ಡೆಂಗ್ಯೂ, ಜ್ವರ ಎಂದು… ಪದೇ ಪದೇ ಪ್ಯಾರಸೆಟಮಾಲ್ ತಿಂತೀರಾ?

First Published | Oct 6, 2023, 5:22 PM IST

ಡೆಂಗ್ಯೂ ಇರಲಿ, ಯಾವುದೇ ಜ್ವರ ಬರಲಿ, ಜನ ಹೆಚ್ಚಾಗಿ ಬೇಗ ಗುಣಮುಖರಾಗಲು ಪ್ಯಾರಸೆಟಮಾಲ್ ಸೇವಿಸುತ್ತಾರೆ. ಇದರಿಂದ ಬೇಗನೆ ಜ್ವರ ಕಡಿಮೆಯಾಗುತ್ತೆ ಎಂದು ಅಂದುಕೊಳ್ಳುತ್ತಾರೆ. ಆದರೆ ಇದರಿಂದ ಎಷ್ಟೊಂದು ಅನಾನುಕೂಲತೆಗಳಿವೆ ಗೊತ್ತಾ? 
 

ದೇಶಾದ್ಯಂತ ಡೆಂಗ್ಯೂ (dengue fever) ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ, ದೇಶದ ವಿವಿಧ ಭಾಗಗಳಿಂದ ಡೆಂಗ್ಯೂ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಡೆಂಗ್ಯೂ ಜ್ವರದಿಂದ ಪರಿಹಾರ ಪಡೆಯಲು ಮತ್ತು ಅದರ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಜನರು ಹೆಚ್ಚಾಗಿ ಪ್ಯಾರಸೆಟಮಾಲ್ ತಿನ್ನುತ್ತಾರೆ. ಆದರೆ, ಇದನ್ನು ದೀರ್ಘಕಾಲದವರೆಗೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅದರ ಕೆಲವು ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳೋಣ -

ಈ ಸಮಯದಲ್ಲಿ ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇದೆ. ಕೆಲವು ಸಮಯದಿಂದ, ಈ ಗಂಭೀರ ಕಾಯಿಲೆಯ ಪ್ರಕರಣಗಳು ವಿವಿಧ ಭಾಗಗಳಲ್ಲಿ ಹೆಚ್ಚುತ್ತಿವೆ ಎಂದು ವರದಿಯಾಗಿದೆ. ಡೆಂಗ್ಯೂ ಒಂದು ಗಂಭೀರ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಸೊಳ್ಳೆ ಕಡಿತದಿಂದ ಉಂಟಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ, ಇದು ಮಾರಣಾಂತಿಕವಾಗಿ (deadly problem) ಬದಲಾಗುತ್ತೆ.
 

Latest Videos


ಡೆಂಗ್ಯೂ ಜ್ವರ ನಿಮ್ಮನ್ನು ಕಾಡುತ್ತಿದ್ದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದು ತುಂಬಾ ಮುಖ್ಯ. ಡೆಂಗ್ಯೂವನ್ನು ಮೂಳೆ ಮುರಿಯುವ ಜ್ವರ ಎಂದೂ ಕರೆಯಲಾಗುತ್ತದೆ. ಅಂದ್ರೆ ಜ್ವರ ಹೆಚ್ಚಾದರೆ ದೇಹದಲ್ಲಿ ನೋವು ಕಾಣಿಸಿಕೊಂಡು, ದೇಹ ಕುಗ್ಗಿ ಹೋಗುತ್ತೆ. ಅದಕ್ಕಾಗಿಯೇ ಜನರು ಡೆಂಗ್ಯೂ ಸಮಸ್ಯೆ ಕಾಣಿಸಿಕೊಂಡರೆ ಜ್ವರ ಕಡಿಮೆ ಮಾಡಲು ಜನರು ಹೆಚ್ಚಾಗಿ ಔಷಧಿಗಳನ್ನು ಬಳಸುತ್ತಾರೆ.
 

ಡೆಂಗ್ಯೂ ರೋಗಿಗಳಿಗೆ ಹೆಚ್ಚಿನ ಜ್ವರ, ಮೈಕೈ ನೋವು ಅಥವಾ ವಾಂತಿಯಂತಹ ರೋಗಲಕ್ಷಣಗಳಿದ್ದರೆ ಪ್ಯಾರಸೆ ಟಮಾಲ್ ಅನ್ನು ಸಾಮಾನ್ಯವಾಗಿ ರೋಗಿಗೆ ನೀಡಲಾಗುತ್ತದೆ. ಪ್ಯಾರಸಿಟಮಾಲ್ (paracetamol) ಅನ್ನು ಡೆಂಗ್ಯೂ ರೋಗಿಗಳಿಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಮತ್ತು ಜ್ವರದಂತಹ ಇತರ ಸಂಬಂಧಿತ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಈ ಮಾತ್ರೆ ನೋವಿನ ಮೂಲವನ್ನು ಗುಣಪಡಿಸುವುದಿಲ್ಲ, ಬದಲಿಗೆ ನೋವನ್ನು ಕಡಿಮೆ ಮಾಡುತ್ತದೆ. ತಲೆನೋವು, ಮೈಗ್ರೇನ್ (Migraine) ಇತ್ಯಾದಿ ಸಮಸ್ಯೆಗಳಿದ್ದರೂ ಈ ಮಾತ್ರೆ ಬಳಸಲಾಗುತ್ತೆ. 
 

ಅನಾನುಕೂಲಗಳೇನು?
ದೀರ್ಘಕಾಲದವರೆಗೆ ಪ್ಯಾರಸಿಟಮಾಲ್ ಬಳಕೆಯು ಆರೋಗ್ಯಕ್ಕೆ ಹಾನಿಕಾರಕ. ಇತರ ಯಾವುದೇ ಔಷಧಿಯಂತೆ, ಪ್ಯಾರಸೆಟಮಾಲ್ ತಿನ್ನುವುದು ಅಡ್ಡಪರಿಣಾಮಗಳನ್ನು ಹೊಂದಿದೆ. ಪ್ಯಾರಸಿಟಮಾಲ್ ತಿನ್ನೋದ್ರಿಂದ ಉಂಟಾಗುವ ಕೆಲವು ಹಾನಿಕಾರಕ ಪರಿಣಾಮಗಳಲ್ಲಿ ನಿದ್ರೆ, ಆಯಾಸ, ದದ್ದುಗಳು ಮತ್ತು ತುರಿಕೆ ಸೇರಿವೆ.

ಪ್ಯಾರಸಿಟಮಾಲ್ ನ್ನು ದೀರ್ಘಕಾಲದವರೆಗೆ ತಿನ್ನೋದ್ರಿಂದ ಏನೆಲ್ಲಾ ಸಮಸ್ಯೆಗಳು ಕಾಡಬಹುದು ನೋಡೋಣ : 
ಆಯಾಸ (Tiredness)
ಉಸಿರಾಟದ ತೊಂದರೆ (breathing problem)
ಬೆರಳುಗಳು ಮತ್ತು ತುಟಿ ನೀಲಿ ಬಣ್ಣಕ್ಕೆ ತಿರುಗಿಸುವುದು
ರಕ್ತಹೀನತೆ
ಯಕೃತ್ತು ಮತ್ತು ಮೂತ್ರಪಿಂಡಗಳಿಗೆ (Kidney) ಹಾನಿ
ನೀವು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು (Paralysis) ಹೊಂದಿದ್ದರೆ ಹಾನಿಯಾಗುತ್ತೆ
ಹೊಟ್ಟೆಯಲ್ಲಿ ನೋವು
ವಾಂತಿ (Vomitting)
ಕೋಮಾ (Coma)

ಡೆಂಗ್ಯೂ ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ:
ಸಾಮಾನ್ಯವಾಗಿ ಸೊಳ್ಳೆಗಳಿಂದ ಹರಡುವ ಈ ರೋಗವನ್ನು ತಪ್ಪಿಸಲು ಪೂರ್ಣ ತೋಳಿನ ಬಟ್ಟೆ ಮತ್ತು ಪೂರ್ಣ ಪ್ಯಾಂಟ್ ಧರಿಸಿ.
ಹೊರಗೆ ಹೋಗುವಾಗ ಸೊಳ್ಳೆ ನಿವಾರಕವನ್ನು ಬಳಸಿ.
ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿ ಮತ್ತು ನಿಂತ ನೀರಿನಿಂದ ಮುಕ್ತವಾಗಿಡುವುದು ಸಹ ಮುಖ್ಯ.
ನಿಯಮಿತ ಮನೆಯಲ್ಲಿ ಧೂಪ ಹಚ್ಛೋದು ಸೊಳ್ಳೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.
 

click me!