Weight Lose Tips: ಸಂಜೆಯಾದ್ಮೇಲೆ ಮಾಡಬಾರದ ತಪ್ಪುಗಳಿವು!

First Published Dec 8, 2021, 8:21 PM IST

ವಿಶ್ವದ ಲಕ್ಷಾಂತರ ಜನರು ಬೊಜ್ಜು ಮತ್ತು ಅಧಿಕ ತೂಕದಿಂದ  (weight gain) ಬಳಲುತ್ತಿದ್ದಾರೆ. ಅದನ್ನು ತೊಡೆದು ಹಾಕಲು ಅವರು ಅನೇಕ ಕ್ರಮಗಳನ್ನು ತೆಗೆದುಕೊಂಡರೂ, ಅವುಗಳಲ್ಲಿ ಅನೇಕವು ತೂಕ ವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗುವುದಿಲ್ಲ. ಇದು ಜನರನ್ನು ಚಿಂತೆಗೀಡು ಮಾಡುತ್ತದೆ. 

ತೂಕ ಹೆಚ್ಚಳದೊಂದಿಗೆ ಅನೇಕ ರೋಗಗಳು ಸಹ ದೇಹವನ್ನು ಪ್ರವೇಶಿಸಲು ಪ್ರಾರಂಭಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಆದಷ್ಟು ಬೊಜ್ಜು (obesity) ದೂರ ಮಾಡಲು ಪ್ರಯತ್ನಿಸಬೇಕು. ಇಂದು ತೂಕ ಇಳಿಸುವ ಸಲಹೆಗಳ ಬಗ್ಗೆ ಹೇಳುತ್ತೇವೆ, ನೀವು ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ನೀವು ಸಂಜೆ 5 ಗಂಟೆಯ ನಂತರ ಈ 5 ತಪ್ಪುಗಳನ್ನು ಮಾಡಬಾರದು. 

ಯಾವುದೇ ಸಮಯದಲ್ಲಿ ತಿನ್ನುವುದು, ಇದನ್ನು ಮಾಡಬಾರದು  
ಅನೇಕ ಮಂದಿ ಹಸಿವನ್ನು ನಿಯಂತ್ರಿಸುವುದಿಲ್ಲ. ಹಸಿವಾದಾಗಲೆಲ್ಲಾ, ಅವರು ಏನನ್ನಾದರು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ಹೀಗೆ ಮಾಡುವುದು ಸರಿಯಲ್ಲ. ಇದರಿಂದ ಬೊಜ್ಜು ಹೆಚ್ಚಾಗುವ ಸಾಧ್ಯತೆ ಇದೆ. ಅದರಲ್ಲೂ ಸಂಜೆಯ ನಂತರ ತಿನ್ನಬಾರದು. 

ಹೆಚ್ಚು ಆಹಾರ ಸೇವಿಸುವ ಈ ಅಭ್ಯಾಸ ಹಗಲಿನಲ್ಲಿ ಈ ಅಭ್ಯಾಸ ಮುಂದುವರಿದರೆ ಹೆಚ್ಚು ಸಮಸ್ಯೆ ಇರೋದಿಲ್ಲ. ಏಕೆಂದರೆ ನಮಗೆ ನಡೆಯಲು ಸಾಕಷ್ಟು ಸಮಯವಿದೆ. ಆದರೆ ಸಂಜೆ 5 ರ ನಂತರ ಆಗಾಗ್ಗೆ ತಿಂಡಿ ಅಥವಾ ಲಘು ಊಟ ಸೇವಿಸಬೇಡಿ. ಹೀಗೆ ಮಾಡುವುದರಿಂದ ದೇಹದ ತೂಕ  ಹೆಚ್ಚಾಗುತ್ತದೆ (weight gain).

ಸಂಸ್ಕರಿಸಿದ ಆಹಾರವನ್ನು ಸೇವಿಸುವುದು
ಆಹಾರ ತಜ್ಞರ ಪ್ರಕಾರ ತಾಜಾ ಆಹಾರ ದೇಹದ ಪೋಷಣೆಗೆ ಉತ್ತಮ. ಆದಾಗ್ಯೂ, ಕೆಲವರು ಫ್ರಿಜ್ ಗಳು ಮತ್ತು ಕಪಾಟುಗಳಲ್ಲಿ ಸಂಗ್ರಹಿಸಲಾದ ಸಂಸ್ಕರಿಸಿದ ಆಹಾರ ತೆಗೆದು ಅಡುಗೆ ಮಾಡಿ ನಂತರ ತಿನ್ನುತ್ತಾರೆ. ಇದು ತಪ್ಪು . ಇದು ಬೇಡ ಬೇಡವೆಂದರೂ ತೂಕ ಹೆಚ್ಚಿಸುತ್ತದೆ. 

ಸಂಜೆ ಏನಾದರೂ ತಿನ್ನಬೇಕು ಎಂದು ಅನಿಸಿದರೂ ಒಣ  ಹಣ್ಣುಗಳನ್ನು (dry fruits) ತಿನ್ನಬಹುದು. ಇದಕ್ಕಿಂತ ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಬಹುದು. ಕರಿದ ತಿಂಡಿಗಳು, ಪಿಜ್ಜಾ ಮೊದಲಾದ ಆಹಾರಗಳನ್ನು ಸೇವಿಸಲೇಬೇಡಿ. ಇದರಿಂದ ತೂಕ ಹೆಚ್ಚಾಗುತ್ತದೆ. 

ಅತಿಯಾಗಿ ತಿನ್ನುವುದು 
ತೂಕ ಇಳಿಸಲು ಅನೇಕ ಜನರು ಹಗಲಿನಲ್ಲಿ ಆಹಾರದ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಾರೆ. ಇದರಿಂದ ರಾತ್ರಿ ಊಟ ಮಾಡುವ ಹೊತ್ತಿಗೆ ಅವರ ಹಸಿವು ಹೆಚ್ಚಾಗುತ್ತದೆ. ಇದರಿಂದಾಗಿ ಅವರು ಹೆಚ್ಚು ತಿನ್ನುತ್ತಾರೆ. ಇದರಿಂದ ತೂಕ ಹೆಚ್ಚುತ್ತದೆ. 

ಆಹಾರ ತಜ್ಞರು  ದಿನ ಮತ್ತು ರಾತ್ರಿ ಊಟದ ನಡುವೆ ಕನಿಷ್ಠ 8 ಗಂಟೆಗಳ ವ್ಯತ್ಯಾಸವಿರಬೇಕು ಎಂದು ಸಲಹೆ ನೀಡುತ್ತಾರೆ. ತೂಕ ಕಳೆದುಕೊಳ್ಳಲು (weight lose) ನೀವು ಹಗಲಿನಲ್ಲಿ ಭಾರೀ ಆಹಾರವನ್ನು ಹೊಂದಿರಬಹುದು, ಆದರೆ ರಾತ್ರಿ ಊಟವು ಕಡಿಮೆ ಮತ್ತು ಹಗುರವಾಗಿಡಬೇಕು.

ತಡರಾತ್ರಿಯವರೆಗೆ ಎಚ್ಚರವಾಗಿರುವುದು  
ವೈದ್ಯಕೀಯ ತಜ್ಞರ (medical expert) ಪ್ರಕಾರ, ತಡರಾತ್ರಿಯ ಎಚ್ಚರದ ಅಭ್ಯಾಸವು ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ವಾಸ್ತವವಾಗಿ, ತಡರಾತ್ರಿಯಲ್ಲಿ ಉಳಿಯುವ ಜನರು ಅನಾರೋಗ್ಯಕರ ಆಹಾರಗಳಾದ ತಿಂಡಿಗಳು, ಚಿಪ್ಸ್, ಕ್ರಿಸ್ಪ್ ಗಳನ್ನು ತಿನ್ನುತ್ತಾರೆ. ಅದು ಅವರಿಗೆ ಅಗತ್ಯವಿಲ್ಲ. ಈ ತಿಂಡಿಗಳು ದೇಹದೊಳಗೆ ಹೋಗಿ ಪೋಷಣೆ ನೀಡುವುದಿಲ್ಲ, ಆದರೆ ದೇಹದ ಕೊಬ್ಬನ್ನು ಮಾತ್ರ ಹೆಚ್ಚಿಸುತ್ತವೆ. ಇದು ದೇಹದ ತೂಕವನ್ನು ಹೆಚ್ಚಿಸುವಂತೆ ಮಾಡುತ್ತದೆ.

ನೇರವಾಗಿ ಪ್ಯಾಕೆಟಿನಿಂದ ಹೊರಗೆ ತೆಗೆದು ತಿನ್ನುವುದು?  
ಅನೇಕ ಜನರು  ರಾತ್ರಿಯಲ್ಲಿ ತಮ್ಮ ಚೀಲಗಳಿಂದ ಹೊರ ತೆಗೆದು ತಿನ್ನಲು ಪ್ರಾರಂಭಿಸುತ್ತಾರೆ. ಮನೆಯಿಂದ ಅಥವಾ ಹೊರಗಿನಿಂದ ಖರೀದಿಸಿದ ಆಹಾರ ಯಾವುದು, ಅದು ಆರೋಗ್ಯಕರವೇ ಎಂದು ಅವರು ನೋಡುವುದಿಲ್ಲ. ಪ್ಯಾಕೇಟ್ ಓಪನ್ ಮಾಡಿ ಇಡಿ, ಆಹಾರವನ್ನೇ ತಿಂದು ಮುಗಿಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ. 

ಊಟ ಮಾಡಿದ ನಂತರ ಅಥವಾ ಬೇರೆ ಪ್ಯಾಕೆಟ್ ತಿನಿಸು ತಿಂದ ನಂತರ ಹೆಚ್ಚು ತಿಂದಿರಬಹುದು, ಎಂದು ಜನ ಅರಿತುಕೊಳ್ಳುತ್ತಾರೆ. ಅಲ್ಲಿವರೆಗೆ ನಿರಂತರವಾಗಿ ತಿಂದುಕೊಂಡೆ ಹೋಗುತ್ತಾರೆ. ಆದ್ದರಿಂದ ನೀವು ಪ್ಯಾಕ್ ಮಾಡುವ ಯಾವುದೇ ಆಹಾರದ ಪ್ರಮಾಣ ಮತ್ತು ಗುಣಮಟ್ಟವನ್ನು ಪರಿಶೀಲಿಸಿ.

click me!