ದೇಹದಲ್ಲಿ ಉಂಟಾಗುವ ಈ ಬದಲಾವಣೆಗಳನ್ನು ನೋಡಿ, ವೈದ್ಯರು ಅನೇಕ ಸಮಸ್ಯೆಗಳನ್ನು ಟೆಸ್ಟ್ ಮಾಡದೆಯೇ ಕಂಡುಹಿಡಿಯುತ್ತಾರೆ. ಇದೇ ರೀತಿ ಇಂದು ದೇಹದಲ್ಲಿ ಆಗುವ ಅದೊಂದು ಬದಲಾವಣೆಯ ಬಗ್ಗೆ ಹೇಳಲಿದ್ದೇವೆ, ಅದು ಬಹಳ ಮುಖ್ಯ. ಈ ಬದಲಾವಣೆಗಳು ದೇಹದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಸೂಚಿಸುತ್ತದೆ, ಅದನ್ನು ನಿರ್ಲಕ್ಷಿಸಬಾರದು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಉಗುರುಗಳ ಮೇಲೆ ಅರ್ಧ ಚಂದ್ರಉಗುರುಗಳು ಬೆರಳುಗಳಿಗೆ ರಕ್ಷಣೆ ನೀಡುತ್ತದೆ. ಉಗುರಿನ ಕೆಳಗೆ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಅದರ ರಕ್ಷಣೆ ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಉಗುರು ಬೆರಳುಗಳ ಸೂಕ್ಷ್ಮ ಚರ್ಮವನ್ನು ರಕ್ಷಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಉಗುರುಗಳು ಮತ್ತೊಬ್ಬರಿಗಿಂತ ವಿಭಿನ್ನವಾಗಿರುತ್ತವೆ. ಕೆಲವರು ಉಗುರುಗಳು ತುಂಬಾ ಗಟ್ಟಿಯಾಗಿದ್ದರೆ, ಮತ್ತೊಬ್ಬರ ಉಗುರುಗಳು ತುಂಬಾ ಮೃದುವಾಗಿರುತ್ತದೆ.
ಅನೇಕ ಜನರ ಉಗುರುಗಳು ಎಷ್ಟೇ ದೊಡ್ಡದಾಗಿ ಬೆಳೆಸಬೇಕು ಎಂದುಕೊಂಡರೂ,ಅವು ಬೇಗ ಮುರಿದು ಹೋಗುವಂತಿರುತ್ತವೆ. ಇದಲ್ಲದೆ, ಕೆಲವು ಜನರ ಉಗುರುಗಳ ಮೇಲೆ ಅರ್ಧ ಚಂದ್ರಾಕೃತಿ ಮೂಡಿರುತ್ತದೆ. ಉಗುರಿನ ಕೆಳಗೆ ರೂಪುಗೊಳ್ಳುವ ಈ ಅರ್ಧ ಚಂದ್ರನ ಬಗ್ಗೆ ಇಲ್ಲಿ ಒಂದಷ್ಟು ಮಾಹಿತಿ ಇದೆ. ಇದು ಆರೋಗ್ಯಕ್ಕೆ ಎಷ್ಟು ಮುಖ್ಯ? ತಿಳಿಯಿರಿ...
ಉಗುರಿನ ಮೇಲೆ ಮೂಡುವ ಅರ್ಧ ಚಂದ್ರಆರೋಗ್ಯವನ್ನು ಹೇಳುತ್ತದೆಮೊದಲನೆಯದಾಗಿ, ಕೈಯ ಉಗುರನ್ನು ಪರಿಶೀಲಿಸಿ ಮತ್ತು ಉಗುರಿನ ಬಿಳಿಯ ಅರ್ಧ ಚಂದ್ರಾಕೃತಿ ಮೂಡಿದೆಯೇ ಪರಿಶೀಲಿಸಿ. ಉಗುರಿನಲ್ಲಿ ಮೂಡಿದ ಈ ಅರ್ಧ ಚಂದ್ರಾಕೃತಿ ಆರೋಗ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತದೆ.
ಉಗುರಿನಲ್ಲಿ ಮೂಡಿದ ಅರ್ಧ ಚಂದ್ರ ಬಿಳಿ ಮತ್ತು ಸ್ಪಷ್ಟವಾಗಿದ್ದರೆ, ಸಂಪೂರ್ಣವಾಗಿ ಉತ್ತಮ ಮತ್ತು ಆರೋಗ್ಯವಂತರು ಎಂದರ್ಥ. ಸಾಮಾನ್ಯವಾಗಿ, ಹೆಬ್ಬೆರಳಿನ ಮೇಲೆ ಅರ್ಧ ಚಂದ್ರಾಕೃತಿ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಇತರ ಬೆರಳುಗಳ ಮೇಲೆ ಅಷ್ಟು ಸ್ಪಷ್ಟವಾಗಿ ಕಾಣುವುದಿಲ್ಲ. ಉಗುರಿನ ಮೇಲೆ ಕಾಣಿಸಿಕೊಳ್ಳುವ ಅರ್ಧ ಚಂದ್ರನನ್ನು ಲುನುಲಾ ಎಂದು ಕರೆಯಲಾಗುತ್ತದೆ.
ಲುನುಲಾ ಎಂದರೇನು?ಚರ್ಮಗಳ ಚೀಲದೊಳಗಿನಿಂದ ಉಗುರುಗಳು ಬೆಳೆಯುತ್ತವೆ. ಇದನ್ನು ಮ್ಯಾಟ್ರಿಕ್ಸ್ ಎಂದು ಕರೆಯುವರು. ಇವು ಹೊಸ ಕೋಶಗಳನ್ನು ತಯಾರಿಸುತ್ತದೆ. ನಂತರ ಅವುಗಳನ್ನು ಚರ್ಮದೊಟ್ಟಿಗೆ ತಳ್ಳಲಾಗುವುದು. ಲುನುಲಾ ಎನ್ನುವುದು ಮ್ಯಾಟ್ರಿಕ್ಸ್ನ ಗೋಚರ ಭಾಗವನ್ನು ಒಳಗೊಂಡಿರುತ್ತದೆ. ಇದು ವ್ಯಕ್ತಿಯ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ.
ಲುನುಲಾ ಕೊರತೆ ಎಂದರೆ ಏನು?ಯಾವ ವ್ಯಕ್ತಿಗೆ ಉಗುರುಗಳಲ್ಲಿ ಲುನುಲಾ ಕಂಡು ಬರಲಿಲ್ಲವೆಂದರೆ ಅದು ಚಿಂತಿಸುವ ವಿಷಯ. ವಾಸ್ತವವಾಗಿ, ದೇಹದಲ್ಲಿ ರಕ್ತದ ಕೊರತೆ ಇದ್ದರೆ ಲುನುಲಾ ಉಗುರುಗಳಲ್ಲಿ ಗೋಚರಿಸುವುದಿಲ್ಲ.
ವ್ಯಕ್ತಿಯ ಉಗುರಿನಲ್ಲಿ ಕಂಡುಬರುವ ಲುನುಲಾ ಬಿಳಿ ಬಣ್ಣಕ್ಕೆ ಬದಲಾಗಿ ಹಳದಿ ಅಥವಾ ನೀಲಿ ಬಣ್ಣದ್ದಾಗಿ ಕಾಣುತ್ತಿದ್ದರೆ, ಆ ವ್ಯಕ್ತಿ ಮಧುಮೇಹಕ್ಕೆ ಬಲಿಯಾಗುವ ಸಾಥ್ಯತೆ ಇರುತ್ತದೆ ಎಂದು ಹೇಳಲಾಗುತ್ತೆ.
ಇದು ಮಾತ್ರವಲ್ಲ, ಲುನುಲಾದ ಬಣ್ಣವು ಅನೇಕ ಜನರಲ್ಲಿ ಕೆಂಪು ಬಣ್ಣದಲ್ಲಿ ಕಂಡುಬರುತ್ತದೆ. ಅಂತಹ ಜನರಿಗೆ ಹೃದಯ ಸಂಬಂಧಿತ ಸಮಸ್ಯೆಗಳಿರಬಹುದು. ಹೀಗಾಗಿ ಲುನುಲಾ ಬಗ್ಗೆ ತಿಳಿದುಕೊಳ್ಳುವುದು ಬಹಳ ಇದೆ.
ಸದ್ಯ ಇಷ್ಟು ತಿಳಿದುಕೊಳ್ಳಿ ಲುನುಲಾ ಬಿಳಿ ಬಣ್ಣದಲ್ಲಿ ಇದ್ದರೆ ಆರೋಗ್ಯದಲ್ಲಿ ಸಮಸ್ಯೆ ಇಲ್ಲ. ಆದರೆ ಲುನುಲಾ ಬಿಳಿ ಬಣ್ಣ ಹೊರತು ಪಡಿಸಿ ಬೇರೆ ಬಣ್ಣದಲ್ಲಿದ್ದರೆ ವೈದ್ಯರನ್ನು ಭೇಟಿ ಮಾಡಬೇಕು.