ಪ್ರಯಾಣ ಮಾಡುವಾಗ ವಾಂತಿಯಾಗುತ್ತದೆಯೇ? ಇವು ಜೊತೆಗಿರಲಿ

First Published | Jul 20, 2021, 12:36 PM IST

ಸಾಮಾನ್ಯವಾಗಿ ಎಲ್ಲರಿಗೂ ಟ್ರಾವೆಲ್ ಮಾಡೋದು ಎಂದರೆ ತುಂಬಾನೆ ಇಷ್ಟವಿರುತ್ತದೆ. ಆದರೆ ಬಸ್ ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ಅನೇಕ ಜನರಿಗೆ ವಾಂತಿ ಬರುವುದು ನೋಡಿದ್ದೇವೆ. ನಿಮಗೂ ಈ ಸಮಸ್ಯೆ ಇದ್ದರೆ ಈ ಸುದ್ದಿ ಉಪಯೋಗವಾಗಬಹುದು. ಈ ಸುದ್ದಿಯಲ್ಲಿ, ಪ್ರಯಾಣದ ಸಮಯದಲ್ಲಿ ವಾಂತಿಯ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಹೇಳಿದ್ದೇವೆ. 

ಪ್ರಯಾಣದ ಸಮಯದಲ್ಲಿ ವಾಂತಿ ಬರುತ್ತದೆ ಎಂದು ಅನೇಕ ಜನರು ಎಲ್ಲಿಗೂ ಹೋಗುವುದಿಲ್ಲ, ಮತ್ತು ಅವರು ಹೋದಾಗಲೂ, ವಾಂತಿಯು ಅವರ ಪ್ರಯಾಣದ ನೆನಪುಗಳನ್ನು ತುಂಬಾ ಕೆಟ್ಟದಾಗಿ ಮಾಡುತ್ತದೆ, ಅವರು ಪ್ರಯಾಣಿಸಲು ಹೆದರುತ್ತಾರೆ.
ಪೆಪ್ಪರ್ ಮಿಂಟ್ ಸಹಾಯ ಮಾಡುತ್ತದೆ:ಆಹಾರ ತಜ್ಞರ ಪ್ರಕಾರ, ಪ್ರಯಾಣದಲ್ಲಿ ತಲೆತಿರುಗುವಿಕೆ ಮತ್ತು ವಾಕರಿಕೆ ತೊಂದರೆ ಇದ್ದರೆ, ಪುದೀನಾ ಸಹಾಯವನ್ನು ತೆಗೆದುಕೊಳ್ಳಿ. ಪುದೀನಾ ಶರಬತ್ ಅಥವಾ ಪಾನಕವನ್ನು ನಿಮ್ಮೊಂದಿಗೆ ಇರಿಸಿ .
Tap to resize

ಪ್ರಯಾಣಿಸುವ ಮೊದಲು ಪುದೀನಾ ಜ್ಯೂಸ್ ಸೇವನೆ ಮಾಡೋದು ಉತ್ತಮ, ಪುದೀನಾ ಜ್ಯೂಸ್ ಬದಲಾಗಿ ಪುದೀನಾ ಮಾತ್ರೆಯ ಸಹಾಯವನ್ನು ಸಹ ತೆಗೆದುಕೊಳ್ಳಬಹುದು.
ನಿಂಬೆ-ಉಪ್ಪು ಪ್ರಯೋಜನಕಾರಿ:ಪ್ರಯಾಣ ಮಾಡುವಾಗ ವಾಕರಿಕೆ ಮತ್ತು ವಾಂತಿಯ ಸಂದರ್ಭದಲ್ಲಿ, ನಿಂಬೆಯನ್ನು ನೀರಿಗೆ ಹಿಂಡಿ ಅದಕ್ಕೆ ಉಪ್ಪನ್ನು ಸೇರಿಸಿ ಸೇವಿಸಬಹುದು. ಪ್ರವಾಸಕ್ಕೆ ಹೋಗುವ ಮುನ್ನ ನಿಂಬೆ, ಉಪ್ಪು ಮತ್ತು ನೀರನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯಬೇಡಿ.
ಇಲ್ಲವಾದರೆ ನಿಂಬೆ ಹಣ್ಣನ್ನು ಜೊತೆಗೆ ತೆಗೆದುಕೊಂಡು ಹೋಗಿ. ವಾಕರಿಕೆ ಬರುವ ಅನುಭವ ಉಂಟಾದರೆ ನಿಂಬೆಯ ಪರಿಮಳವನ್ನು ಸೇವಿಸಿ, ಅಥವಾ ಅದಕ್ಕೆ ಉಪ್ಪು ಸೇರಿಸಿ ಚಪ್ಪರಿಸಿದರೂ ಉತ್ತಮ ಪ್ರಯೋಜನ ಪಡೆಯಬಹುದು.
ಸಿಟ್ರಸ್ ಹಣ್ಣುಗಳು ಮತ್ತು ರಸಗಳು:ಎಲ್ಲಿಗಾದರೂ ಹೋಗುತ್ತಿದ್ದರೆ, ಸಿಟ್ರಸ್ ಹಣ್ಣುಗಳು ಅಥವಾ ರಸಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯದಿರಿ. ವಾಂತಿ ಮತ್ತು ವಾಕರಿಕೆ ಕಷ್ಟವಾದಾಗಲೆಲ್ಲಾ, ಅದನ್ನು ಸೇವಿಸಿ. ಇದು ಸಾಕಷ್ಟು ನಿರಾಳ ಭಾವನೆಯನ್ನು ನೀಡುತ್ತದೆ.
ಶುಂಠಿಯು ಪರಿಹಾರವನ್ನೂ ಒದಗಿಸುತ್ತದೆ:ಪ್ರಯಾಣದ ಸಮಯದಲ್ಲಿ ಶುಂಠಿ ಸಹಾಯ ಮಾಡುತ್ತದೆ. ಇದಕ್ಕಾಗಿ ಶುಂಠಿಯ ಸಿಪ್ಪೆಯನ್ನು ತೆಗೆದು ಅದರ ಚೂರುಗಳನ್ನು ಕತ್ತರಿಸಿ ಎಲ್ಲಾ ಸಮಯದಲ್ಲೂ ನಿಮ್ಮ ಬಳಿ ಇಟ್ಟುಕೊಳ್ಳಬೇಕು.
ಪ್ರಯಾಣದಲ್ಲಿ ವಾಂತಿ ಮತ್ತು ವಾಕರಿಕೆ ಕಷ್ಟವಾದಾಗಲೆಲ್ಲಾ, ಬಾಯಿಯಲ್ಲಿ ಶುಂಠಿ ಚೂರುಗಳನ್ನು ಹೀರುತ್ತಲೇ ಇರಿ. ಬೇಕಾದರೆ, ಪ್ರಯಾಣದ ಆರಂಭದಿಂದ ಕೊನೆಯವರೆಗೂ ಶುಂಠಿಯ ತುಂಡನ್ನು ಸಹ ಬಾಯಿಯಲ್ಲಿ ಹಾಕಬಹುದು.
ಇದ್ಯಾವುದೇ ವಸ್ತುಗಳನ್ನು ತೆಗೆದುಕೊಳ್ಲಲು ಮರೆತರೆ ಕೂಡಲೇ ಮೆಡಿಕಲ್ ನಿಂದ ವಾಮಿಟಿಂಗ್ ಟ್ಯಾಬ್ಲೆಟ್ ಸೇವಿಸಿ. ಇದರಿಂದ ವಾಕರಿಕೆ ಬರುವುದು ನಿವಾರಣೆಯಾಗುತ್ತದೆ.

Latest Videos

click me!