ಎಗ್‌ ವೈಟ್‌ನ ಫೇಸ್‌ ಮಾಸ್ಕ್‌ ಟ್ರೈ ಮಾಡಿ ಮನೆಯಲ್ಲಿ!

First Published | Sep 27, 2020, 2:52 PM IST

ಸುಲಭವಾಗಿ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸುವುದು ಎಲ್ಲರಿಗೂ ಇಷ್ಷವಾಗುತ್ತದೆ. ಮೊಟ್ಟೆ ಚರ್ಮ ಆರೋಗ್ಯಕ್ಕೆ ಬೆಸ್ಟ್‌. ಮೊಟ್ಟೆಯ ಬಿಳಿ ಭಾಗದ ಫೆಸ್‌ ಪ್ಯಾಕ್‌ಗಳು ಇಲ್ಲಿವೆ. ನಿಮ್ಮ  ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಆರಸಿ ಕೊಂಡು ಕಾಂತಿಯುತವಾದ ಫ್ರೆಶ್‌ ಸ್ಕೀನ್‌ ಪಡೆಯಿರಿ.

ಎಗ್ ವೈಟ್ ಚರ್ಮಕ್ಕೆ ಅದ್ಭುತಗಳನ್ನು ಮಾಡುತ್ತದೆ. ಮೃದುವಾದ, ಹೊಳೆಯುವ ಚರ್ಮವನ್ನು ಹೊಂದಲು ಬಯಸಿದರೆ, ಮೊಟ್ಟೆಯ ಬಿಳಿ ಬಣ್ಣವು ನಿಮಗೆ ಸಹಾಯ ಮಾಡುತ್ತದೆ.
ಇದು ಅಗತ್ಯವಾದ ಪೋಷಕಾಂಶಗಳು ಮತ್ತು ಖನಿಜಗಳಿಂದ ತುಂಬಿದ್ದು,ಚರ್ಮದ ಆರೋಗ್ಯವನ್ನು ನೈಸರ್ಗಿಕ ರೀತಿಯಲ್ಲಿ ಹೆಚ್ಚಿಸುತ್ತದೆ.
Tap to resize

ಅಲ್ಬುಮಿನ್ ಒಂದು ಪ್ರಮುಖ ಪ್ರೋಟೀನ್ ಆಗಿದ್ದು ಅದು ಮೊಟ್ಟೆಯ ಬಿಳಿಭಾಗದಲ್ಲಿ ಕಂಡುಬರುತ್ತದೆ. ಚರ್ಮವನ್ನು ಬಿಗಿಗೊಳಿಸಲು ಮತ್ತು ತೆರೆದ ರಂಧ್ರಗಳನ್ನು ಕುಗ್ಗಿಸುವ ಮೂಲಕ ಬ್ಲ್ಯಾಕ್‌ಹೆಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೊಳೆಯುವ ಚರ್ಮವನ್ನು ಪಡೆಯಲು ಪಾರ್ಲರ್ ಮತ್ತು ಸ್ಪಾ ಚಿಕಿತ್ಸೆಗಳಿಗೆ ಜಾಸ್ತಿ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಮನೆಯಲ್ಲೇ ಫೇಸ್‌ ಮಾಸ್ಕ್‌ ಟ್ರೈ ಮಾಡಿ ನೋಡಿ.
ಚರ್ಮಕ್ಕೆ ಪೋಷಣೆ ನೀಡುವುದರ ಹೊರತಾಗಿ, ಮೊಟ್ಟೆಯ ಬಿಳಿ ಭಾಗದ ಮಾಸ್ಕ್‌ ಲೇಪಿಸುವುದರಿಂದ ಚರ್ಮದ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಹ ಸಹಾಯ ಮಾಡುತ್ತದೆ.
ಕಾರ್ನ್‌ ಸ್ಟಾರ್ಚ್‌ ಮತ್ತು ಎಗ್‌ ವೈಟ್‌ ಫೇಸ್‌ ಮಾಸ್ಕ್‌ : ಕಾರ್ನ್‌ ಸ್ಟಾರ್ಚ್‌ ಚರ್ಮದ ಕ್ಲೀನ್ಸರ್‌ ಆಗಿ ಕೆಲಸ ಮಾಡುತ್ತದೆ. 1 ಎಗ್‌ ವೈಟ್‌ ಹಾಗೂ 2 ಸ್ಪೂನ್‌ ಕಾರ್ನ್‌ಸ್ಟಾರ್ಚ್‌ ಅನ್ನು ಚೆನ್ನಾಗಿ ಕಲಸಿ ಪೇಸ್ಟ್‌ ತಯಾರಿಸಿ ಕೊಳ್ಳಿ. ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.
ಕೊಬ್ಬರಿ ಎಣ್ಣೆ ಮತ್ತು ಎಗ್‌ ವೈಟ್‌ ಫೇಸ್‌ ಮಾಸ್ಕ್‌ - ನೀವು ಒಣ ಚರ್ಮವನ್ನು ಹೊಂದಿದ್ದರೆ, ಈ ಫೇಸ್ ಮಾಸ್ಕ್ ಸೂಕ್ತವಾಗಿದೆ. ನಿಂಬೆ ರಸ, ತೆಂಗಿನ ಎಣ್ಣೆ ಮತ್ತು 1 ಮೊಟ್ಟೆ ಬಿಳಿ ಭಾಗ. ಇವುಗಳನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ಕಾಲದ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರಕ್ಕೆ 2 ಅಥವಾ 3 ಬಾರಿ ಮಾಡಿ ನೋಡಿ. ಹೈಡ್ರೆಟೇಡ್‌ ಹೊಳೆಯುವ ಚರ್ಮ ಪಡೆಯುವುದು ಗ್ಯಾರಂಟಿ.
ನಿಂಬೆ ಮತ್ತು ಎಗ್‌ ವೈಟ್‌ ಫೇಸ್‌ ಮಾಸ್ಕ್‌ -ಆಯಿಲಿ ಸ್ಕೀನ್‌ಗಾಗಿ ಈ ಮಾಸ್ಕ್.‌ ನಿಂಬೆ ಇರುವುದರಿಂದ ನ್ಯಾಚುರಲ್ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅರ್ಧ ನಿಂಬೆ ಹಣ್ಣಿನ ರಸಕ್ಕೆ ಮೊಟ್ಟೆಯ ಬಿಳಿಭಾಗ ಸೇರಿಸಿ ಮಿಶ್ರಣ ತಯಾರಿಸಿ, ತೆಳುವಾಗಿ ಮುಖಕ್ಕೆ ಆಪ್ಲೈ ಮಾಡಿ. 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಬೆಸ್ಟ್‌ ಫಲಿತಾಂಶಕ್ಕಾಗಿ ವಾರದಲ್ಲಿ ಒಂದೆರಡು ಬಾರಿ ಪ್ರಯತ್ನಿಸಿ.

Latest Videos

click me!