Food and Health: ತೆಳ್ಳಗೆ ಆಗ್ಬೇಕು ಅಂದ್ರೆ ಅನ್ನ, ರೊಟ್ಟಿ ಒಟ್ಟಿಗೆ ತಿನ್ಬೇಡಿ!

First Published Dec 5, 2021, 4:24 PM IST

ಮಧ್ಯಾಹ್ನ ಅಥವಾ ರಾತ್ರಿ ಊಟವಾಗಿರಲಿ, ಹೆಚ್ಚಿನ ಜನರು ಒಟ್ಟಿಗೆ ರೊಟ್ಟಿ ಮತ್ತು ಅನ್ನವನ್ನು  ತಿನ್ನಲು ಬಯಸುತ್ತಾರೆ, ಆದರೆ ತಜ್ಞರ ಪ್ರಕಾರ, ಈ ಅಭ್ಯಾಸಕ್ಕೆ ಕೆಲವು ಅನಾನುಕೂಲಗಳಿವೆ. ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನುವುದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಿ. 

ಪ್ರತಿದಿನ ಅನ್ನವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ (good health). ಅಕ್ಕಿಯಂತಹ ಹೆಚ್ಚಿನ ನಾರಿನ ಆಹಾರಗಳನ್ನು ಸೇವಿಸುವುದು ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ! ಅಕ್ಕಿಯ ಹೆಚ್ಚಿನ ನಾರಿನ ಗುಣಲಕ್ಷಣಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. 

ಸಮೃದ್ಧವಾದ ಬಿಳಿ ಅಕ್ಕಿಯು ಫೋಲೇಟ್ (folic acid) ಅನ್ನು ಹೊಂದಿರುತ್ತದೆ, ಇದನ್ನು ಗರ್ಭಿಣಿ ಮಹಿಳೆಯರು ಮತ್ತು ಸ್ತನ್ಯಪಾನ ಮಾಡುವ ಮಹಿಳೆಯರಿಗೆ ಶಿಫಾರಸು ಮಾಡಲಾಗುತ್ತದೆ. ಫೋಲಿಕ್ ಆಮ್ಲವು ದೇಹವು ಡಿಎನ್ ಎ ಮತ್ತು ಇತರ ಆನುವಂಶಿಕ ವಸ್ತುಗಳನ್ನು ತಯಾರಿಸಲು ಸಹಾಯ ಮಾಡುತ್ತದೆ ಮತ್ತು ಜೀವಕೋಶ ವಿಭಜನೆಯನ್ನು ಬೆಂಬಲಿಸುತ್ತದೆ. 

ಚಪಾತಿಯನ್ನು ನಿಯಮಿತವಾಗಿ ಸೇವನೆ ಮಾಡುವುದು ಸಹ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ನೀವು ಆರೋಗ್ಯವಾಗಿ ಮತ್ತು ಸದೃಢವಾಗಿರಲು ಸಹಾಯ ಮಾಡುತ್ತದೆ.ಇದು ನಮ್ಮ ದೇಹಕ್ಕೆ ತುಂಬಾ ಪೌಷ್ಟಿಕವಾಗಿದೆ. ಇದು ಸಮೃದ್ಧ ಪ್ರೋಟೀನ್ ಅನ್ನು ಹೊಂದಿರುತ್ತದೆ, ಮತ್ತು ಇದರಲ್ಲಿ ಕೊಬ್ಬು, ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್ ಗಳು ಕಡಿಮೆ.

ಚಪಾತಿ ಮತ್ತು ಅನ್ನ ಬೇರೆ ಬೇರೆ ರೀತಿಯಲ್ಲಿ ಉತ್ತಮ ಅರೋಗ್ಯ ಲಾಭಗಳನ್ನು (health benefits) ಹೊಂದಿದೆ. ಆದರೆ ಎರಡನ್ನು ಜೊತೆಯಾಗಿ ಸೇವನೆ ಮಾಡಿದರೆ ಹಲವು ಅರೋಗ್ಯ ಸಮಸ್ಯೆಗಳು ಕಾಡುತ್ತವೆ. ಆದುದರಿಂದ ಚಪಾತಿ ಮತ್ತು ಅನ್ನವನ್ನು ಜೊತೆಯಾಗಿ ಯಾಕೆ ಸೇವನೆ ಮಾಡಬಾರದು ಎಂದು ನೋಡೋಣ. 

ಕ್ಯಾಲೊರಿ ಸೇವನೆ ಹೆಚ್ಚಾಗುತ್ತದೆ (high calories)
ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ಭಾರವಾಗುತ್ತದೆ ಮತ್ತು ನಿದ್ರೆ ಬರುವುದಿಲ್ಲ. ತಜ್ಞರ ಪ್ರಕಾರ, ನೀವು ಅನ್ನವನ್ನು ತಿನ್ನುತ್ತಿದ್ದರೆ, ಅನ್ನವನ್ನು ಮಾತ್ರ ತಿನ್ನಿ ಮತ್ತು ನೀವು ರೊಟ್ಟಿ ತಿನ್ನುತ್ತಿದ್ದರೆ,ರೊಟ್ಟಿ ಮಾತ್ರ ತಿನ್ನಿ.
 

ಬೊಜ್ಜು ಸಮಸ್ಯೆ (obesity problem)
ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ರೊಟ್ಟಿಯೊಂದಿಗೆ ಅನ್ನವನ್ನು ತಿನ್ನುವುದರಿಂದ  ಕ್ಯಾಲೊರಿ ಸೇವನೆ ಹೆಚ್ಚಾಗುತ್ತದೆ. ಇದರಿಂದ ಬೊಜ್ಜು ಬರಬಹುದು. ಆದುದರಿಂದ ಯಾವುದಾದರೂ ಒಂದನ್ನು ಮಾತ್ರ ಸೇವಿಸಿ. ಎರಡು ಸೇವಿಸಲು ಹೋಗಬೇಡಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. 

ಅಜೀರ್ಣ ಮತ್ತು ಗ್ಯಾಸ್  ಸಮಸ್ಯೆ (gastric problem)
ಕೆಲವರು ರೊಟ್ಟಿ  ತಿಂದ ನಂತರವೂ ಹೆಚ್ಚು ಅನ್ನ ತಿನ್ನುತ್ತಾರೆ. ಇದರಿಂದ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಬರಬಹುದು. ಎರಡು ಬೇರೆ ಬೇರೆಯಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಆದುದರಿಂದ ಸಾಧ್ಯವಾದಷ್ಟು ಒಂದು ಸಮಯದಲ್ಲಿ ಒಂದನ್ನು ಮಾತ್ರ ಸೇವಿಸಿ. ಎರಡನ್ನು ಸೇವಿಸಬೇಡಿ. 

ವಿಸರ್ಜಿಸುವ ಪ್ರಕ್ರಿಯೆಯು ನಿಧಾನವಾಗುತ್ತದೆ
ರಾತ್ರಿ ಅನ್ನವಲ್ಲ, ರೊಟ್ಟಿ ಮಾತ್ರ ತಿನ್ನಿ. ಎರಡೂ ವಸ್ತುಗಳನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು (stomach upset) ಉಂಟಾಗಬಹುದು. ವಿಘಟನೆಯ ಪ್ರಕ್ರಿಯೆಯು ರಾತ್ರಿಯಲ್ಲಿ ನಿಧಾನವಾಗಿರುತ್ತದೆ, ಆದ್ದರಿಂದ ಲಘು ಆಹಾರವನ್ನು ಸೇವಿಸಿ. ರೊಟ್ಟಿ  ಸುಲಭವಾಗಿ ಜೀರ್ಣವಾಗುತ್ತದೆ.

ಸಕ್ಕರೆ ಸಮಸ್ಯೆ (sugar problem)
ಹೆಚ್ಚು ಅನ್ನ ಸೇವಿಸುವುದರಿಂದ ಬೊಜ್ಜು ಮತ್ತು ಸಕ್ಕರೆ ಸಮಸ್ಯೆಯೂ ಬರಬಹುದು. ಇದರಿಂದ ಹೃದಯ ಮತ್ತು ಕಿಡ್ನಿ ಸಮಸ್ಯೆ ಉಂಟಾಗಬಹುದು.ಆದುದರಿಂದ ರಾತ್ರಿ ಚಪಾತಿ ಮಾತ್ರ ಸೇವನೆ ಮಾಡುವುದು ಉತ್ತಮ. ಇದರಿಂದ ರಕ್ತದ ಮಟ್ಟ ಸಮತೋಲಿತವಾಗಿರುತ್ತದೆ. 

click me!