ಬ್ರೇಕ್ ಫಾಸ್ಟ್ ಮಿಸ್ ಮಾಡಿಕೊಂಡ್ರೆ ಈ ಗಂಭೀರ ಸಮಸ್ಯೆ ಗ್ಯಾರಂಟಿ

First Published Mar 3, 2021, 2:05 PM IST

ಬೆಳಗ್ಗೆ ಎದ್ದು ಉಪಹಾರ ಸೇವನೆ ಮಾಡುವುದು ತುಂಬಾನೆ ಮುಖ್ಯವಾಗಿದೆ. ಆದರೆ ಹೆಚ್ಚಿನ ಜನರು ತಮ್ಮ ಕೆಲಸದ ಒತ್ತಡದ ಜೀವನ ಶೈಲಿ ಹಾಗು ಆಫೀಸ್ ಗೆ ಅಥವಾ ಕಾಲೇಜಿಗೆ ತಡವಾಗುವುದರಿಂದ ಬ್ರೇಕ್ ಫಾಸ್ಟ್ ಅರ್ಧದಲ್ಲೇ ಬಿಟ್ಟು ಅಥವಾ ತಿನ್ನದೇ ಹೊರಡುತ್ತಾರೆ. ಇದರಿಂದ ಏನು ಸಮಸ್ಯೆ ಇಲ್ಲ ಎಂದು ಅಂದ್ಕೊತ್ತಾರೆ. ಆದರೆ ಅದು ತಪ್ಪು. ಒಂದು ದಿನ ಬ್ರೇಕ್ ಫಾಸ್ಟ್ ಮಿಸ್ ಮಾಡಿದ್ರೆ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 

ಬ್ರೇಕ್ ಫಾಸ್ಟ್ ಮಾಡದೆ ಇದ್ದರೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬ್ರೇಕ್ ಫಾಸ್ಟ್ ಮಿಸ್ ಮಾಡಿದರೆ ಟೈಪ್ 2 ಮಧುಮೇಹದ ಹೆಚ್ಚಿನ ಅಪಾಯ ಇರುತ್ತದೆ, ಇನ್ಸುಲಿನ್ ಪ್ರತಿರೋಧ ಮತ್ತು ಹಾರ್ಮೋನ್ ನಿಯಂತ್ರಣದಿಂದ ಸ್ಥೂಲಕಾಯದ ಅಪಾಯ, ಮತ್ತು ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಅಪಾಯವು ಹೆಚ್ಚಾಗಿರುತ್ತದೆ ಎಂದು ಕಂಡುಬಂದಿದೆ.
undefined
ದಿನವಿಡೀ ಬೇಕಾಗುವ ಫೈಬರ್ ಮತ್ತು ವಿಟಮಿನ್ ಗಳು ಸೇರಿದಂತೆ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಪಡೆಯಲು ಬ್ರೇಕ್ ಫಾಸ್ಟ್ ಉತ್ತಮ ಆಹಾರವಾಗಿದೆ. ಆದ್ದರಿಂದ, ಉಪಾಹಾರವನ್ನು ಬಿಟ್ಟುಬಿಡುವುದರಿಂದ ದೇಹಕ್ಕೆ ಸಾಕಷ್ಟು ನಷ್ಟವಾಗುತ್ತದೆ. ಮತ್ತು ದೀರ್ಘಕಾಲೀನ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು
undefined
ಚಯಾಪಚಯ ಕ್ರಿಯೆ ಅಸಮತೋಲನಗೊಳ್ಳುತ್ತದೆ. ದೇಹಕ್ಕೆ ಸಾಕಷ್ಟು ಶಕ್ತಿ ಸಿಗುವುದಿಲ್ಲ. ಇದರಿಂದ ನಿಶ್ಶಕ್ತಿ ಉಂಟಾಗುತ್ತದೆ. ಮೆಟಾಬಾಲಿಸಂ ನಿಧಾನಗತಿಯಾಗುತ್ತದೆ. ಬೆಳಗ್ಗೆ ಎದ್ದಾಗಲೇ ಮೆಟಬಾಲಿಸಂ ಕಡಿಮೆಯಾಗಿರುತ್ತದೆ. ಒಂದು ವೇಳೆ ಬ್ರೇಕ್ ಫಾಸ್ಟ್ ಮಿಸ್ ಮಾಡಿದರೆ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ.
undefined
ಉಪಹಾರ ಸ್ಕಿಪ್ ಮಾಡಿದರೆ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುತ್ತದೆ. ಇದರಿಂದ ಹಸಿವು, ಕೋಪ ಎಲ್ಲವೂ ಜೊತೆಯಾಗಿ ಉಂಟಾಗುತ್ತದೆ. ಅಷ್ಟೇ ಅಲ್ಲ ಮೆದುಳಿನ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ನೆನಪು ಶಕ್ತಿ ಮತ್ತು ಏಕಾಗ್ರತೆಯನ್ನು ಕುಂದಿಸುತ್ತದೆ. ಯಾವುದೇ ಕೆಲಸ ಮಾಡಲು ಆಸಕ್ತಿ ಇರೋದಿಲ್ಲ.
undefined
ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡಿದರೆ ಮಧ್ಯಾಹ್ನದವರೆಗೆ ಹೊಟ್ಟೆ ಫುಲ್ ಆಗಿರುತ್ತದೆ. ಆದರೆ ಬ್ರೇಕ್ ಫಾಸ್ಟ್ ಮಿಸ್ ಮಾಡಿಕೊಂಡರೆ ಹಸಿವು ಹೆಚ್ಚುತ್ತದೆ. ಇದರಿಂದ ಅನಾರೋಗ್ಯಕರ ಆಹಾರ ಸೇವನೆ ಮಾಡು ಚಾನ್ಸಸ್ ಇದೆ. ಜೊತೆಗೆ ಮೆದುಳು ಯೋಚನೆ ಮಾಡುವ ಶಕ್ತಿಯನ್ನು ಕಡಿಮೆ ಮಾಡುತ್ತದೆ.
undefined
ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹವಾಗುತ್ತದೆ. ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಆಸ್ಟಿಯೋಪೋರೋಸಿಸ್ ಗೆ ಗುರಿಯಾಗುವ ಸಂಭವ ಹೆಚ್ಚಾಗುತ್ತದೆ. ಜೊತೆಗೆ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಪ್ರಜ್ಞೆ ತಪ್ಪಿ ಬೀಳುವ ಸಾಧ್ಯತೆ ಇದೆ. ಆದುದರಿಂದ ಮಿಸ್ ಮಾಡಬೇಡಿ.
undefined
ಉಪಾಹಾರವನ್ನು ಬಿಟ್ಟಾಗ, ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. "ಉಪವಾಸದ ಅವಧಿಗಳು ಜೀವಕೋಶಗಳಿಗೆ ಹಾನಿಯನ್ನು ಉಂಟುಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಪ್ರತಿರಕ್ಷಣಾ ಜೀವಕೋಶಗಳ ಆರೋಗ್ಯಕರ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ದೇಹದಲ್ಲಿ ಫೈಟರ್ ಸೆಲ್ ಗಳ (ಟಿ-ಸೆಲ್ ಗಳು) ಕ್ರಿಯೆಯನ್ನು ಸುಧಾರಿಸಲು ನಿಯಮಿತವಾಗಿ ಆಹಾರವನ್ನು ಸೇವಿಸುತ್ತಿರಬೇಕು" ಎನ್ನಲಾಗಿದೆ.
undefined
ಬ್ರೇಕ್ ಫಾಸ್ಟ್ ಮಿಸ್ ಮಾಡಿಕೊಂಡರೆ ಋತು ಸ್ರಾವದ ಸಂದರ್ಭದಲ್ಲಿ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಹಾರ್ಮೋನ್ ಏರುಪೇರು ಮತ್ತು ಒತ್ತಡ ಮೊದಲಾದ ಸಮಸ್ಯೆಗಳಿಗೆ ತುತ್ತಾಗುತ್ತಾರೆ.
undefined
ಉಸಿರಾಡುವಾಗ ಹಾಗು ಬಾಯಿಯಿಂದ ದುರ್ಗಂಧ ಬರುವ ಸಾಧ್ಯತೆ ಇದೆ. ದೇಹಕ್ಕೆ ಬೇಕಾದ ನ್ಯೂಟ್ರಿಯೆಂಟ್ಸ್ ಗಳು ಸಿಗೋದಿಲ್ಲ. ಆಮೇಲೆ ಔಷಧಿಗಳ ಮೊರೆ ಹೋಗ ಬೇಕಾಗಬಹುದು.
undefined
ಬೆಳಗಿನ ಉಪಾಹಾರ ಸೇವಿಸದೇ ಇರುವ ಕಾರಣ ಅಸಿಡಿಟಿ ಹೆಚ್ಚಾಗುವುದು. "ದೇಹಕ್ಕೆ ಹಸಿವಾದಾಗ ಮತ್ತು ಇಂಧನದ ಅವಶ್ಯಕತೆ ಇದ್ದಾಗ, ಹೊಟ್ಟೆಯಲ್ಲಿ ಏನು ಇಲ್ಲದೇ ಇರುವಾಗ ಆಮ್ಲವನ್ನು ಬಿಡುಗಡೆಯಾಗುತ್ತವೆ. ಇದರಿಂದ ಆಸಿಡಿಟಿ ಹೆಚ್ಚುವ ಸಾಧ್ಯತೆ ಇದೆ.
undefined
ಮೆದುಳಿಗೆ ಗ್ಲುಕೋಸ್ ನಂತಹ ಇಂಧನದ ಕೊರತೆಯು ಮೆದುಳಿನ ಜೀವಕೋಶಗಳ ಕಾರ್ಯಚಟುವಟಿಕೆಯ ಕುಸಿತಕ್ಕೆ ಕಾರಣವಾಗುತ್ತದೆ- ಇದೇ ಕಾರಣಕ್ಕೆ ಸ್ವಲ್ಪ ಸಮಯ ಊಟ ಮಾಡದಿದ್ದಾಗ ತಲೆನೋವು ಮತ್ತು ತಲೆಸುತ್ತುವಿಕೆ ಮೊದಲಾದ ಸಮಸ್ಯೆಗಳನ್ನು ಅನುಭವಿಸಬಹುದು.
undefined
ಬೆಳಗ್ಗಿನ ಜಾವದಲ್ಲಿ ಆಹಾರ ಮಿಸ್ ಮಾಡಿದರೆ ಒಬಾಸಿಟಿ ಉಂಟಾಗುತ್ತದೆ. ಅಂದರೆ ಬೊಜ್ಜು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಆದುದರಿಂದ ಮಿಸ್ ಮಾಡಲೇಬೇಡಿ.
undefined
click me!