ಹಣ್ಣು ತಿನ್ನಲು ಬೆಸ್ಟ್ ಟೈಮ್‌ ಯಾವುದು: ಊಟಕ್ಕೆ ಮೊದಲಾ ಅಥವಾ ಆಮೇಲಾ?

Suvarna News   | Asianet News
Published : Sep 29, 2020, 06:13 PM IST

ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಪ್ರತಿದಿನ ಸೇವಿಸುವುದು ಅವಶ್ಯಕ ಎಂಬ ವಿಷಯ ಎಲ್ಲರಿಗೂ ಗೊತ್ತು ಬಿಡಿ. ಆದರೆ ಹಣ್ಣುಗಳನ್ನು ಯಾವಾಗ ತಿನ್ನಬೇಕು? ಊಟದ ನಂತರ ಅಥವಾ ಊಟಕ್ಕೆ ಮೊದಲಾ ಎನ್ನುವುದು ಗೊಂದಲದ ವಿಷಯ. ಕೆಲವು ಸ್ಟಡಿಗಳು ಊಟಕ್ಕೆ ಮೊದಲು ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತವೆ. ಇನ್ನೂ ಕೆಲವು ಅದಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿವೆ. ಊಟದ ಸಮಯದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ತಟ್ಟೆಯ ಅರ್ಧ ಭಾಗದಷ್ಟು ಇರಬೇಕು ಎಂದು ಯುನೈಟೆಡ್ ಸ್ಟೇಟ್ಸ್ ಆಗ್ರಿಕಲ್ಚರ್‌ ಡಿಪಾರ್ಟ್‌ಮೆಂಟ್‌  ಹೇಳುತ್ತದೆ.  

PREV
115
ಹಣ್ಣು ತಿನ್ನಲು ಬೆಸ್ಟ್ ಟೈಮ್‌ ಯಾವುದು: ಊಟಕ್ಕೆ ಮೊದಲಾ ಅಥವಾ ಆಮೇಲಾ?

ದಿನನಿತ್ಯದ ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಮುಖ್ಯ ಎಂದು ಹೆಚ್ಚಿನ ಆರೋಗ್ಯ ತಜ್ಞರು ಹೇಳುತ್ತಾರೆ. ಅವು ಆರೋಗ್ಯಕರ ದೇಹಕ್ಕೆ ಬೇಕಾಗುವ ಅಗತ್ಯ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳ ಮೂಲ. 

215

ತರಕಾರಿಗಳನ್ನು ದಿನದ ಯಾವುದೇ ಸಮಯದಲ್ಲಿ ಬೇಕಾದಲೂ ಸೇವಿಸಬಹುದು. ಆದರೆ ಹಣ್ಣುಗಳಲ್ಲಿರುವ ಹೆಚ್ಚಿನ ಸಕ್ಕರೆ ಪ್ರಮಾಣದ ಕಾರಣ ತಿನ್ನುವ ಸಮಯ ಬಹಳ ಮುಖ್ಯವಾಗುತ್ತದೆ.

315

ಊಟ ಸಮಯದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ತಟ್ಟೆಯ ಅರ್ಧ ಭಾಗದಷ್ಟು ಇರಬೇಕು ಎಂದು ಯುನೈಟೆಡ್ ಸ್ಟೇಟ್ಸ್ ಆಗ್ರಿಕಲ್ಚರ್‌ ಡಿಪಾರ್ಟ್‌ಮೆಂಟ್‌ ಹೇಳುತ್ತದೆ.

415

ಸೂಪರ್ ಫುಡ್ ಹಣ್ಣುಗಳಿಂದ ಅಗತ್ಯ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ.

515

ಆದರೆ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಹಣ್ಣುಗಳನ್ನು ಸೇವಿಸಬಾರದು. ವಿಶೇಷವಾಗಿ, ಊಟದ ನಂತರ ಅವನ್ನು ತಿನ್ನುವುದ ತಪ್ಪಿಸಬೇಕು.

615

ಬೆಳಿಗ್ಗೆ  ಒಂದು ಲೋಟ ನೀರಿನ ನಂತರ ಹಣ್ಣುಗಳನ್ನು ತಿನ್ನಬೇಕು. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿಂದರೆ, ಬಾಡಿಯನ್ನು ಡಿಟಾಕ್ಸ್‌ ಮಾಡುತ್ತದೆ.

715

ತೂಕ ಇಳಿಸಲು ಸಹಾಯ ಮಾಡುತ್ತದೆ  ಹಾಗೂ ಇತರ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.  

815

ಹಣ್ಣುಗಳನ್ನು ಬೆಳಿಗ್ಗೆ, ತಿಂಡಿ ಮತ್ತು ಊಟದ ನಡುವೆ ಮತ್ತು ಸಂಜೆ ಸ್ನಾಕ್ಸ್‌ ಆಗಿ ತಿನ್ನಬಹುದು.

915

ಊಟಕ್ಕೆ ಕನಿಷ್ಠ ಅರ್ಧ ಘಂಟೆಯ ಮೊದಲು ಕೆಲವು ತುಂಡು ಹಣ್ಣುಗಳನ್ನು ತಿನ್ನಬಹುದು. ಊಟದ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸಿದರೆ ಒಳಿತು. 

1015

ಊಟಕ್ಕೆ ಮುಂಚಿನ ಹಣ್ಣುಗಳು ತಿನ್ನುವುದರಿಂದ ಊಟದಲ್ಲಿ ಕಡಿಮೆ ಕ್ಯಾಲೊರಿ ಸೇವಿಸುವಂತೆ ಮಾಡುತ್ತದೆ .ಅಲ್ಲದೆ, ಹೆಚ್ಚಿನ ಹಣ್ಣುಗಳು ಫೈಬರ್ ಅನ್ನು ಹೊಂದಿರುವುದರಿಂದ ನಿಮ್ಮ ಫೈಬರ್ ಸೇವನೆಯನ್ನು ಹೆಚ್ಚಿಸುತ್ತದೆ.

1115

ಫೈಬರ್ ಹೆಚ್ಚಿರುವ ಹಣ್ಣುಗಳನ್ನು ತಿನ್ನುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಾಗಿ, ಜೀರ್ಣಕ್ರಿಯೆ ವಿಳಂಬಗೊಳಿಸುತ್ತದೆ. 

1215

ಹೆಚ್ಚಿನ ಫೈಬರ್ ಹಣ್ಣುಗಳಲ್ಲಿ ಸೇಬು, ಪೇರಳೆ, ಬಾಳೆಹಣ್ಣು ಮತ್ತು ರಾಸ್ಬೆರ್ರಿಸ್ ಸೇರಿವೆ.  

1315

ಹಣ್ಣುಗಳಲ್ಲಿರುವ ಸಕ್ಕರೆ ಎನರ್ಜಿ ಲೆವೆಲ್‌  ಏರಿಕೆಗೆ ಕಾರಣವಾಗುವುದರಿಂದ ಮಲಗುವ ಮುನ್ನ ರಾತ್ರಿಯಲ್ಲಿ ಹಣ್ಣುಗಳನ್ನು ತಿನ್ನಬೇಡಿ.

1415

 ಮಲಗುವ  ಕನಿಷ್ಠ ಎರಡು ಮೂರು ಗಂಟೆಗಳ ಮೊದಲು ಹಣ್ಣುಗಳನ್ನು ತಿಂದರೆ ಬೆಸ್ಟ್.

1515

ಹಣ್ಣುಗಳು ಖಂಡಿತವಾಗಿಯೂ ಆರೋಗ್ಯಕರ ಬೆಸ್ಟ್‌.  ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸುವುದು ಅವಶ್ಯಕ.

click me!

Recommended Stories