ಬೆಳಗ್ಗೆ ಸರಿಯಾದ ಆರಂಭ ಹೇಗಿರಬೇಕು...? ಆಯುರ್ವೇದ ಏನು ಹೇಳುತ್ತೆ?

First Published Jul 20, 2021, 3:01 PM IST

ಬಿಡುವಿಲ್ಲದ ಜೀವನ  ಮತ್ತು ಮನೆಯಿಂದ ಕೆಲಸ ಮಾಡುವುದು ಇತ್ಯಾದಿಗಳಿಂದಾಗಿ ದಿನಚರಿ ಸಾಕಷ್ಟು ಗೊಂದಲಕ್ಕೊಳಗಾಗಿದೆ. ನಿದ್ರೆ ಮಾಡುವುದು ಅಥವಾ ಸರಿಯಾದ ಆಹಾರವನ್ನು ಸೇವಿಸುವುದು ಸರಿಯಾದ ಸಮಯದಲ್ಲಿ ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫಿಟ್ನೆಸ್ ಜೀವನದ ಸುಖ ಮತ್ತು ಮಾನಸಿಕ ಸ್ಥಿತಿಯ ಮೇಲೆ ಬಹಳ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ಕನಿಷ್ಠ ತಮ್ಮ ಬೆಳಗ್ಗೆಯನ್ನು ಚೆನ್ನಾಗಿ ಪ್ರಾರಂಭಿಸಿದರೆ, ಇಡೀ ದಿನವು ತುಂಬಾ ಉತ್ತಮವಾಗಿರುತ್ತದೆ ಮತ್ತು  ಆರೋಗ್ಯವು ಉತ್ತಮವಾಗಿರುತ್ತದೆ.  ಆಯುರ್ವೇದದ ಪ್ರಕಾರ ಬೆಳಿಗ್ಗೆ ಸರಿಯಾದ ಆರಂಭ ಹೇಗಿರಬೇಕು ಎನ್ನುವ ಮಾಹಿತಿ ಇಲ್ಲಿದೆ. ಇದರಿಂದ ನಿಮ್ಮ ಇಡೀ ದಿನ ಮತ್ತು ಜೀವನವು ಸಂತೋಷವಾಗಿರುತ್ತದೆ.

ಬೆಳಗ್ಗೆ ಬೇಗನೆ ಎದ್ದೇಳಿ:ಆಯುರ್ವೇದದ ಪ್ರಕಾರ ಬ್ರಹ್ಮ ಮಹೂರ್ತ ಎಂದರೆ ಸೂರ್ಯೋದಯಕ್ಕೆ 2 ಗಂಟೆ ಮುಂಚೆ ಎಚ್ಚರಗೊಳ್ಳುವುದು ಉತ್ತಮ, ಇದರಿಂದ ಆರೋಗ್ಯಪೂರ್ಣ ಹಾಗೂ ಸುಖಕರ ಜೀವನಕ್ಕಾಗಿ ತನ್ನ ದೇಹವನ್ನು ಸರಿಯಾಗಿ ಸ್ವಚ್ಛಗೊಳಿಸಿ ವ್ಯಾಯಾಮ, ಪ್ರಾಣಾಯಾಮ, ಪ್ರಾರ್ಥನೆ ಇತ್ಯಾದಿಗಳನ್ನು ಮಾಡಬಹುದು. ಬೆಳಗ್ಗೆ ಆದಷ್ಟು ಬೇಗ ಎಚ್ಚರಗೊಳ್ಳಲು ಪ್ರಯತ್ನಿಸಿ.
undefined
ಬಾಯಿ ತೊಳೆಯಿರಿ:ಬೆಳಗ್ಗೆ ಎದ್ದ ತಕ್ಷಣ ಶುದ್ಧ ನೀರಿನಿಂದ ಮುಖ ತೊಳೆಯಿರಿ. ವಿಶೇಷವಾಗಿ ಕಣ್ಣುಗಳಿಗೆ ನೀರನ್ನು ಹಾಕಿ. ನೀರಿನ ತಾಪಮಾನವು ಸಾಮಾನ್ಯಸ್ಥಿತಿಯಲ್ಲಿ ಇರಲಿ. ಇದರಿಂದ ಕಣ್ಣು ನಿದ್ರೆಯಿಂದ ಸಂಪೂರ್ಣವಾಗಿ ಎಚ್ಚರಗೊಳ್ಳುತ್ತದೆ.
undefined
ರಾತ್ರಿ ಮಲಗುವ ಮೊದಲು ಮತ್ತು ಬೆಳಗ್ಗೆಎದ್ದ ನಂತರ ಶೌಚಾಲಯಕ್ಕೆ ಹೋಗಿ ಆಯುರ್ವೇದದಲ್ಲಿರಾತ್ರಿ ಮಲಗುವ ಮೊದಲು ಮತ್ತು ಬೆಳಗ್ಗೆ ಎದ್ದ ನಂತರ ಶೌಚಾಲಯಕ್ಕೆ ಹೋಗುವಂತೆ ಸೂಚಿಸಲಾಗಿದೆ, ಇದರಿಂದ ಒಬ್ಬ ವ್ಯಕ್ತಿಯ ದೇಹವು ಆರೋಗ್ಯದಿಂದ ಇರಲು ಸಹಾಯವಾಗುತ್ತದೆ.
undefined
ಗಾರ್ಗಲ್ಬೆಳಿಗ್ಗೆ ಎದ್ದ ನಂತರ ಕೇವಲ ಬ್ರಷ್ ಮಾಡುವುದು ಸಾಕಾಗುವುದಿಲ್ಲ. ಇದರ ಜೊತೆಗೆ ನಾಲಿಗೆ ಮತ್ತು ವಸಡುಗಳನ್ನು ಸ್ವಚ್ಛಗೊಳಿಸುವುದು ಸಹ ಅತ್ಯಗತ್ಯ. ಪ್ರತಿದಿನ ಉಪ್ಪು ನೀರಿನಿಂದ ಗಾರ್ಗಲ್ ಮಾಡಿ.
undefined
ದೇಹಕ್ಕೆ ಮಸಾಜ್ ಮಾಡಿ:ದೇಹವನ್ನು ತೇವಾಂಶದಿಂದ ಇರಿಸಲು ಕ್ರೀಮ್ ಸಾಕಾಗುವುದಿಲ್ಲ. ವಾರಕ್ಕೆ 2 ರಿಂದ 3 ಬಾರಿ ಎಣ್ಣೆಯಿಂದ ಮಸಾಜ್ ಮಾಡಿ. ನಿಮಗೆ ಇಡೀ ದೇಹವನ್ನು ಮಸಾಜ್ ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಹೊಕ್ಕುಳ, ಅಂಗಾಲುಗಳು, ತಲೆ, ಕಿವಿಗಳು, ಕೈಗಳು ಮತ್ತು ಮೊಣಕೈಗಳನ್ನು ಮಸಾಜ್ ಮಾಡಿ.
undefined
ವ್ಯಾಯಾಮ:ನೀವು ಜಿಮ್ ಗೆ ಹೋಗಿ ಭಾರಿ ವ್ಯಾಯಾಮಗಳನ್ನು ಮಾಡಬೇಕಾಗಿಲ್ಲ. ಬೆಳಗ್ಗೆ ಜಾಗಿಂಗ್ ಮಾಡುವುದು, ಹಗುರವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚುತ್ತದೆ ಮತ್ತು ದೇಹವನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ.
undefined
ಯೋಗ :ಯೋಗ ಮಾಡುವುದು ತುಂಬಾ ಒಳ್ಳೆಯ ಆಯ್ಕೆ. ಬೆಳಿಗ್ಗೆ ವ್ಯಾಯಾಮ ಮಾಡುವಾಗ ಹೆಚ್ಚು ಶ್ರಮ ಇರುವ ವ್ಯಾಯಾಮ ಮಾಡಬೇಡಿ, ಇಲ್ಲದಿದ್ದರೆ ನೀವು ದಿನವಿಡೀ ಆಯಾಸಗೊಳ್ಳಬಹುದು. ಭಾರೀ ವ್ಯಾಯಾಮಕ್ಕೆ ಸಂಜೆಯ ಸಮಯ ಉತ್ತಮವಾಗಿದೆ.
undefined
ಆರೋಗ್ಯಕರ ಉಪಾಹಾರ:ಬೆಳಗಿನ ಉಪಾಹಾರ ಆರೋಗ್ಯಕರವಾಗಿರುವಂತೆ ನೋಡಿ. ಕರಿದ ಪದಾರ್ಥಗಳನ್ನು ಬೆಳಗ್ಗಿನ ಹೊತ್ತು ಸೇವಿಸಲೇಬೇಡಿ. ಮೊಳಕೆಕಾಳುಗಳು, ಮೊಸರು, ಹಣ್ಣುಗಳು, ಜ್ಯೂಸ್ ಮೊದಲಾದ ಪೋಷಕಾಂಶಗಳನ್ನು ಬೆಳಗ್ಗೆ ಸೇವಿಸಿ.
undefined
click me!