ಸರಿಯಾಗಿ ನಿದ್ದೆ ಮಾಡಿಲ್ಲಾಂದ್ರೆ ಬೇಗನೆ ಸಾವು: ತಜ್ಞರಿಂದ ಶಾಕಿಂಗ್ ಮಾಹಿತಿ ಬಹಿರಂಗ
First Published Jun 27, 2021, 3:19 PM ISTಸಾಕಷ್ಟು ನಿದ್ರೆ ಮಾನವ ದೇಹಕ್ಕೆ ಅಗತ್ಯವಿದೆ. ವೈದ್ಯರು ಸಾಮಾನ್ಯ ವ್ಯಕ್ತಿಗೆ 6 ರಿಂದ 8 ಗಂಟೆಗಳ ನಿದ್ರೆಯನ್ನು ಪಡೆಯಲು ಶಿಫಾರಸು ಮಾಡುತ್ತಾರೆ. ಸಾಕಷ್ಟು ನಿದ್ರೆ ಪಡೆಯುವುದು ದೇಹದ ಗಡಿಯಾರವನ್ನು (ಬಾಡಿ ಕ್ಲಾಕ್) ಸರಿಯಾಗಿರಿಸುತ್ತದೆ ಮತ್ತು ನಮ್ಮ ಇಡೀ ಜೀವನಶೈಲಿಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ನೀವು ರಾತ್ರಿಯಲ್ಲಿ ಉತ್ತಮ ನಿದ್ರೆ ಪಡೆಯದಿದ್ದರೆ, ಅದು ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು.