ಚಿನ್ನಾಭರಣದಿಂದ ಅಂದದ ಜೊತೆಗೆ ಆರೋಗ್ಯವೂ ವೃದ್ಧಿ

First Published Jun 14, 2021, 5:17 PM IST

ಚಿನ್ನದ ಆಭರಣಗಳನ್ನು ಧರಿಸುವುದು ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಪದ್ಧತಿ. ಹಬ್ಬಗಳು ಅಥವಾ ವಿವಾಹ ಸಮಾರಂಭಗಳಲ್ಲಿ, ಭಾರತೀಯ ಮಹಿಳೆಯರು ಹೆಚ್ಚಾಗಿ ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಚಿನ್ನವು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಹೂಡಿಕೆಗೆ ಉತ್ತಮ ಆಯ್ಕೆ. ದೀಪಾವಳಿ ಮತ್ತು ಅಕ್ಷಯ ತೃತೀಯದಂದು ಚಿನ್ನದ ಖರೀದಿಯನ್ನು ಶುಭವೆಂದು ಪರಿಗಣಿಸಲಾಗುತ್ತದೆ ಆದರೆ ಕೆಲವೇ ಜನರಿಗೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದಿದೆ.

ಹೌದು, ಚಿನ್ನದಲ್ಲಿ ಅನೇಕ ಗುಣಗಳಿವೆ ಎಂಬುದು ಸಂಶೋಧನೆಯಲ್ಲೂ ಸ್ಪಷ್ಟವಾಗಿದೆ. ಚಿನ್ನವು ನೈಸರ್ಗಿಕ ವಿಷಕಾರಿಯಲ್ಲದ ಖನಿಜವಾಗಿದ್ದು, ಇದು ನಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಚಿನ್ನದ ಆರೋಗ್ಯ ಪ್ರಯೋಜನಗಳನ್ನು ನಾವು ತಿಳಿಯೋಣ.
undefined
ಚಿನ್ನವು ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆಶುದ್ಧ ಚಿನ್ನದಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಇದನ್ನು ಪ್ರಾಯೋಗಿಕವಾಗಿ 1900ರ ದಶಕದ ಆರಂಭದಲ್ಲಿ ಶಸ್ತ್ರಚಿಕಿತ್ಸಕರು ಅಭ್ಯಾಸ ಮಾಡಿದರು. ನೋವು ಕಡಿಮೆ ಮಾಡಲು ಶಸ್ತ್ರಚಿಕಿತ್ಸಕನು ದೇಹದ ಉರಿಯೂತದ ಭಾಗಕ್ಕೆ ಚಿನ್ನದ ತುಂಡನ್ನು ಹಚ್ಚಿದ್ದನು.
undefined
ಚಿನ್ನದ ಉರಿಯೂತ ನಿವಾರಕ ಗುಣಗಳು ದೇಹದಲ್ಲಿ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ದೇಹವು ತಾಪಮಾನವನ್ನು ನಿಯಂತ್ರಿಸಲು ಸಹ ಚಿನ್ನ ಸಹಾಯಕ. ಚಿನ್ನದ ಹೊರತಾಗಿ, ಈ ಗುಣಲಕ್ಷಣಗಳು ಕಂಚಿನಲ್ಲಿದೆ.
undefined
ಋತುಬಂಧ ಹೊಂದಿರುವ ಮಹಿಳೆಯರಿಗೆ ಪ್ರಯೋಜನಕಾರಿನಿಜವಾದ ಚಿನ್ನವು ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ. ಚಳಿ ಮತ್ತು ಹಠಾತ್ ಜ್ವರದಂತಹ ದೇಹದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಋತುಬಂಧದ ಮಹಿಳೆಯರ ಸಮಸ್ಯೆ ಕಡಿಮೆ ಮಾಡಲು ಚಿನ್ನದ ಆಭರಣಗಳನ್ನು ಧರಿಸಬಹುದು.
undefined
ಗಾಯಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿದೇಹದಲ್ಲಿನ ಗಾಯಗಳಿಗೆ ಚಿಕಿತ್ಸೆ ನೀಡಲು ಚಿನ್ನಬಳಸಲಾಗುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಚಿನ್ನವು ಸೋಂಕನ್ನು ತಡೆಯುತ್ತದೆ ಮತ್ತು ಗಾಯಕ್ಕೆ ಹಚ್ಚಿದಾಗ ಅದನ್ನು ಸರಿಯಾಗಿ ಚಿಕಿತ್ಸೆ ಮಾಡುತ್ತದೆ ಎಂದು ಪ್ರಾಚೀನ ಪಠ್ಯಗಳು ತೋರಿಸುತ್ತವೆ.
undefined
ಚರ್ಮದ ಗುಣಮಟ್ಟವನ್ನು ಸುಧಾರಿಸುವುದು24 ಕ್ಯಾರೆಟ್ ಚಿನ್ನವು ಚರ್ಮದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚಿನ್ನವು ದೇಹದ ಜೀವಕೋಶಗಳನ್ನು ಪುನರುತ್ಪಾದಿಸುವಲ್ಲಿಯೂ ಸಹಾಯ ಮಾಡುತ್ತದೆ. ಎಸ್ಜಿಮಾ, ಶಿಲೀಂಧ್ರ ಸೋಂಕುಗಳು, ದದ್ದು, ಗಾಯಗಳು, ಕಿರಿಕಿರಿ ಮುಂತಾದ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಚಿನ್ನವನ್ನು ಬಳಸಲಾಗುತ್ತದೆ.
undefined
ನೈಸರ್ಗಿಕ ಉತ್ತೇಜಕಕೆಲವು ಅಧ್ಯಯನಗಳು ಕೊಲಾಯ್ಡಲ್ ಚಿನ್ನಜೀವಕೋಶಗಳಿಗೆ ನೈಸರ್ಗಿಕ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನರಕೋಶಗಳ ನಡುವೆ ವಿದ್ಯುತ್ ಸಂಕೇತಗಳಪ್ರಸರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತೋರಿಸುತ್ತವೆ.
undefined
ಇಮ್ಯೂನಿಟಿ ಬೂಸ್ಟರ್ಚಿನ್ನವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಜವಾದ ಚಿನ್ನದ ಆಭರಣಗಳನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ ಮತ್ತು ಹೀಗಾಗಿ ಚಿನ್ನವು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ.
undefined
ವೈದ್ಯರು ಚಿಕಿತ್ಸೆಯಲ್ಲಿ ಚಿನ್ನವನ್ನು ಬಳಸುತ್ತಾರೆಅಕ್ಯುಪಂಕ್ಚರ್ ವೈದ್ಯರು ನೋವನ್ನು ಕಡಿಮೆ ಮಾಡಲು ಮತ್ತು ದೇಹಕ್ಕೆ ಶಕ್ತಿಯ ಹರಿವನ್ನು ನೀಡಲು ಚಿನ್ನದ ತುದಿಯ ಸೂಜಿಗಳನ್ನು ಬಳಸುತ್ತಾರೆ. ಕೀಲುಗಳಲ್ಲಿ ಊತ ಮತ್ತು ನೋವಿಗೆ ಚಿಕಿತ್ಸೆ ನೀಡಲು ಇದು ವಿಶೇಷವಾಗಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
undefined
ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆಚಿನ್ನವು ಸಂಧಿವಾತದ ರೋಗ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಆದರೆ ಇದನ್ನು ಸಾಬೀತುಪಡಿಸಲು ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಆದಾಗ್ಯೂ, ಪ್ರಾಚೀನ ಪಠ್ಯಗಳು ಮತ್ತು ಸಾಂಪ್ರದಾಯಿಕ ವೈದ್ಯಕೀಯ ತಜ್ಞರು 24 ಕ್ಯಾರೆಟ್ ಚಿನ್ನಸಂಧಿವಾತಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
undefined
click me!