ಆಗಾಗ್ಗೆ ಉಸಿರಾಟದ ತೊಂದರೆ ಕಾಡುತ್ತಿದೆಯೇ? ಕಾರಣ ಏನಿರಬಹುದು ನೋಡಿ…

First Published | Oct 28, 2022, 3:18 PM IST

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿವೆ. ವೇಗವಾಗಿ ಓಡುವುದು ಅಥವಾ ಮೆಟ್ಟಿಲುಗಳನ್ನು ಹತ್ತುವುದು ಈ ರೀತಿಯ ಕೆಲವೊಂದು ಚಟುವಟಿಕೆಗಳನ್ನು ಮಾಡೋದರಿಂದ ಸ್ವಲ್ಪ ಸಮಯದವರೆಗೆ ಉಸಿರಾಡಲು ಕಷ್ಟವಾಗುತ್ತೆ. ಆದರೆ, ಈ ಸಮಸ್ಯೆಯನ್ನು ಕಡಿಮೆ ಸಮಯದಲ್ಲಿ ಗುಣಪಡಿಸಲಾಗುತ್ತೆ.  ಆದರೆ ಕೆಲವೊಮ್ಮೆ ಉಸಿರಾಡಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಇದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.

ಉಸಿರಾಟದ ತೊಂದರೆ (shortness of breath) ಅನ್ನೋದು ಒಬ್ಬ ವ್ಯಕ್ತಿಯು ಉಸಿರಾಡಲು ಸಂಪೂರ್ಣ ತೊಂದರೆ ಅನುಭವಿಸುವ ಮತ್ತು ಕೆಲವೊಮ್ಮೆ ಉಸಿರಾಡಲು ಕಷ್ಟಪಡುವಂತಹ ಒಂದು ಸ್ಥಿತಿಯಾಗಿದೆ. ನೀವು ಮೆಟ್ಟಿಲುಗಳನ್ನು ಏರುವಾಗ ಅಥವಾ ವೇಗವಾಗಿ ಓಡಿದಾಗ ಉಸಿರಾಡಲು ಕಷ್ಟಪಡುವಂತಹ ಸ್ಥಿತಿ ನಿರ್ಮಾಣ ಆಗುತ್ತೆ.  ಈ ಸ್ಥಿತಿಯು ಯಾವಾಗಲೂ ಗಂಭೀರವಾಗಿರೋದಿಲ್ಲ, ಆದರೆ ನೀವು ಪದೇ ಪದೇ ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದರೆ, ವೈದ್ಯರ ಬಳಿ ತೆರಳಿ ಹೃದಯ ಮತ್ತು ಶ್ವಾಸಕೋಶಗಳನ್ನು ಪರೀಕ್ಷಿಸಬೇಕು.

ಉಸಿರಾಟದ ತೊಂದರೆಗಳಿಗೆ ಕಾರಣವೇನು?
ಉಸಿರಾಟದ ತೊಂದರೆಯ ಹಿಂದೆ ಅನೇಕ ಕಾರಣಗಳಿರಬಹುದು. ಅಲರ್ಜಿಗಳಿಂದ ಹಿಡಿದು ಹೃದ್ರೋಗಗಳವರೆಗೆ, ಹಲವಾರು ಸಮಸ್ಯೆಗಳಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತೆ. ಆದ್ದರಿಂದ, ನಿಮಗೆ ಉಸಿರಾಟದ ತೊಂದರೆ ಉಂಟಾದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಉಸಿರಾಟದ ತೊಂದರೆಗಳಿಗೆ ಏನೇನು ಕಾರಣಗಳಿರಬಹುದು ಅನ್ನೋದನ್ನು ನೋಡೋಣ.

Latest Videos


ಅಸ್ತಮಾ: ಇದು ಶ್ವಾಸನಾಳಗಳು ಉಬ್ಬುವ ಮತ್ತು ಕಿರಿದಾಗುವ ಸ್ಥಿತಿಯಾಗಿದೆ. ಇದು ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು ಮತ್ತು ಉಸಿರಾಡಲು ಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಬಹುದು. ಅಸ್ತಮಾಕ್ಕೆ (Asthama) ಯಾವುದೇ ಚಿಕಿತ್ಸೆ ಇಲ್ಲ, ಅದರ ರೋಗಲಕ್ಷಣಗಳನ್ನು ಮಾತ್ರ ನಿಯಂತ್ರಿಸಬಹುದು.

ನ್ಯುಮೋನಿಯಾ: ಇದು ಶ್ವಾಸಕೋಶದ ಶ್ವಾಸನಾಳಗಳಲ್ಲಿ ಉರಿಯೂತವನ್ನು ಉಂಟುಮಾಡುವ ಒಂದು ಸೋಂಕಾಗಿದೆ. ಈ ಸಮಸ್ಯೆ ಉಂಟಾದರೆ ಶ್ವಾಸಕೋಶದ ಚೀಲವು ದ್ರವ ಅಥವಾ ಕೀವುಗಳಿಂದ ತುಂಬಿರಬಹುದು, ಇದು ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ. ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಇತರ ಜೀವಿಗಳು ನ್ಯುಮೋನಿಯಾಕ್ಕೆ ಕಾರಣವಾಗಬಹುದು. ನ್ಯುಮೋನಿಯಾಕ್ಕೆ (pneumonia), ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಮಾರಣಾಂತಿಕವಾಗಬಹುದು ಎಚ್ಚರ.

ಸಿಒಪಿಡಿ: ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಶ್ವಾಸಕೋಶದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ, ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಈ ಸ್ಥಿತಿಯ ಲಕ್ಷಣಗಳಲ್ಲಿ ಉಸಿರಾಟದ ತೊಂದರೆ, ಉಬ್ಬಸ ಮತ್ತು ಕೆಮ್ಮು ಸೇರಿರಬಹುದು. ಸ್ಮೋಕ್ ಮಾಡುವ ಜನರು ಸಿಒಪಿಡಿಯ (COPD)ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಕೊರೊನಾವೈರಸ್: ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ, ಯಾರಿಗಾದರೂ ಉಸಿರಾಡಲು ಕಷ್ಟವಾಗಿದ್ದರೆ, ಅವರು ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಸಿರಾಟದ ತೊಂದರೆಯು ಕೋವಿಡ್ ನ ಪ್ರಮುಖ ಲಕ್ಷಣವಾಗಿದೆ. ಈ ರೋಗಲಕ್ಷಣವನ್ನು (corona virus) ನಿರ್ಲಕ್ಷಿಸುವುದು ಮಾರಣಾಂತಿಕವಾಗಬಹುದು.

ಹೃದಯ ವೈಫಲ್ಯ: ಹೃದಯದ ಸ್ನಾಯುಗಳು ರಕ್ತವನ್ನು ಪಂಪ್ ಮಾಡದಿದ್ದಾಗ ಈ ಸ್ಥಿತಿಯು ಉಂಟಾಗುತ್ತೆ, ಇದು ಅಂತಿಮವಾಗಿ ರಕ್ತವು ಮತ್ತೆ ಮೇಲಕ್ಕೆ ಬರಲು ಕಾರಣವಾಗುತ್ತದೆ ಮತ್ತು ಶ್ವಾಸಕೋಶಗಳಲ್ಲಿ ದ್ರವವು ಶೇಖರಣೆಯಾಗಲು ಪ್ರಾರಂಭಿಸುತ್ತದೆ, ಇದು (heart failure) ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.

ಹೃದಯಾಘಾತ: ಉಸಿರಾಟದ ತೊಂದರೆಯು ಹೃದಯಾಘಾತದ (heart attack) ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಹೃದಯವು ರಕ್ತದ ಹರಿವನ್ನು ನಿರ್ಬಂಧಿಸಿದಾಗ ಅಥವಾ ಕಡಿಮೆ ಮಾಡಿದಾಗ ಹೃದಯಾಘಾತ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ಹೃದಯದ ಅಪಧಮನಿಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ನಿರ್ಮಾಣದಿಂದಾಗಿ ಉಂಟಾಗುತ್ತೆ. 
 

ಸ್ಥೂಲಕಾಯ: ಇದು ದೇಹದಲ್ಲಿ ಕೊಬ್ಬಿನ ಪ್ರಮಾಣವು ತುಂಬಾ ಹೆಚ್ಚಾಗುವ ಸ್ಥಿತಿಯಾಗಿದೆ. ಇದರಿಂದಾಗಿ, ಹೃದ್ರೋಗದಿಂದ ಹಿಡಿದು ಕ್ಯಾನ್ಸರ್ ನಂತಹ ಅನೇಕ ರೀತಿಯ ರೋಗಗಳಿಗೆ ಕಾರಣವಾಗುತ್ತೆ. ಸ್ಥೂಲಕಾಯವು (obesity)ಉಸಿರಾಟದ ತೊಂದರೆಗೆ ಸಹ ಕಾರಣವಾಗಬಹುದು. ಆದ್ದರಿಂದ, ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಮುಖ್ಯ.

click me!