ಸರಿಯಾಗಿ ಹೊಟ್ಟೆ ಹಾಕಿ ಕೊಳ್ಳದೇ ಹೋದರೆ, ಬೇರೆ ಬೇರೆ ರೋಗ ಕಾಡೋದು ಗ್ಯಾರಂಟಿ!

First Published | May 3, 2023, 5:19 PM IST

ಅನೇಕ ಬಾರಿ ನಾವು ನಮ್ಮ ವೇಗದ ದಿನಚರಿಯಲ್ಲಿ ಎಷ್ಟು ಬ್ಯುಸಿಯಾಗಿ ಬಿಡುತ್ತೇವೆ ಅಂದ್ರೆ ಸರಿಯಾಗಿ ತಿನ್ನೋದೆ ಇಲ್ಲ. ಆದರೆ ಈ ಅಭ್ಯಾಸ ತುಂಬಾ ತಪ್ಪು. ನೀವು ಸರಿಯಾಗಿ ತಿನ್ನದೇ ಇದ್ರೆ ಅದರ ರೋಗಲಕ್ಷಣಗಳು ದೇಹದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ.

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ದೇಹವು ಸಾಕಷ್ಟು ಕ್ಯಾಲೊರಿಗಳನ್ನು ಪಡೆಯದಿದ್ದಾಗ, ನಮ್ಮ ದೇಹವು ಅದರ ಕೆಲಸವನ್ನು ಸರಾಗವಾಗಿ ಮಾಡಲು ಸಾಧ್ಯವಾಗೋದಿಲ್ಲ. ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು ಇದರಿಂದ ಅಗತ್ಯ ಕ್ಯಾಲೊರಿಗಳು ದೇಹವನ್ನು ತಲುಪಬಹುದು. ನಾವು ಸರಿಯಾಗಿ ತಿನ್ನದಿದ್ದಾಗ, ಅದರ ಅನೇಕ ಚಿಹ್ನೆಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಹೌದು, ಮಸಾಲೆಯುಕ್ತ ಆಹಾರವನ್ನು (spicy food) ತಿನ್ನುವುದು ಗ್ಯಾಸ್ಟ್ರಿಕ್ ಗೆ ಕಾರಣವಾಗುವಂತೆ, ಹೆಚ್ಚು ಸಕ್ಕರೆ ತಿನ್ನುವುದು ಮೊಡವೆಗಳಿಗೆ ಕಾರಣವಾಗಬಹುದು, ಅದೇ ರೀತಿ, ನೀವು ಸರಿಯಾಗಿ ತಿನ್ನದಿದ್ದರೆ, ನಿಮ್ಮ ದೇಹದಲ್ಲಿ ಅನೇಕ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. 

Latest Videos


ಇಲ್ಲಿ ನೀಡಲಾದ ಯಾವುದೇ ಲಕ್ಷಣ ಕಂಡು ಬಂದ ತಕ್ಷಣ ಜಾಗೃತರಾಗಿ ಮತ್ತು ನಿಮ್ಮ ಆಹಾರದ ಬಗ್ಗೆ ಗಮನ ಹರಿಸಿ, ಇಲ್ಲದಿದ್ದರೆ ನಿಮ್ಮ ದೇಹವು ದುರ್ಬಲವಾಗಬಹುದು ಮತ್ತು ಅನೇಕ ರೋಗಗಳಿಗೆ ಗುರಿಯಾಗಬಹುದು. ಇಲ್ಲಿದೆ ನೋಡಿ ಆ ಬಗ್ಗೆ ಸಂಪೂರ್ಣ ಮಾಹಿತಿ : 

ನಿದ್ರೆ ಮಾಡಲು ಕಷ್ಟ (difficulty in sleep)
ನಿಮಗೆ ಇದರ ಬಗ್ಗೆ ಗೊತ್ತಿಲ್ದೇ ಇರಬಹುದು, ಆದರೆ ನೀವು ಸರಿಯಾಗಿ ತಿನ್ನದಿದ್ದರೆ, ದೇಹವು ಸರಿಯಾದ ಪೌಷ್ಠಿಕಾಂಶ ಪಡೆಯೋದಿಲ್ಲ. ಇದರಿಂದ ನಿದ್ರೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಸರಿಯಾಗಿ ನಿದ್ರೆ ಮಾಡಲು, ನಾವು ಸರಿಯಾದ ಪ್ರಮಾಣದ ಆಹಾರ ತಿನ್ನೋದು ಮತ್ತು ಆ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳೋದು ಬಹಳ ಮುಖ್ಯ. ಆದ್ದರಿಂದ ನಿಮಗೆ ಹಲವಾರು ದಿನಗಳವರೆಗೆ ಮಲಗಲು ಕಷ್ಟವಾಗುತ್ತಿದ್ದರೆ, ಆಹಾರದ ಬಗ್ಗೆ ಗಮನ ಹರಿಸಬೇಕು.  

ಮಲಬದ್ಧತೆ ಸಮಸ್ಯೆ (constipation)
ನೀವು ಸರಿಯಾಗಿ ತಿನ್ನದೇ ಇದ್ದರೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತೆ. ಮಲಬದ್ಧತೆ ಸಮಸ್ಯೆಯಿಂದಾಗಿ ಇತರ ಹಲವು ಕಾಯಿಲೆಗಳು ಸಹ ಸೇರಿಕೊಳ್ಳುವ ಸಾಧ್ಯತೆ ಇದೆ. ಈ ಸಮಸ್ಯೆ ಬಾರದೇ ಇರಲು ಸರಿಯಾಗಿ ಆಹಾರ ಸೇವಿಸೋದು ಮುಖ್ಯ. 

ಕಿರಿಕಿರಿ ಅನುಭವ (tiredness)
ಯಾವಾಗಲೂ ದಣಿದ ಅನುಭವ ಆಗ್ತಿದ್ರೆ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ, ಇದು ಸರಿಯಾದ ಪ್ರಮಾಣದ ಪೌಷ್ಠಿಕಾಂಶವು ನಿಮ್ಮ ದೇಹವನ್ನು ತಲುಪುತ್ತಿಲ್ಲ, ನಿಮ್ಮ ದೇಹವು ಅಗತ್ಯವಿರುವ ಕ್ಯಾಲೊರಿಗಳನ್ನು ಪಡೆಯುತ್ತಿಲ್ಲ ಎಂಬುದರ ಸಂಕೇತವಾಗಿದೆ. ಈ ಬಗ್ಗೆ ಗಮನ ಹರಿಸಿ.

ವ್ಯಾಯಾಮ ಮಾಡಬೇಕು ಅನಿಸೋದಿಲ್ಲ (No intrest in work out)
ಅನೇಕ ಬಾರಿ ಜನರು ವ್ಯಾಯಾಮದ ಮಾಡೋಕೆ ನೆಪಗಳನ್ನು ಹೇಳುತ್ತಾರೆ. ಇದರ ಹಿಂದಿನ ಒಂದು ಕಾರಣವೆಂದರೆ ಸರಿಯಾಗಿ ತಿನ್ನದಿರುವುದು. ನೀವು ಸರಿಯಾಗಿ ತಿನ್ನದಿದ್ದಾಗ, ದೇಹವು ದಣಿವಾಗುವಂತಹ ಯಾವುದೇ ಕೆಲಸವನ್ನು ಮಾಡಲು ಬಯಸುವುದಿಲ್ಲ, ಆದ್ದರಿಂದ ನಿಮ್ಮ ದೇಹವು ವ್ಯಾಯಾಮದಿಂದ ಹಿಂದೆ ಸರಿಯುತ್ತದೆ.

ಕಳಪೆ ಜೀರ್ಣಕ್ರಿಯೆ (poor digestion)
ದೇಹದಲ್ಲಿ ಸರಿಯಾದ ಪೌಷ್ಠಿಕಾಂಶದ ಕೊರತೆಯಿಂದಾಗಿ, ಅಜೀರ್ಣ ಸಮಸ್ಯೆಗಳನ್ನು ಸಹ ಉಂಟಾಗಬಹುದು. ದೀರ್ಘಕಾಲದವರೆಗೆ ಖಾಲಿ ಹೊಟ್ಟೆಯಲ್ಲಿರುವುದರಿಂದ ಅಥವಾ ಹಸಿವಿಗಿಂತ ಕಡಿಮೆ ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ಇದಲ್ಲದೆ, ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿರುವ ಸಮಸ್ಯೆಯೂ ಸಹ ಸಾಧ್ಯವಿದೆ. 
 

click me!