿದೆ. ಅರ್ಥಾತ್, ಆಯುರ್ವೇದವನ್ನು ದಿನಚರಿಯ ಒಂದು ಭಾಗವಾಗಿಸುವ ಮೂಲಕ, ನೀವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು.

ಆಯುರ್ವೇದವು (Ayurveda Diet Tips) ಆಹಾರದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ, ಯಾವ ಸಮಸ್ಯೆ ಇದ್ದರೆ ಏನು ಆಹಾರ ತಿನ್ನಬೇಕು, ಯಾವ ಋತುವಿನಲ್ಲಿ ಯಾವ ಆಹಾರಗಳನ್ನು ಅವಾಯ್ಡ್ ಮಾಡಬೇಕು, ಅನ್ನೋ ವಿವರಗಳನ್ನು ನೀಡುತ್ತದೆ. ಇವುಗಳನ್ನು ತಿಳಿದು ನೀವು ಆಹಾರ ಸೇವಿಸಿದರೆ ಉತ್ತಮ ಆರೋಗ್ಯ (good health) ಪಡೆಯಲು ಸಾಧ್ಯವಾಗುತ್ತದೆ.

ಆಯುರ್ವೇದ ತಜ್ಞರ ಪ್ರಕಾರ, ಭಾದ್ರಪದ ಕಾಲದಲ್ಲಿ ಮೊಸರು ಸೇವಿಸೋದನ್ನು ತಪ್ಪಿಸಬೇಕು. ಇತರ ತಿಂಗಳುಗಳಲ್ಲಿ ದೇಹಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಮೊಸರನ್ನು ಭಾದ್ರಪದದಲ್ಲಿ ಸೇವಿಸುವುದು ದೇಹಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತವೆ. 
 

Tap to resize

ಜೀರ್ಣಕ್ರಿಯೆಯಿಂದ ಹಿಡಿದು ಉಸಿರಾಟದವರೆಗೆ (breathing problem), ಇದು ವಿವಿಧ ಸಮಸ್ಯೆಗಳು ಹೆಚ್ಚಾಗೋ ಸಾಧ್ಯತೆಯಿಂದಾಗಿ ಮೊಸರನ್ನು ಅವಾಯ್ಡ್ ಮಾಡಬೇಕು. ಇದು ಭಾದ್ರಪದ ಋತು, ಹಾಗಾಗಿ, ಈ ಋತುವಿನಲ್ಲಿ ಮೊಸರು ತಿನ್ನುವ ಬಗ್ಗೆ ಎಲ್ಲಾ ಜನರು ವಿಶೇಷ ಕಾಳಜಿ ವಹಿಸಬೇಕು. ಭಾದ್ರಪದದಲ್ಲಿ ಮೊಸರು ತಿನ್ನುವುದನ್ನು ಏಕೆ ನಿಷೇಧಿಸಲಾಗಿದೆ ಎಂದು ತಿಳಿದುಕೊಳ್ಳೋಣ?

ತಜ್ಞರ ಅಭಿಪ್ರಾಯವೇನು?
ಆಯುರ್ವೇದ ತಜ್ಞರ (ayurveda expert) ಪ್ರಕಾರ, ಭಾದ್ರಪದ ಮಾಸದಲ್ಲಿ ಎಲ್ಲಾ ಜನರು ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮೊಸರು ಮತ್ತು ಅದರಿಂದ ತಯಾರಿಸಿದ ವಸ್ತುಗಳನ್ನು ಈ ಋತುವಿನಲ್ಲಿ ಸೇವಿಸಬಾರದು. ಇದು ಕಫದ ದೋಷಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಮಳೆಯಾಗುತ್ತದೆ, ಈ ಸಮಯದಲ್ಲಿ ನೀವು ಮೊಸರನ್ನು ಸೇವಿಸಿದರೆ, ಕಫದೊಂದಿಗೆ ಇತರ ರೋಗಗಳ ಅಪಾಯವೂ ಹೆಚ್ಚಾಗುತ್ತದೆ.

ವೈಜ್ಞಾನಿಕವಾಗಿಯೂ ಸಹ, ಈ ವಾದವನ್ನು ಪರಿಗಣಿಸಲಾಗಿದೆ. ಈ ಋತುವಿನಲ್ಲಿ, ಮೊಸರಿನಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾಗಳು (bacteria) ಸೇರಿರುವ ಸಾಧ್ಯತೆ ಇರುತ್ತದೆ, ಅದು ಕರುಳನ್ನು ಹಾನಿಗೊಳಿಸಬಹುದು, ಆದ್ದರಿಂದ ಈ ಋತುವಿನಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಬೇಕು ಎಂದು ವೈದ್ಯರು ಹೇಳುತ್ತಾರೆ.

ಉಸಿರಾಟದ ತೊಂದರೆಗಳ ಅಪಾಯ
ಭಾದ್ರಪದ ಈ ತಿಂಗಳಲ್ಲಿ ಮೊಸರಿನ ಸೇವನೆಯು ಅನೇಕ ರೀತಿಯ ಉಸಿರಾಟದ ಆರೋಗ್ಯ ಸಮಸ್ಯೆಗಳ ಪ್ರಕರಣಗಳನ್ನು ಹೆಚ್ಚಿಸುತ್ತದೆ. ನೀವು ಭಾದ್ರಪದದಲ್ಲಿ ಮೊಸರನ್ನು ಸೇವಿಸಿದರೆ, ಅದು ಗಂಟಲು ನೋವು, ಟಾನ್ಸಿಲ್ ಹಿಗ್ಗುವಿಕೆಯ ಸಮಸ್ಯೆ ಮತ್ತು ಕೆಮ್ಮು-ಶೀತ ಸಮಸ್ಯೆಗೆ ಕಾರಣವಾಗಬಹುದು. 

ಹವಾಮಾನವನ್ನು ಅವಲಂಬಿಸಿ, ಈ ದಿನಗಳಲ್ಲಿ ಮೊಸರನ್ನು ಸೇವಿಸುವುದರಿಂದ ಕಫದ ಸಮಸ್ಯೆಗಳನ್ನು ಸಹ ಹೆಚ್ಚಿಸುತ್ತೆ. ನೀವು ಈಗಾಗಲೇ ಯಾವುದೇ ಉಸಿರಾಟದ ಸಮಸ್ಯೆಗಳನ್ನು ಹೊಂದಿದ್ದರೆ, ಮೊಸರನ್ನು ಸಂಪೂರ್ಣವಾಗಿ ತಪ್ಪಿಸಿ. ಇದರಿಂದ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ. 

ಜೀರ್ಣಕ್ರಿಯೆ ತೊಂದರೆ
ಭಾದ್ರಪದದ ಈ ತಿಂಗಳಲ್ಲಿ ಮೊಸರನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳು ಕರುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ, ಈ ಕಾರಣದಿಂದಾಗಿ ನೀವು ಗ್ಯಾಸ್ಟ್ರಿಕ್, ಹೊಟ್ಟೆಯ ತೊಂದರೆಗಳು ಮತ್ತು ಅಜೀರ್ಣ ಇತ್ಯಾದಿ ಸಮಸ್ಯೆ ಎದುರಿಸಬಹುದು. ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು, ಮೊಸರು ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ಈ ಋತುವಿನಲ್ಲಿ ತಪ್ಪಿಸಬೇಕು.
 

ಈ ಋತುವಿನಲ್ಲಿ ಏನು ತಿನ್ನಬೇಕು?
ಆಯುರ್ವೇದ ತಜ್ಞರು ಹೇಳುವಂತೆ, ಈ ಋತುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳನ್ನು ಸೇವಿಸುವುದು ಹೆಚ್ಚು ಮುಖ್ಯ. ಇದಕ್ಕಾಗಿ ಎಳ್ಳು ತಿನ್ನೋದು ಬೆಸ್ಟ್. ಎಳ್ಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇದು ಅನೇಕ ರೀತಿಯ ರೋಗಗಳನ್ನು ದೂರವಿಡುತ್ತದೆ. 

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ದೇಹವನ್ನು ಆರೋಗ್ಯಕರವಾಗಿಡಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಹಗುರವಾದ ಉಗುರುಬೆಚ್ಚಗಿನ ನೀರನ್ನು ಸೇವಿಸುವುದು ಉತ್ತಮ. ಏನನ್ನಾದರೂ ತಿನ್ನುವ ಮೊದಲು, ಅದನ್ನು ನೀರಿನಿಂದ ಚೆನ್ನಾಗಿ ತೊಳೆದು ತಿನ್ನಿ, ಯಾಕಂದ್ರೆ ಈ ಸೀಸನ್ ನಲ್ಲಿ ಕ್ಲೀನ್ ಬಗ್ಗೆ ಗಮನ ಹರಿಸೋದು ತುಂಬಾನೆ ಮುಖ್ಯ.

Latest Videos

click me!