ಈ ರೋಗಲಕ್ಷಣವಿದೆಯಾ? ಇನ್ನೂ ಬೀಯರಿ ಕುಡಿದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಗ್ಯಾರಂಟಿ!

First Published Sep 1, 2022, 6:42 PM IST

ಆಲ್ಕೋಹಾಲ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅನೇಕ ಜನರು ಬಿಯರ್ (Beer) ಸಹ ಸೇವಿಸುತ್ತಾರೆ. ಬಿಯರ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಜನರು ನಂಬುತ್ತಾರೆ, ಆದರೆ ಅದನ್ನು ಅತಿಯಾಗಿ ಸೇವಿಸುವುದು ನಿಮಗೆ ತುಂಬಾ ಹಾನಿಕಾರಕ.  ಇಂದು ನಾವು ಅಂತಹ ಕೆಲವು ರೋಗಲಕ್ಷಣಗಳ ಬಗ್ಗೆ ನಿಮಗೆ ಹೇಳಲಿದ್ದೇವೆ, ಆ ಲಕ್ಷಣಗಳು ಕಾಣಿಸಿದರೆ ನೀವು ತಕ್ಷಣವೇ ಬಿಯರ್ ಬಿಡಬೇಕು ಎಂದು ಅರ್ಥ. ಹಾಗಿದ್ರೆ ಎಷ್ಟು ಬಿಯರ್ ಕುಡಿಯಬೇಕು? ಯಾವ ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣ ಬಿಯರ್ ಕುಡಿಯೋದನ್ನು ಸ್ಟಾಪ್ ಮಾಡಬೇಕು. ಇಲ್ಲಿದೆ ಹೆಚ್ಚಿನ ಮಾಹಿತಿ ತಿಳಿಯಿರಿ.

ಆಲ್ಕೋಹಾಲ್ಆ ರೋಗ್ಯಕ್ಕೆ ತುಂಬಾ ಹಾನಿಕಾರಕ ಅನ್ನೋದು ನಿಮಗೂ ಗೊತ್ತಿದೆ. ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ, ನೀವು ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರತಿದಿನ ಆಲ್ಕೋಹಾಲ್ ಸೇವಿಸುವುದು ತುಂಬಾ ಕೆಟ್ಟ ಅಡ್ಡಪರಿಣಾಮಗಳನ್ನು ಬೀರುತ್ತದೆ. ಅವುಗಳ ಬಗ್ಗೆ ತಿಳಿಯೋಣ.

ಎಲ್ಲಾ ಆಲ್ಕೊಹಾಲ್ ಯುಕ್ತ ಪಾನೀಯಗಳಂತೆ, ಬಿಯರ್ ಅನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಲಾಗುತ್ತದೆ. ಬಿಯರ್ ಕುಡಿಯುವ ಹೆಚ್ಚಿನ ಜನರು ಒಂದೇ ಬಾರಿಗೆ ಸಾಕಷ್ಟು ಬಿಯರ್ ಕುಡಿಯುತ್ತಾರೆ. ಬಿಯರ್ ಅನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ನೀವು ಜೀರ್ಣಕಾರಿ ಸಮಸ್ಯೆಗಳು, ನಿದ್ರೆಯ ಕೊರತೆ (Sleeplessness), ತಲೆನೋವು (Headache) ಮೊದಲಾದ ಸಮಸ್ಯೆಗಳನ್ನು ಎದುರಿಸಬಹುದು. ಅದೇ ಸಮಯದಲ್ಲಿ, ಬಿಯರ್ ನಿರಂತರವಾಗಿ ಸೇವಿಸುವುದರಿಂದ ಬೊಜ್ಜು, ಅಧಿಕ ರಕ್ತದೊತ್ತಡ (High Blood Pressure), ಪಿತ್ತಜನಕಾಂಗದ ಹಾನಿ, ಹೃದ್ರೋಗ (Heart Problem) ಮತ್ತು ಖಿನ್ನತೆಯ ಅಪಾಯ ಹೆಚ್ಚಿಸುತ್ತದೆ.  
 

ಅಧಿಕ ರಕ್ತದೊತ್ತಡ (high blood pressure)

ನೀವು ಪ್ರತಿದಿನ ಬಿಯರ್ ಸೇವಿಸಿದರೆ ಮತ್ತು ನಿಮ್ಮ ರಕ್ತದೊತ್ತಡ ಹೆಚ್ಚಾಗಿದ್ದರೆ, ಆಗ ಬಿಯರ್ ಬಿಡುವುದು ತುಂಬಾ ಪ್ರಯೋಜನಕಾರಿ. ಅತಿಯಾದ ಆಲ್ಕೋಹಾಲ್ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. 

ನಿದ್ರೆಯ ಕೊರತೆ, ನಿದ್ರಾಹೀನತೆ ಮತ್ತು ಹಗಲಿನ ನಿದ್ರೆ-

ಆಲ್ಕೋಹಾಲ್ ನಲ್ಲಿರುವ ಕೆಲವು ಅಂಶಗಳ ಕಾರಣದಿಂದಾಗಿ, ನೀವು ಅದನ್ನು ಕುಡಿದ ತಕ್ಷಣ ನಿಮಗೆ ನಿದ್ರೆ ಬರುತ್ತದೆ, ಆದರೆ ಆಲ್ಕೋಹಾಲ್ ಕುಡಿಯುವುದರಿಂದ ನಿಮಗೆ ಗಾಢ ನಿದ್ರೆ ಬರುವುದಿಲ್ಲ. ಅಲ್ಲದೆ, ಆಲ್ಕೋಹಾಲ್ ನಿಂದಾಗಿ, ಆಗಾಗ್ಗೆ ಮೂತ್ರವಿಸರ್ಜನೆ ಉಂಟಾಗುತ್ತೆ, ಇದರಿಂದಾಗಿ ನೀವು ಗಾಢ ನಿದ್ರೆ ಮಾಡಲು ಸಾಧ್ಯವಿಲ್ಲ.  

ಲಿವರ್ ಎಂಝೈಮ್ ಹೈ ಆಗೋದು

ಉತ್ತಮ ಆರೋಗ್ಯಕ್ಕಾಗಿ ನೀವು ವರ್ಷಕ್ಕೊಮ್ಮೆ ನಿಮ್ಮ ದೈಹಿಕ ತಪಾಸಣೆ (Physical Examination) ಮಾಡುವುದು ಮುಖ್ಯ. ಅತಿಯಾದ ಆಲ್ಕೋಹಾಲ್ ಸೇವನೆಯು ಯಕೃತ್ತಿನ ಕಿಣ್ವಗಳು ಹೆಚ್ಚಾಗಲು ಕಾರಣವಾಗಬಹುದು. ಕೆಲವೊಮ್ಮೆ ಔಷಧಿಗಳು ಮತ್ತು ಸೋಂಕುಗಳಿಂದಾಗಿ ಯಕೃತ್ತಿನ ಕಿಣ್ವಗಳು ಸಹ ಹೆಚ್ಚಾಗುತ್ತವೆ. "ನಿಮ್ಮ ರಕ್ತ ಪರೀಕ್ಷೆಯಲ್ಲಿ ಯಕೃತ್ತಿನ ಕಿಣ್ವಗಳಾದ AST (ಆಸ್ಪರ್ಟೇಟ್ ಅಮೈನೋಟ್ರಾನ್ಸ್ಫೆರೇಸ್) ಮತ್ತು ALT (ಅಲನೈನ್ ಟ್ರಾನ್ಸ್ಮಿನೇಸ್) ಅಧಿಕವಾಗಿದ್ದರೆ, ಯಕೃತ್ತಿಗೆ ವಿರಾಮದ ಅಗತ್ಯವಿದೆ ಎಂದರ್ಥ.

ಒತ್ತಡ

ನೀವು ಒತ್ತಡ (stress) ಮತ್ತು ಆತಂಕದಿಂದ ತೊಂದರೆಗೀಡಾಗಿದ್ದರೆ, ನೀವು ಎಷ್ಟು ಬಿಯರ್ ಕುಡಿಯುತ್ತೀರಿ ಎಂಬುದರ ಬಗ್ಗೆ ಗಮನ ಹರಿಸೋದು ಮುಖ್ಯ. ಬಿಯರ್ ಕುಡಿಯುವುದರಿಂದ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತೆ, ಇದು ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ.  

ಹೆಚ್ಚು ಅನಾರೋಗ್ಯಕ್ಕೆ ಒಳಗಾಗುವುದು-

ನೀವು ತುಂಬಾ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಇದಕ್ಕೆ ಬಿಯರ್ ಕಾರಣವಿರಬಹುದು. ನೀವು ಹೆಚ್ಚು ಆಲ್ಕೋಹಾಲ್ ಸೇವಿಸಿದಾಗ, ಅದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತೆ, ಇದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಅತಿಯಾದ ಆಲ್ಕೋಹಾಲ್ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ಗ್ಲುಟೆನ್ ಸೆನ್ಸಿಟಿವಿಟಿ

ನೀವು ಪ್ರತಿಬಾರಿ ಬಿಯರ್ ಕುಡಿಯುವಾಗ ನಿಮಗೆ ಸಾಕಷ್ಟು ಅಹಿತಕರ ಅನುಭವವಾಗುತ್ತದೆಯೇ? ಇದಕ್ಕೆ ಒಂದು ಕಾರಣವೆಂದರೆ ಗ್ಲುಟೆನ್ ಆಗಿರಬಹುದು. ಗ್ಲುಟೆನ್ ಸೆನ್ಸಿಟಿವಿಟಿ ಒಂದು ಸಮಸ್ಯೆಯಾಗಿದೆ. ಬಾರ್ಲಿ, ಗೋಧಿ ಮತ್ತು ರಾಗಿಯಲ್ಲಿರುವ ಒಂದು ರೀತಿಯ ಪ್ರೋಟೀನ್ ಆದ ಗ್ಲುಟೆನ್ ಸೇವಿಸಿದ ನಂತರ ಒಬ್ಬ ವ್ಯಕ್ತಿಯು ಅಲರ್ಜಿ ಇತ್ಯಾದಿಗಳ ಸಮಸ್ಯೆ ಎದುರಿಸಬೇಕಾಗುತ್ತದೆ. ಹೆಚ್ಚಿನ ಬಿಯರ್ ಅನ್ನು ಬಾರ್ಲಿ, ಗೋಧಿಯಿಂದ ತಯಾರಿಸಲಾಗುತ್ತದೆ. ಅವೆಲ್ಲವೂ ಗ್ಲುಟೆನ್ ಹೊಂದಿರುತ್ತವೆ.  
 

click me!