ಖರ್ಜೂರ ತಿನ್ನಲು ಸೂಕ್ತ ಸಮಯ ಯಾವುದು?

First Published Mar 11, 2021, 3:27 PM IST

ಜನರು ಫಿಟ್ ಆ್ಯಂಡ್ ಹೆಲ್ದಿಯಾಗಿರಲು ಹಲವು ವಿಷಯಗಳನ್ನು ಪ್ರಯತ್ನಿಸುತ್ತಾರೆ, ಆದರೆ ಪ್ರತಿಯೊಂದೂ ದೇಹದ ಕಾರ್ಯಗಳು ವಿಭಿನ್ನವಾಗಿರುತ್ತವೆ ಮತ್ತು ಒಬ್ಬ ವ್ಯಕ್ತಿಗೆ ಯಾವುದು ಪರಿಣಾಮಕಾರಿಯಾಗಿರುತ್ತದೆಯೋ, ಅದು ಇನ್ನೊಬ್ಬರಿಗೆ ಪರಿಣಾಮಕಾರಿ ಆಗದೇ ಇರಬಹುದು. ಉತ್ತಮ ಆರೋಗ್ಯಕ್ಕಾಗಿ ಹಲವರು ಖರ್ಜೂರ ತಿನ್ನುತ್ತಾರೆ. ಬೇರೆ ಬೇರೆ ಜನರಿಗೆ ವಿವಿಧ ಬೆಳಗಿನ ಆಚರಣೆಗಳು ಇರುತ್ತವೆ. ಕೆಲವರು ಖರ್ಜೂರವನ್ನು ನೆನೆಸಿ, ಕೆಲವರು ಹಸಿಯಾಗಿಯೇ ತಿನ್ನುತ್ತಾರೆ, ಆದರೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನುವುದು ಉತ್ತಮವೇ? ತಿಳಿಯಲು ಮುಂದೆ ಓದಿ...

ಖರ್ಜೂರ ಏಕೆ ತಿನ್ನಬೇಕು?ಖರ್ಜೂರ ರುಚಿಕರವಾಗಿದ್ದು ನಮ್ಮಲ್ಲಿ ಹೆಚ್ಚಿನವರು ಸಿಹಿ ರುಚಿಯನ್ನು ಸವಿಯುತ್ತಾರೆ. ವಿಶಿಷ್ಟ ರುಚಿ ಮತ್ತು ವಿನ್ಯಾಸವನ್ನು ಹೊರತುಪಡಿಸಿ, ಖರ್ಜೂರದಲ್ಲಿ ಕಬ್ಬಿಣ, ಫೋಲೇಟ್, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಶಿಯಂ, ವಿಟಮಿನ್ ಬಿ6 ಇವೆ.
undefined
ಖರ್ಜೂರವನ್ನು ತಿನ್ನುವುದಕ್ಕೆ ಸರಿಯಾದ ಸಮಯ ಯಾವುದು?ನಾವು ಯಾವಾಗ ಸೇವಿಸಿದರೂ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದೆ, ಆದರೆ ಒಬ್ಬ ವ್ಯಕ್ತಿ ತಮ್ಮ ಆಹಾರ ಸಮಯದ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬುವುದು ಗೊತ್ತಾ?
undefined
ಖರ್ಜೂರದ ಸೇವನೆಸಂದರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಉಬ್ಬರ ಉಂಟಾಗಬಹುದು. ಆದರೆ ಊಟದ ನಂತರ ಖರ್ಜೂರವನ್ನು ತಿನ್ನುವುದೂ ಸಹ ತೊಂದರೆಯಾಗಬಹುದು, ವಿಶೇಷವಾಗಿ ಜೀರ್ಣಕ್ರಿಯೆಗೆ ತೊಂದರೆಯನ್ನು ಉಂಟುಮಾಡಬಹುದು.
undefined
ಏಕೆಂದರೆ ಖರ್ಜೂರದಲ್ಲಿ ನಾರಿನಂಶ ಅಧಿಕ, ಇದು ಬೇಗನೆ ಹೊಟ್ಟೆ ತುಂಬಿದಂತೆ ಮಾಡುತ್ತದೆ ಆದರೆ ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಇದು ಅಂತಿಮವಾಗಿ ಹೊಟ್ಟೆಯನ್ನು ಕರಗಿಸುವುದ್ ಮಾತ್ರ ಸುಳ್ಳಲ್ಲ.
undefined
ಖರ್ಜೂರದಿಂದ ಆಹಾರದ ಅಲರ್ಜಿಯನ್ನು ಹೊಂದಿದ್ದರೆ ಅಥವಾ ಅತಿಸಾರದಿಂದ ಬಳಲುತ್ತಿದ್ದರೆ ಸೇವಿಸಬಾರದು. ಏಕೆಂದರೆ ಅದರಲ್ಲಿ ಸೊರ್ಬಿಟಾಲ್ ಎಂಬ ಸಕ್ಕರೆ ಯಥೇಚ್ಛವಾಗಿದ್ದು, ಇದು ಅಸೌಖ್ಯವನ್ನು ಹೆಚ್ಚಿಸುತ್ತದೆ ಮತ್ತು ಅತಿಯಾದ ಮಲವಿಸರ್ಜನೆಗೆ ಕಾರಣವಾಗುತ್ತದೆ.
undefined
ಈ ಕೆಲವು ಪರಿಸ್ಥಿತಿಗಳ ಹೊರತಾಗಿ, ಖರ್ಜೂರವನ್ನು ಒಂದು ತಿಂಡಿಯಾಗಿ ಅಥವಾ ದಿನದ ಯಾವುದೇ ಸಮಯದಲ್ಲಿ, ಪರಿಣಾಮಗಳ ಬಗ್ಗೆ ಚಿಂತಿಸದೇ ತಿನ್ನಬಹುದು.
undefined
ಖರ್ಜೂರ ತಿನ್ನುವುದರಿಂದ ಸಿಗುವ ಆರೋಗ್ಯ ಲಾಭಗಳು?ಖರ್ಜೂರದಲ್ಲಿ ಫ್ಲೇವನಾಯ್ಡ್, ಕ್ಯಾರೋಟಿನಾಯ್ಡ್, ಫಿನಾಲಿಕ್ ಆಮ್ಲಗಳಂತಹ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಆಲ್ಜೈಮರ್, ಹಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟುತ್ತದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮಧುಮೇಹ ಮತ್ತು ಇತರೆ ದೀರ್ಘಕಾಲೀನ ಕಾಯಿಲೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
undefined
ಪ್ರತಿರಕ್ಷಣಾ ಶಕ್ತಿಯನ್ನು ಬಲಪಡಿಸಿ, ಮೆದುಳು ಮತ್ತು ಹೃದಯದ ಕಾರ್ಯಚಟುವಟಿಕೆಯನ್ನು ಸುಧಾರಿಸುವಜೊತೆಗೆ, ಪ್ರತಿದಿನ ಖರ್ಜೂರವನ್ನು ತಿನ್ನುವ ಮೂಲಕ ಮೂಳೆಗಳ ಆರೋಗ್ಯವೂ ಅದ್ಭುತವಾಗಿರುತ್ತದೆ.
undefined
ಕೊನೆಯದಾಗಿ, ಆರೋಗ್ಯಕರ ನಾರುಗಳ ಉಪಸ್ಥಿತಿಯು ಮಲಬದ್ಧತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕ ನಷ್ಟವನ್ನು ಉತ್ತೇಜಿಸುತ್ತದೆ.
undefined
ಖರ್ಜೂರವನ್ನು ಬೆಳಗ್ಗೆ ಏಕೆ ತಿನ್ನಬೇಕು?ಬೆಳಗ್ಗೆ ಬೇಗ ಖರ್ಜೂರ ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಶಕ್ತಿ ವೃದ್ಧಿಯಾಗುತ್ತದೆ. ಇದಲ್ಲದೆ, ಇದನ್ನು ಬೆಳಗ್ಗೆ ಸೇವಿಸುವುದರಿಂದ ಕರುಳಿನ ಹುಳುಗಳನ್ನು ಕೊಲ್ಲಲು ಸಹಾಯಮಾಡುತ್ತದೆ, ಖರ್ಜೂರ ಪ್ರಮುಖ ಅಂಗಗಳನ್ನು ಶುದ್ಧೀಕರಿಸುತ್ತದೆ ಮತ್ತು ಹೃದಯ ಮತ್ತು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.
undefined
ಆಂಟಿ ಆಕ್ಸಿಡೆಂಟುಗಳ ಉಪಸ್ಥಿತಿಯು ಚರ್ಮ ಮತ್ತು ಕೂದಲಿಗೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಅಧ್ಯಯನಗಳ ಪ್ರಕಾರ ಖರ್ಜೂರ ಸೇವನೆಯು ಶಕ್ತಿಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕಾಮಪ್ರಚೋದಕವಾಗಿ ಕೆಲಸ ಮಾಡುತ್ತದೆ.
undefined
click me!