ಹೃದ್ರೋಗ- ತೂಕ ಕಡಿಮೆ : ಮೆಣಸಿನಕಾಯಿಯ ಪ್ರಯೋಜನ ಹತ್ತು ಹಲವು!

First Published | Jan 26, 2021, 4:28 PM IST

ಮೆಣಸಿನ ಕಾಯಿ ಅಂದರೆ ಮೊದಲು ನೆನಪಾಗುವುದು ಅದರ ಖಾರ. ಆದರೆ ಮೆಣಸಿನ ಕಾಯಿಗಳು ಆಹಾರಕ್ಕೆ ರುಚಿ ಮಾತ್ರ ನೀಡುವುದಲ್ಲ ಜೊತೆಗೆ ಆರೋಗ್ಯಕ್ಕೆ ಸಹ ಸಹಾಯಕಾರಿ ಗೊತ್ತಾ? ಹೌದು ಮೆಣಸಿನ ಕಾಯಿಗಳ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. 

ಭಾರತದ ಬೇರೆ ಬೇರೆ ರಾಜ್ಯಗಳಲ್ಲಿಸುಮಾರು ಹತ್ತು ಬಗೆಯ ಮೆಣಸಿನಕಾಯಿಗಳು ದೊರೆಯುತ್ತವೆ.
ಭಾರತೀಯ ಆಹಾರಗಳು ಮೆಣಸಿನಕಾಯಿ ಇಲ್ಲದೆ ಅಪೂರ್ಣ. ಹೊರತಾಗಿ, ಮೆಣಸಿನಕಾಯಿಗಳು ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
Tap to resize

ಮೆಣಸಿನಕಾಯಿಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯುದು, ಕೀಲು ನೋವು ನಿವಾರಿಸುತ್ತವೆ. ಅಷ್ಟೇ ಅಲ್ಲ ತೂಕ ಇಳಿಸಲು, ಮೈಗ್ರೇನ್ ಹಾಗೂ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.
ಮೆಣಸಿನಕಾಯಿ ಸೇವೆನೆ ಅಲರ್ಜಿಯನ್ನು ತಡೆಯುತ್ತವೆ ಮತ್ತು ಇತರ ಹಲವುಪ್ರಯೋಜನಗಳನ್ನು ಹೊಂದಿದೆ.
ಹಸಿರು ಮತ್ತು ಕೆಂಪು ಮೆಣಸಿನಕಾಯಿಗಳ ಪ್ರಯೋಜನಗಳು ಇಲ್ಲಿವೆ. ಮೊದಲಿಗೆ, ಹಸಿರು ಮೆಣಸಿನಕಾಯಿಯ ಪ್ರಯೋಜನಗಳೇನು ನೋಡೋಣ.
ಹಸಿರು ಮೆಣಸಿನಕಾಯಿಗಳಲ್ಲಿ ನಾರಿನ ಆಂಶ ಹಾಗೂ ವಿಟಮಿನ್‌ ಸಿ ಅಂಶ ಹೆಚ್ಚಿರುವ ಕಾರಣ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಡಯಾಬಿಟಿಸ್‌ಗೆ ಉತ್ತಮ. ಹಸಿರು ಮೆಣಸು ಇನ್ಸುಲಿನ್‌ ಮಟ್ಟವನ್ನು ಕಂಟ್ರೋಲ್‌ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಅಂಶವನ್ನು ಬ್ಯಾಲೆನ್ಸ್‌ ಮಾಡುತ್ತದೆ.
ಕ್ಯಾಲೋರಿ ಬರ್ನ್‌ ಮಾಡಲು ಸಹಾಯ ಮಾಡುವುದರ ಜೊತೆಗೆ ಮೆಟಾಬಲಿಸಮ್‌ ಅನ್ನು ಹೆಚ್ಚಿಸಿ ತೂಕ ಇಳಿಸಲು ನೆರವಾಗುತ್ತದೆ ಹಸಿ ಮೆಣಸಿನ ಸೇವನೆ.
ಹಸಿ ಮೆಣಸಿನಲ್ಲಿರುವ ಬಿಟಾ ಕ್ಯಾರೊಟೀನ್‌ ಆಂಶ ಹೃದಯವನ್ನುಆರೋಗ್ಯವಾಡಿಲು ಸಹಾಯಮಾಡುತ್ತದೆ.
ಇವುಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹಾಗೂ ಕೆಲವು ನ್ಯಾಚುರಲ್‌ ಅಂಶಗಳು ಶ್ವಾಸಕೋಶ, ಬಾಯಿ, ಕರಳು ಮತ್ತು ಗಂಟಲು ಕ್ಯಾನ್ಸರ್‌ ವಿರುದ್ಧ ಹೋರಾಡುತ್ತವೆ.
ಕೆಂಪು ಮೆಣಸಿನ ಕಾಯಿಯ ಉಪಯೋಗಗಳು ಇಲ್ಲಿವೆ.
ಕೆಂಪು ಮೆಣಸಿಸ ಪುಡಿಯಲ್ಲಿರುವ ಅಧಿಕ ಪೊಟ್ಯಾಷಿಯಂ ಆಂಶ ರಕ್ತದೊತ್ತಡವನ್ನು ನಿಯಂತ್ರಿಸಬಲ್ಲದು.
ಮಿಟಮಿನ್‌ ಸಿ ಆಗರ.
ಇವುಗಳಲ್ಲಿರುವ ಆಂಟಿಆಕ್ಸಿಡೆಂಟ್ಸ್‌ ರಕ್ತನಾಳದಲ್ಲಿರುವ ಬ್ಲಾಕ್‌ಗಳನ್ನು ನಿವಾರಿಸುತ್ತದೆ.
ಕೆಂಪು ಮೆಣಸಿನ ಪುಡಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ಕಾಂಪೌಂಡ್‌ ಮೆಟಾಬಲಿಸಮ್‌ ಅನ್ನು ಹೆಚ್ಚಿಸಿ ಕೊಬ್ಬನ್ನು ಸುಡುತ್ತದೆ. ಇದು ಸಂತೋಷದ ಹಾರ್ಮೋನುಗಳನ್ನು ಸಹ ಉತ್ಪಾದಿಸುವ ಮೂಲಕ ಸೆಕ್ಸ್‌ ಲೈಫ್‌ ಇಂಪ್ರೂವ್‌ ಮಾಡುತ್ತದೆ.

Latest Videos

click me!