ಸಾಮಾನ್ಯವಾಗಿ ಮಳೆಗಾಲದಲ್ಲಿ ಗಾಳಿ ಮಳೆಗೆ ಬಾಳೆ ಮರ ನೆಲಕ್ಕಚ್ಚುವುದು ಸಾಮಾನ್ಯ. ಈ ಸಂದರ್ಭದಲ್ಲಿ ಎಲೆ ಮತ್ತು ಬಾಳೆ ಕಾಯಿಯನ್ನು ತುಂಡು ಮಾಡಿ ಇಡುವಂತೆ, ಬಾಳೆ ಗಿಡದ ಮಧ್ಯ ಭಾಗವನ್ನು ತುಂಡು ಮಾಡಿ ಅಡುಗೆ ಮನೆಗೆ ತನ್ನಿ ಮತ್ತು ಅದನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಬಾಳೆ ಮರದ ಮೇಲೆ ಸೊನೆ ಇರುತ್ತದೆ ಅದನ್ನು ತಿನ್ನುವುದು ಹೇಗೆ ಎನ್ನುವುದು ಹಲವರಿಗೆ ಗೊಂದಲ ಇರಬಹುದು. ಆದರೆ ಬಾಳೆ ಮರವನ್ನು ಮಧ್ಯಕ್ಕೆ ಕತ್ತರಿಸಿ ಅದರ ಸುರುಳಿಗಳನ್ನು, ಒಳಗಿನ ಬಿಳಿ ಅಂಶ ಕಾಣುವವವರೆಗೆ ಬಿಡಿಸಬೇಕು. ಯಾವಾಗ ಬಿಳಿಯ ದಿಂಡು ಕಾಣುತ್ತದೋ, ಆಗ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಈ ರೀತಿಯ ಬಿಳಿ ಬಣ್ಣದ ಬಾಳೆ ದಿಂಡು ಆರೋಗ್ಯಕ್ಕೆ ಒಳ್ಳೆಯದು.
ಬಾಳೆ ದಿಂಡಿನ ಪಲ್ಯ:ಸಾಮಾನ್ಯವಾಗಿ ಬಾಳೆ ದಿಂಡಿನ ಪಲ್ಯವನ್ನು ವರ್ಷಕ್ಕೆ ಎರಡು ಬಾರಿಯಾದರು ತಿನ್ನಲೇ ಬೇಕು ಎನ್ನುವ ಮಾತು ಇದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡುವ ಪಲ್ಯ. ಪಲ್ಯವನ್ನು ಮಾಡಿ ತಿನ್ನುವುದರಿಂದ ಹೊಟ್ಟೆಗೆತುಂಬಾ ಒಳಿತು.
ಉಗುರು ತಿನ್ನುವ ಅಭ್ಯಾಸ ಇರುವವರು ಇದನ್ನು ತಿನ್ನಲೇ ಬೇಕು ಮತ್ತು ಹೊಟ್ಟೆ ನೋವು, ಮಲಬದ್ಧತೆ, ಹೊಟ್ಟೆಯಲ್ಲಿನ ಕಲ್ಮಶ ಅಥವಾ ಹೊಟ್ಟೆಯಲ್ಲಿ ಕೂದಲು ಸೇರಿಕೊಂಡಿದ್ದರೆ ಇದು ಎಲ್ಲವನ್ನು ಶುದ್ಧ ಮಾಡುತ್ತದೆ.
ಇನ್ನು ಬಾಳೆ ನಾರಿನಾಂಶವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಕೂಡ ಸಹಕಾರಿಯಾಗಿದೆ. ಆ ಮೂಲಕ ಹೊಟ್ಟೆ ಉಬ್ಬರಿಸುವುದು ಸೇರಿ ಇನ್ನಿತರ ಕಾಯಿಲೆಯಿಂದ ನಮ್ಮನ್ನು ರಕ್ಷಿಸಲು ಬಾಳೆ ದಿಂಡು ಸಹಕಾರಿ.
ಬಾಳೆ ದಿಂಡಿನ ಜ್ಯೂಸ್:ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ.
ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಷಿಯಮ್ ಅಂಶ ರಾಮಬಾಣ. ಬಾಳೆ ದಿಂಡನ್ನು ಬಿಡಿಸಿ ರುಬ್ಬಿ, ಅದರ ರಸವನ್ನು ತೆಗೆದು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಮಾಯವಾಗುತ್ತದೆ.
ರಕ್ತಹೀನತೆಯನ್ನು ಕೂಡ ಇದು ದೂರ ಮಾಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಟಮಿನ್ ಬಿ 6 ಕೂಡ ಹೇರಳವಾಗಿದೆ. ಅಲ್ಲದೆ ಇದರಲ್ಲಿ ಫೈಬರ್ ಅಂಶವು ಕೂಡ ಇದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆಕೊರೊನಾ ಎರಡನೇ ಅಲೆಯ ಈ ಕಾಲಘಟ್ಟದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ. ಇದಕ್ಕೆ ಬಾಳೆ ದಿಂಡು ಪುಷ್ಠಿ ನೀಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ರೋಗ ನಿರೋಧಕ ಶಕ್ತಿ ಇದೆ.
ಬಾಳೆ ದಿಂಡನ್ನು ಸೇವಿಸುವುದರಿಂದ ತೂಕವನ್ನು ಸಮತೋಲನಗೊಳಿಸಬಹುದು. ಇದು ಮೈಯಲ್ಲಿನ ಕೊಬ್ಬಿನಾಂಶವನ್ನು ದೂರ ಮಾಡಿ ಆರೋಗ್ಯಯುಕ್ತ ಜೀವನ ನಡೆಸಲು ಸಹಕಾರಿ. 100 ಗ್ರಾಮ್ ಬಾಳೆ ದಿಂಡಿನಲ್ಲಿ 13 ಕ್ಯಾಲೋರಿ, 2 ಗ್ರಾಮಿನಷ್ಟು ಕಾರ್ಬೋಹೈಡ್ರೇಟ್ಸ್, ಒಂದು ಗ್ರಾಮಿನಷ್ಟು ಡಯೇಟರಿ ಫೈಬರ್ ಇರುತ್ತದೆ. ಇದು ಚರ್ಮ ಮತ್ತು ಕೂದಲಿಗೆ ಕೂಡ ಒಳ್ಳೆಯದು.