ಮಳೆಗಾಲದಲ್ಲಿ ಈ ಕೆಲವು ತರಕಾರಿ ಅವಾಯ್ಡ್ ಮಾಡಿ, ಯಾಕೆ ಗೊತ್ತಾ?

Suvarna News   | Asianet News
Published : Jul 20, 2021, 05:16 PM IST

ಮನ್ಸೂನ್ ತಿಂಗಳಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಬರೋದು ಸಾಮನ್ಯವಾಗಿದೆ. ಜ್ವರ, ಶೀತದಿಂದ ಹಿಡಿದು ಡೆಂಗ್ಯೂ , ಮಲೇರಿಯಾವರೆಗೂ ಒಂದಲ್ಲ ಒಂದು ಸಮಸ್ಯೆಗಳು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ರೋಗಗಳು ಕಾಣಿಸಿಕೊಂಡರೆ ನಾವು ನಮ್ಮ ಆಹಾರ ಬಗ್ಗೆ ವಿಶೇಷ ಗಮನ ಹರಿಸುವುದು ಮುಖ್ಯ. ಯಾವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. 

PREV
19
ಮಳೆಗಾಲದಲ್ಲಿ ಈ ಕೆಲವು ತರಕಾರಿ ಅವಾಯ್ಡ್ ಮಾಡಿ, ಯಾಕೆ ಗೊತ್ತಾ?

ಮಳೆಗಾಲದಲ್ಲಿ ರೋಗಗಳ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿಶೇಷ ಆಹಾರಕ್ಕಾಗಿ  ನಮಗೆ ಎಲ್ಲೆಡೆಯಿಂದ ಸೂಚನೆಗಳು ಸಿಗುತ್ತದೆ. ಈ ಋತುವನ್ನು ಆರೋಗ್ಯದ ದೃಷ್ಟಿಯಿಂದ ರೋಗಗಳಿಗೆ ಸಾಕಷ್ಟು ಸೂಕ್ಷ್ಮವೆಂದು ಪರಿಗಣಿಸಲಾಗಿದೆ. ಈ ಋತುವು ಸೂಕ್ಷ್ಮಜೀವಿಗಳಿಗೆ  ಅನುಕೂಲಕರವಾಗಿದೆ ಮತ್ತು  ಆರೋಗ್ಯದ ಮೇಲೆ ಸುಲಭವಾಗಿ ಪರಿಣಾಮ ಬೀರಬಹುದು. 

29

ತಜ್ಞರು ಹೇಳುವಂತೆ ಮಾನ್ಸೂನ್ ಋತುವಿನಲ್ಲಿ ಆರೋಗ್ಯವಾಗಿರಲು ರೋಗನಿರೋಧಕ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವುದು ಬಹಳ ಮುಖ್ಯ ಮತ್ತು ಅದಕ್ಕಾಗಿ ಸಮತೋಲಿತ ಆಹಾರವನ್ನು ಸೇವಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಈ ಋತುವಿನಲ್ಲಿ ಕೆಲವೊಂದು ಹಸಿರು ತರಕಾರಿಗಳನ್ನು ಸೇವನೆ ಮಾಡೋದನ್ನು ನಿಯಂತ್ರಿಸಬೇಕು.  ಮಾನ್ಸೂನ್ ನಲ್ಲಿ ಏನು ಸೇವಿಸಬೇಕು ಮತ್ತು ತಿನ್ನುವುದನ್ನು ತಪ್ಪಿಸಬೇಕು ನೋಡೋಣ...

39

ಹಸಿರು ತರಕಾರಿಗಳು: ಹಸಿರು ಸೊಪ್ಪುಗಳನ್ನು ವರ್ಷವಿಡೀ ತಿನ್ನಲು ಸಲಹೆ ನೀಡಲಾಗುತ್ತದೆಯಾದರೂ, ಮಳೆಗಾಲದಲ್ಲಿ ಹಾಗೆ ಮಾಡುವುದು ನಿಷೇಧಿಸಲಾಗಿದೆ. ಈ ಋತುವಿನಲ್ಲಿ ತೇವಾಂಶವು ಹೆಚ್ಚಾಗುತ್ತದೆ ಎಂದು ಆಹಾರ ತಜ್ಞರು ನಂಬುತ್ತಾರೆ, 

49

ಇನ್ನು ಮಾನ್ಸೂನ್ ತಿಂಗಳಲ್ಲಿ ಕೀಟಾಣುಗಳು  ತರಕಾರಿ ಎಲೆಗಳಲ್ಲಿ ನೆಲೆಸಲು ಮತ್ತು ಸಂತಾನೋತ್ಪತ್ತಿ ಮಾಡಲು ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಾಲಕ್, ಎಲೆಕೋಸು ಮತ್ತು ಹೂಕೋಸು ಮುಂತಾದ ತರಕಾರಿಗಳನ್ನು  ತಿನ್ನಬಾರದು.

59

ನೀರನ್ನು ಕುದಿಸಿ ,ಕುಡಿಯಿರಿ: ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವ ಅಪಾಯ ಹೆಚ್ಚು. ಇಂತಹ ಕಲುಷಿತ ನೀರು ಹೊಟ್ಟೆಯ ಸೋಂಕುಗಳು, ಕಾಲರ, ಅತಿಸಾರ ಮತ್ತು ಟೈಫಾಯಿಡ್ ನಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕುದಿಸಿ ನೀರು ಕುಡಿಯಿರಿ.

69

ಇನ್ನು ತಣ್ಣೀರು ಕುಡಿಯೋದರಿಂದ ಶೀತ, ಕೆಮ್ಮು ಮೊದಲಾದ ವೈರಲ್ ಸಮಸ್ಯೆಗಳು ಸಹ ಉಂಟಾಗುತ್ತವೆ. ಮಳೆಗಾಲದಲ್ಲಿ ತಣ್ಣನೆಯ ವಾತಾವರಣ ಇರೋದರಿಂದ ಈ ಸಮಸ್ಯೆ ಒಮ್ಮೆ ಆರಂಭವಾದರೆ ಮತ್ತೆ ಸುಲಭವಾಗಿ ಗುಣಮುಖರಾಗೋದಿಲ್ಲ. 

79

ಹುರಿದ ವಸ್ತುಗಳನ್ನು ತಪ್ಪಿಸಿ: ಜನರು ಸಾಮಾನ್ಯವಾಗಿ ಮಳೆಗಾಲದಲ್ಲಿ ಪಕೋಡಾ ಮತ್ತು ಸಮೋಸ ಇತ್ಯಾದಿ ಎಣ್ಣೆಯಲ್ಲಿ ಕರಿದ  ತಿಂಡಿಯನ್ನು ತಿನ್ನಲು ಇಷ್ಟಪಡುತ್ತಾರೆ ಆದರೆ ಇದು ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು.

89

ಹೆಚ್ಚು ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ, ಹೊಟ್ಟೆ ಉಬ್ಬರ ಅಥವಾ ಅನಿಲದ ಅಪಾಯವು ಹೆಚ್ಚಾಗುತ್ತದೆ. ಇದರಿಂದ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗದೇ ಇರಬಹುದು. 

99

ವಾಸ್ತವವಾಗಿ, ಮಳೆಗಾಲದಲ್ಲಿ ಚಯಾಪಚಯ ಕ್ರಿಯೆಯು ನಿಧಾನವಾಗುತ್ತದೆ, ಇದರಿಂದ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಜೀರ್ಣಿಸಿಕೊಳ್ಳಲು ಹೊಟ್ಟೆಗೆ ಕಷ್ಟವಾಗುತ್ತದೆ. ಮಾನ್ಸೂನ್ ನಲ್ಲಿ ಸಾಧ್ಯವಾದಷ್ಟು ಹಗುರವಾದ ವಸ್ತುಗಳನ್ನು ತಿನ್ನಿ

click me!

Recommended Stories