ಶುಂಠಿ ಸಿಪ್ಪೆಯನ್ನು ವೇಸ್ಟ್ ಎಂದು ಎಸೆಯುವ ಮುನ್ನ ಹೀಗೂ ಮಾಡ್ಬಹುದು ನೋಡಿ

First Published | Mar 11, 2021, 12:58 PM IST

ಶುಂಠಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪೊಟ್ಯಾಷಿಯಂ,ಕಬ್ಬಿಣ, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶುಂಠಿ ಸಿಪ್ಪೆಯನ್ನು ತೆಗೆದು ಬಿಸಾಡಬೇಡಿ. ಶುಂಠಿ ಸಿಪ್ಪೆಯಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಕೆಮ್ಮಿಗೆ ಪರಿಣಾಮಕಾರಿಶುಂಠಿಯು ಕೆಮ್ಮನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿ. ಇದಕ್ಕೆ ಶುಂಠಿಯ ಸಿಪ್ಪೆಯನ್ನು ಸಂಗ್ರಹಿಸಿ, ಅದನ್ನು ಮೊದಲ ಬಿಸಿಲಲ್ಲಿ ಒಣಗಿಸಿ ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ.
undefined
ಕೆಮ್ಮು ಸಮಸ್ಯೆ ಉಂಟಾದಾಗಲೆಲ್ಲ ಶುಂಠಿ ಪುಡಿ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಬಿಸಿ ನೀರಿನಲ್ಲಿ ಸೇವಿಸಿ. ಕೆಮ್ಮುವಿಕೆಯಿಂದ ತಕ್ಷಣ ನೆಮ್ಮದಿ ಸಿಗುತ್ತದೆ.
undefined

Latest Videos


ತರಕಾರಿಯ ಸುವಾಸನೆಗಾಗಿಶುಂಠಿಯ ಸಿಪ್ಪೆಯನ್ನು ಬಳಸಿ ರುಚಿಕರವಾದ ತರಕಾರಿಗಳ ಅಡುಗೆ ತಯಾರಿಮಾಡಬಹುದು. ಹೂಕೋಸು, ಎಲೆಕೋಸು ಮುಂತಾದ ತರಕಾರಿಗಳನ್ನು ಹಬೆಯಲ್ಲಿ ಬೇಯಿಸಿಕೊಳ್ಳುವ ಮೊದಲು ಶುಂಠಿಯ ಸಿಪ್ಪೆಯನ್ನು ಸೇರಿಸಿಕೊಳ್ಳಬಹುದು.
undefined
ತರಕಾರಿ ಜೊತೆ ಶುಂಠಿ ಸಿಪ್ಪೆ ಹಾಕುವುದರಿಂದ ತರಕಾರಿರುಚಿಯೊಂದಿಗೆ ಸುವಾಸನೆಸಹ ಹೊಂದಿರಲಿದೆ. ಇದು ಆರೋಗ್ಯಕ್ಕೂ ಉತ್ತಮವಾಗಿದೆ.
undefined
ಶುಂಠಿ ಸಿಪ್ಪೆ ಚಹಾಶುಂಠಿ ಚಹಾವನ್ನು ಹೆಚ್ಚಿನವರು ಕುಡಿಯಲು ಇಷ್ಟಪಡುತ್ತಾರೆ. ಇದರಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ಸ್ಗುಣರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿಯ ಸಿಪ್ಪೆಯನ್ನು ತೊಳೆದು ನೀರಿನಲ್ಲಿ ಕುದಿಸಿ ನಂತರ ಟೀ ಕುಡಿಯಿರಿ.ಇದು ಆರೋಗ್ಯಕ್ಕೂ ಸಹ ಉತ್ತಮವಾಗಿದೆ.
undefined
ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆಶುಂಠಿಸಿಪ್ಪೆಯು ಹೊಟ್ಟೆಯ ತೊಂದರೆಗಳನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಶುಂಠಿಯ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಹೊಟ್ಟೆ ನೋವು ಬರುವುದಿಲ್ಲ.
undefined
ಸೂಪ್‌ಗಳಲ್ಲಿ ಬಳಸಿಶುಂಠಿಸಿಪ್ಪೆಯನ್ನು ಸೂಪ್‌ಗಳಲ್ಲಿ ಬಳಸಬಹುದು. ಇದರಿಂದ ಸೂಪ್‌ನ ರುಚಿ ದುಪ್ಪಟ್ಟಾಗುತ್ತದೆ. ತರಕಾರಿಗಳನ್ನು ಶುಂಠಿಸಿಪ್ಪೆಯೊಂದಿಗೆ ಕುದಿಸಿ, ನಂತರ ಸೂಪ್‌ನೊಂದಿಗೆ ಕುಡಿಯಿರಿ.
undefined
click me!