ಅರೋಗ್ಯ ವೃದ್ಧಿಗೆ ಯಾವ ತೈಲದಿಂದ ನಾಭಿ ಮಸಾಜ್ ಮಾಡೋದು ಉತ್ತಮ ?

First Published Jul 3, 2021, 1:58 PM IST

ನವಜಾತ ಶಿಶುವಿಗೆ ಎರಡು ಮೂರು ವರ್ಷಗಳ ತನಕ ನಿತ್ಯ ತೈಲದ ಮಸಾಜ್ ಮಾಡಿ ಹೊಕ್ಕಳಿಗೆ ಕೆಲವು ತೊಟ್ಟು ಎಣ್ಣೆ ಹಾಕಿ, ಕ್ಷಣಕಾಲ ಬಿಟ್ಟು ಆ ಮೇಲೆ ಮಗುವಿಗೆ ಸ್ನಾನ ಮಾಡಿಸುವ ರೂಢಿ ಈಗಲೂ ನಮ್ಮಲ್ಲಿ ಕಾಣುತ್ತೇವೆ. ಇದರಿಂದ ಶಿಶುವಿನ ದೇಹ ಕೋಮಲವಾಗಿ ಇರುವುದಲ್ಲದೆ ನಾಭಿ ಮೂಲಕ ಹೀರಿಕೊಂಡ ಎಣ್ಣೆ ಪೂರ್ಣ ಶರೀರದೊಳಗೆ ತಲುಪಿ ಮಗು ಆರೋಗ್ಯಕರವಾಗಿರುತ್ತದೆ.ಅದಲ್ಲದೆ ಶಿಶುವಿಗೆ ಹೊಟ್ಟೆ ಉಬ್ಬರಿಸಿ ನೋವು ಅನುಭವಿಸಿದರೆ, ಮಲವಿಸರ್ಜನೆಗೆ ತೊಂದರೆ ಇದ್ದರೆ ನಮ್ಮ ಹಿರಿಯರು ಹಿಂಗಿನ ನೀರನ್ನು ಹೊಕ್ಕಳಿನ ಸುತ್ತಲೂ ಉಜ್ಜುವುದು ಅಥವಾ ಓಮ ಕಾಳನ್ನು ಉಗುರು ಬೆಚ್ಚಗೆ ಮಾಡಿ ತೆಳು ಬಟ್ಟೆಯಲ್ಲಿ ಕಟ್ಟಿ ನಾಭಿ ಸುತ್ತಾ ಮಸಾಜ್ ಮಾಡವುದನ್ನು ನೋಡುತ್ತೇವೆ. ಹೀಗೆ ಮಾಡುವುದರಿಂದ ಶಿಶುವಿನ ಹೊಟ್ಟೆ ನೋವು ಶಮನವಾಗುತ್ತದೆ.

ಹಿಂದಿನಿಂದಲೂ 'ಆಯುರ್ವೇದ' ವೈದ್ಯಕೀಯ ಪದ್ಧತಿ ಮತ್ತು 'ಪ್ರಕೃತಿ ಚಿಕಿತ್ಸೆ' ಪದ್ದತಿ ಎರಡರಲ್ಲೂ ನಾಭಿಗೆ ಎಣ್ಣೆ ಹಾಕಿದಲ್ಲಿ ಹಲವು ಆರೋಗ್ಯ ದೋಷಗಳಿಂದ ಮುಕ್ತರಾಗಬಹುದು ಎಂಬ ನಂಬಿಕೆ ಇದೆ. ಹೊಕ್ಕುಳಿಗೆಎಣ್ಣೆಯನ್ನು ಹಾಕುವುದರಿಂದ ನಮ್ಮ ಚರ್ಮದ ಆರೈಕೆಗೆ, ಕೂದಲಿನ ಆರೈಕೆ ಮತ್ತು ಮುಟ್ಟಿನ ನೋವು, ಕೀಲು ನೋವು ಮತ್ತು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರಸಿಗುವುದೆಂದು ಹಿಂದಿನವರ ಹೇಳಿಕೆ. ಹಾಗಾಗಿ ನಾಭಿ ಚಿಕಿತ್ಸೆಯು ಇತ್ತೀಚೆಗೆ ಬಹಳ ವಿಶೇಷತೆಯನ್ನು ಪಡೆದಿದೆ.
undefined
ಹೊಕ್ಕುಳಕ್ಕೆ ತೈಲ ಚಿಕಿತ್ಸೆಯಿಂದ ತ್ವಚೆಯ ಆರೈಕೆಯನ್ನು ಮಾಡಿಕೊಳ್ಳುವ ವಿಧಾನ ತಿಳಿಯೋಣ.
undefined
ಎಳ್ಳೆಣ್ಣೆಎಣ್ಣೆಯುಕ್ತ ತ್ವಚೆಯವರಿಗೆ ಹದಿ ಹರೆಯದಲ್ಲಿ ಮೊಡವೆಗಳ ತೊಂದರೆ ಅಧಿಕವಾಗಿರುತ್ತದೆ. ಯಾಕೆಂದರೆ ಇಂತಹ ಚರ್ಮ ಮೇದೋಜೀರಕ ಎಂಬ ಗ್ರಂಥಿಯನ್ನು ಅತಿಯಾಗಿ ಸ್ರವಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಎಣ್ಣೆಯನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಎಣ್ಣೆಯುಕ್ತ ಚರ್ಮ ಉಳ್ಳವರು ತಮ್ಮ ತ್ವಚೆಯ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿವಹಿಸಬೇಕು. ಈ ತ್ವಚೆಯಲ್ಲಿ ಎಣ್ಣೆಯಂಶ ಅತಿಯಾಗಿ ಕಾಣಿಸಿಕೊಳ್ಳುವುದಲ್ಲದೆ ತ್ವಚೆಯು ಸದಾ ಜಿಡ್ಡು ಜಿಡ್ಡಾಗಿದ್ದು ಹೊರಗಿನ ಧೂಳು ಪ್ರದೂಷಣಗಳಿಗೆ ಬಹು ಬೇಗ ಪ್ರತಿಕ್ರಿಯಿಸುವುದರಿಂದಾಗಿ ಮುಖದಲ್ಲಿ ಮೊಡವೆ ಮೂಡುತ್ತದೆ.
undefined
ಇಂತಹ ಎಣ್ಣೆಯುಕ್ತ ತ್ವಚೆಯುಳ್ಳವರು ಸ್ನಾನದ ಬಳಿಕ ಮತ್ತು ಮಲಗುವ ಮುನ್ನ ತಮ್ಮ ನಾಭಿಗೆ ಎಳ್ಳೆಣ್ಣೆಯ ನಾಲ್ಕು ಹನಿಯನ್ನು ಹಾಕಿ ಹತ್ತು ಹದಿನೈದು ನಿಮಿಷ ಬಿಡುವುದರಿಂದ ಮುಖದಲ್ಲಿರುವ ಮೊಡವೆಗಳ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದಾಗಿ ತ್ವಚೆಯು ಅತಿಯಾಗಿ ಎಣ್ಣೆಯಾಂಶ ಬಿಡುಗಡೆ ಮಾಡುವುದನ್ನು ಕ್ರಮೇಣವಾಗಿ ಒಳಗಿನಿಂದಲೇ ನಿಯಂತ್ರಿಸುವುದುರಿಂದಾಗಿ ಕ್ರಮೇಣ ಜಿಡ್ಡಿರದ ಸಾಮಾನ್ಯ ತ್ವಚೆಯಾಗಿ ಮಾರ್ಪಾಡಾಗುತ್ತದೆ.
undefined
ಬಾದಾಮಿ ಎಣ್ಣೆಈ ಎಣ್ಣೆಯು ವಿಟಮಿನ್ ಇ ಅಂದರೆ ನೈಸರ್ಗಿಕವಾಗಿ ಎಣ್ಣೆಯುಕ್ತ. ಒಣ ತ್ವಚೆ ಅಥವಾ ಶುಷ್ಕ ತ್ವಚೆಯಲ್ಲಿ ಎಣ್ಣೆಯಂಶ ಕಡಿಮೆ ಇದ್ದು ಸದಾ ಒಣಗಿದಂತಿರುತ್ತದೆ. ಇಂತಹ ಚರ್ಮವು ವಯಸ್ಸಿಗಿಂತಲೂ ಬೇಗನೆ ಸುಕ್ಕುಗಟ್ಟಿ ಹೊಳಪಿಲ್ಲದೆ ಕಳೆಗುಂದಿದಂತೆ ಕಾಣುತ್ತದೆ. ಒಣ ಚರ್ಮವನ್ನು ಕಾಂತಿಯುತವಾಗಿ ಮತ್ತು ಆಧ್ರ೯ಕವಾಗಿ ಇಡಲು ಹೊಕ್ಕುಳಕ್ಕೆ ಬಾದಾಮಿ ಎಣ್ಣೆ ಬಳಸಬೇಕು. ಬಾದಾಮಿ ಎಣ್ಣೆಯನ್ನು ನಾಭಿಗೆ ಹಾಕುವುದರಿಂದ ಇದು ದೇಹದ ಸಂಪೂರ್ಣ ತ್ವಚೆಗೆ ಪೋಷಣೆ ಕೊಡುವುದಲ್ಲದೆ ತ್ವಚೆಗೆ ನೈಸರ್ಗಿಕವಾಗಿ ಹೊಳಪು ಕೊಡುತ್ತದೆ. ಇದರಿಂದಾಗಿ ವಯಸ್ಸಿಗೆ ಪೂರ್ವವಾಗಿ ಬರುವ ಮುಪ್ಪಿನ ಲಕ್ಷಣಗಳನ್ನು ತಡೆಯಬಹುದು.
undefined
ಸಾಸಿವೆ ಎಣ್ಣೆಹೆಚ್ಚಿನವರಲ್ಲಿ ತಮ್ಮ ತ್ವಚೆ complexion ಅಂದರೆ ಬಣ್ಣದ ಬಗ್ಗೆ ಕೀಳರಿಮೆ ಇರುತ್ತೆ . ಅಂತವರು ತ್ವಚೆಯ ಬಣ್ಣದ ಮಟ್ಟ ತಿಳಿ ಮಾಡಲು ಹೊಕ್ಕುಳಕ್ಕೆ ಸಾಸಿವೆ ಎಣ್ಣೆಯನ್ನು ಉಪಯೋಗಿಸಿದ್ರೆ ಉತ್ತಮ. ಸಾಸಿವೆ ಎಣ್ಣೆಯಲ್ಲಿ ತ್ವಚೆಯ ತೇಜಸ್ಸನ್ನು ಹೆಚ್ಚಿಸುವ ಗುಣವಿದೆ. ಹಾಗೆಂದು ಇದನ್ನು ಮುಖಕ್ಕೆ ನೇರವಾಗಿ ಹಚ್ಚಿಕೊಂಡರೆ ಮುಖ ಇನ್ನು ಹೆಚ್ಚು ಕಪ್ಪಾಗುವ ಸಂಭವ ಇರುತ್ತದೆ.
undefined
ನಾಭಿಗೆ ಸಾಸಿವೆ ಎಣ್ಣೆಹಾಕುವುದರಿಂದ ಇದು ದೇಹದ ಒಳಗಿಂದಲೇ ಆರೈಕೆ ಮಾಡುವುದು. ಸಾಸಿವೆ ಎಣ್ಣೆ ದಣಿವು, ಕಳಪೆ ಸ್ಮರಣೆ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. ಕಣ್ಣಿನ ಸೋಂಕು ಮತ್ತು ಕಣ್ಣಿನ ಕಾಯಿಲೆ ಗುಣಪಡಿಸುತ್ತದೆ. ತಲೆನೋವು ಮತ್ತು ಮೈಗ್ರೇನ್ ಕಡಿಮೆ ಮಾಡುತ್ತದೆ.
undefined
ಸೂರ್ಯಕಾಂತಿ ಎಣ್ಣೆಕಾಂತಿಯುತವಾದ ತ್ವಚೆಯ ಕಾಮನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಇಂತಹ ತ್ವಚೆಯನ್ನು ಪಡೆಯಲು ಸೂರ್ಯಕಾಂತಿ ಎಣ್ಣೆಯ 2, 3 ಹನಿಯನ್ನು ಹೊಕ್ಕುಳಿಗೆ ಬಿಡಬೇಕು. ಈ ಎಣ್ಣೆಯು ನಮ್ಮ ತ್ವಚೆಯ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.
undefined
ತೆಂಗಿನ ಎಣ್ಣೆಈ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುವುದು. ಇದು ಕೂದಲ ಬೆಳವಣಿಗೆಗೆ ಅತಿ ಮುಖ್ಯ. ಇದರಿಂದ ಚರ್ಮವು ಮೃದುವಾಗಿ ಇರುವುದು. ಮಹಿಳೆಯರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಗೆ ಇದು ಉತ್ತಮವೆಂದು ಹೇಳಲಾಗುತ್ತದೆ. ತಲೆ ಹೊಟ್ಟು ಮತ್ತು ಒಣ ನೆತ್ತಿಯ ತೊಂದರೆ ನಿವಾರಿಸುತ್ತದೆ.
undefined
ಬೇವಿನ ಎಣ್ಣೆಈ ಎಣ್ಣೆಯು ಮುಖದ ಗುಳ್ಳೆಗಳನ್ನು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ತುರಿಕೆ ಮತ್ತು ದದ್ದುಗಳ ಮೇಲೆ ಪರಿಣಾಮಕಾರಿ.
undefined
ಹಸುವಿನ ತುಪ್ಪಈ ಎಣ್ಣೆಯು ನಯವಾದ ಚರ್ಮಕ್ಕಾಗಿ ಮತ್ತು ನವಜಾತ ಶಿಶುಗಳ ಮೂಳೆಗಳನ್ನು ಬಲಪಡಿಸಲು ಉಪಯೋಗಕಾರಿ.
undefined
ಕ್ಯಾಸ್ಟರ್ ಆಯಿಲ್ಮೊಣಕಾಲು ನೋವು ಮತ್ತು ಇತರ ಕೀಲು ನೋವುಗಳಿಗಾಗಿ, ಉದ್ದನೆಯ ರೆಪ್ಪೆಗೂದಲಿಗೆ, ಉದ್ದನೆಯ ದಟ್ಟ ಕೂದಲಿಗಾಗಿ, ಹೆಚ್ಚಿನ ರೀತಿಯ ಹೊಟ್ಟೆಯ ಸಮಸ್ಯೆಗಳ ನಿವಾರಣೆಗೆ ಈ ಎಣ್ಣೆಯು ಉಪಯುಕ್ತ.
undefined
ಆಲೀವ್ ಎಣ್ಣೆಈ ಎಣ್ಣೆ ಹಾಕುವುದರಿಂದ ಮುಟ್ಟಿನ ನೋವು ಮತ್ತು ಸೆಳೆತಕ್ಕೆ ಸಹಾಯ ಮಾಡುತ್ತದೆ. ಮಕ್ಕಳ ಮೂಳೆ ಮತ್ತು ಸ್ನಾಯುಗಳನ್ನು ಬಲಪಡಿಸುವುದು. ಒಳ್ಳೆಯ ನಿದ್ರೆಗಾಗಿ ಸಹಾಯ ಮಾಡುತ್ತದೆ. ಹಸಿವಿನ ಕೊರತೆಯ ನಿವಾರಿಸುವುದು. ಮಲಬದ್ಧತೆಗೆ ಉತ್ತಮ.
undefined
ಇಲ್ಲಿ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶವೆಂದರೆ ಹೊಕ್ಕಳಕ್ಕೆ ಉಪಯೋಗಿಸಲು ಅತಿ ಶುದ್ಧವಾದ ನೈಸರ್ಗಿಕವಾದ ಎಣ್ಣೆಯನ್ನೇ ಬಳಸಬೇಕು. ಕಲಬೆರಕೆಎಣ್ಣೆಯನ್ನು ಬಳಸದಿರಿ. ಎಣ್ಣೆಯ ಮೂಲ ಗುಣ ಸಕ್ರೀಯಗೊಳ್ಳಲು ಬಳಸುವ ಮುನ್ನ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಹೀಗೆ ಉಗುರು ಬೆಚ್ಚಗಿನ ಎಣ್ಣೆಯನ್ನು ರಾತ್ರಿಯಲ್ಲಿ ಮಲಗುವ ಮುನ್ನ ಹತ್ತಿಯಲ್ಲಿ ಅದ್ದಿ 2-3 ಹನಿ ಹೊಕಳಕ್ಕೆ ಬಿಡಬೇಕು. 15-20 ನಿಮಿಷದ ಬಳಿಕ ವೃತ್ತಾಕಾರದ ಪ್ರದಕ್ಷಿಣಾಕಾರದ ಚಲನೆಯಲ್ಲಿ ನಾಭಿಸುತ್ತಮಸಾಜ್ ಮಾಡಿಕೊಳ್ಳಬೇಕು. ಹಾಗೆಯೇ ನಿತ್ಯ ಸ್ನಾನ ಮಾಡುವಾಗ ಹೊಕ್ಕುಳವನ್ನು ತೊಳೆದು ಶುಚಿಯಾಗಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಸೊಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗೆ ಮಾಡಿ ನೋಡಿ ತಮ್ಮ ತ್ವಚೆಯಲ್ಲಿ ಆರೋಗ್ಯದಲ್ಲಿ ಆಗುವ ವ್ಯತ್ಯಾಸವನ್ನು ತಾವಾಗಿಯೇ ಗಮನಿಸಿ ಆನಂದಿಸಿ.
undefined
click me!