ಪದೇ ಪದೇ ತಲೆತಿರುಗಿತ್ತಿದ್ಯಾ? ಇಗ್ನೋರ್ ಮಾಡಲೇ ಬೇಡಿ..

Suvarna News   | Asianet News
Published : Jun 14, 2021, 04:21 PM IST

ದೇಹಕ್ಕೆ ಸುಸ್ತಾದಾಗ ಬೆವರುವುದು ಅಥವಾ ತಲೆ ತಿರುಗುವುದು ಸಾಮಾನ್ಯ. ಹಾಗಂತ ಯಾವುದೇ ಕಾರಣಕ್ಕೂ ಇಂತಹ ಸಮಸ್ಯೆಗಳನ್ನು ಕಡೆಗಣಿಸಬೇಡಿ. ಇದು ಮೂರ್ಛೆ ಹೋಗುವ ಲಕ್ಷಣಗಳೂ ಆಗಿರಬಹುದು. ಮೂರ್ಛೆ ಹೋಗುವ ಸಮಯದಲ್ಲಿ ದೇಹದ ಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳಿತು.

PREV
110
ಪದೇ ಪದೇ ತಲೆತಿರುಗಿತ್ತಿದ್ಯಾ? ಇಗ್ನೋರ್ ಮಾಡಲೇ ಬೇಡಿ..

ಪದೇ ಪದೇ ತಲೆ ಸುತ್ತುವಂತಾಗುತ್ತಿದೆ ಅಥವಾ ತಾತ್ಕಾಲಿಕವಾಗಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದೀರಿ ಎಂದಾದರೆ ದೇಹಕ್ಕೆ ಅಪಾಯಕಾರಿ ಒಡ್ಡುವ ಮುನ್ಸೂಚನೆಗಳಾಗಿರಬಹುದು. ಹಾಗಾಗಿ ಪ್ರಜ್ಞೆ ತಪ್ಪುವುದು ಸಾಮಾನ್ಯ ಎಂಬ ನಿರ್ಲಕ್ಷ್ಯ ಭಾವನೆ ಎಂದಿಗೂ ಬೇಡ. 
 
210

ತಲೆ ತಿರುಗುವಂತ ಅನುಭವ ಉಂಟಾದರೆ ಆ ಸಮಯದಲ್ಲಿ ಹೆಚ್ಚಿನ ಕೆಲಸಗಳು ಬೇಡ. ವಿಶ್ರಾಂತಿ ತೆಗೆದುಕೊಳ್ಳಿ. ಆಹಾರ ಕ್ರಮ ಬದಲಿಸಿಕೊಳ್ಳಿ. ಹೆಚ್ಚು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದೇಹದ ಸೃದೃಢವಾಗುತ್ತದೆ ಹಾಗೂ ನರದೌರ್ಬಲ್ಯದಂತಹ ಸಮಸ್ಯೆ ಪರಿಹಾರವಾಗುತ್ತದೆ.

310

ಆರೋಗ್ಯದಲ್ಲಿ ಏನೇ ಏರುಪೇರಾದರೂ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ. ಚಿಕ್ಕ ಸಮಸ್ಯೆಯೂ ಮುಂದೊಂದು ದಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟುಮಾಡಬಲ್ಲದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಯಾವುದೇ ನಿರ್ಲಕ್ಷ್ಯ ಬೇಡ.

410

ಲಕ್ಷಣಗಳು ಯಾವುದು?
* ತಲೆನೋವು
* ಪ್ರಜ್ಞೆ ತಪ್ಪುವುದು
* ತಲೆತಿರುಗುವುದು
* ಅಸ್ಥಿರತೆ ಅಥವಾ ದುರ್ಬಲತೆ

ಲಕ್ಷಣಗಳು ಯಾವುದು?
* ತಲೆನೋವು
* ಪ್ರಜ್ಞೆ ತಪ್ಪುವುದು
* ತಲೆತಿರುಗುವುದು
* ಅಸ್ಥಿರತೆ ಅಥವಾ ದುರ್ಬಲತೆ

510

ತಲೆ ನೋವು : ದಿಢೀರ್ ಆಗಿ ತಲೆ ನೋವು ಆರಂಭವಾಗುತ್ತದೆ. ಸಹಿಸಲು ಸಾಧ್ಯವಾಗದಷ್ಟು ನೋವು ಉಂಟಾಗುತ್ತದೆ. ಇದರ ಜೊತೆಗೆ ಉಸಿರಾಟದ ತೊಂದರೆಯೂ ಉಂಟಾಗಬಹುದು. 

610

ಪ್ರಜ್ಞೆ ತಪ್ಪುವುದು : ಸರಿಯಾಗಿ ಉಸಿರಾಟವಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಮೈಯೆಲ್ಲಾ ಬೆವರಿದ ಅನುಭವ ಆಗುತ್ತದೆ. ಪ್ರಜ್ಞೆ ತಪ್ಪುವಂತಾಗುತ್ತದೆ. 

710

ತಲೆ ತಿರುಗುವುದು : ಮೈ ಬೆವರಿದ ಅನುಭವ ಉಂಟಾಗುತ್ತದೆ. ಬಾಯಲ್ಲಿ ನೀರು ಇಲ್ಲದೆ ಒಣಗಿದಂತಾಗುತ್ತದೆ. ತಲೆ ತಿರುಗಿದಂತಾಗುತ್ತದೆ. 

810

ಅಸಮ ಹೃದಯ ಬಡಿತ. ಕೆಲವು ಸೆಕೆಂಡುಗಳ ಕಾಲ ಹೃದಯ ಬಡಿತ ತಾತ್ಕಾಲಿಕವಾಗಿ ನಿಲ್ಲುವುದರಿಂದ ಮೆದುಳಿಗೆ ರಕ್ತದ ಸಂಚಾರವು ಕೆಲಕಾಲ ಸ್ಥಗಿತಗೊಳ್ಳುತ್ತದೆ. ರಕ್ತದೊತ್ತಡ ಉಂಟಾಗುವುದರಿಂದ ಮೆದುಳಿಕೆ ರಕ್ತ ಪೂರೈಕೆ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

910

ಪರಿಹಾರಗಳೇನು? 
* ನಿಯಮಿತವಾಗಿ ಊಟ ಮಾಡಿ. ಊಟಮಾಡುವುದನ್ನು ಎಂದೂ ತಪ್ಪಿಸಬೇಡಿ
* ಸಾಕಷ್ಟು ನೀರು ಕುಡಿಯಿರಿ
* ಒಂದೇ ಸ್ಥಳದಲ್ಲಿ ತುಂಬಾ ಸಮಯದವರೆಗೆ ಕಾಲುಗಳನ್ನು ಅಲುಗಾಡಿಸದಯೇ ಹಾಗೆಯೇ ಇರಬೇಡಿ

1010

* ಮೂರ್ಛೆ ಕಾಯಿಲೆಯಿಂದ ಬಳಲುತ್ತಿದ್ದರೆ, ಆದಷ್ಟು ಬಿಸಿಲಿನಿಂದ ದೂರವಿರಿ
* ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆಯ ಸಮಸ್ಯೆಗೆ ಔಷಧಿಗಳನ್ನು ಸೂಚಿಸಿದಂತೆಯೇ ಸೇವನೆ ಮಾಡಿ
* ರಕ್ತದೊತ್ತಡವನ್ನು ನಿಯಂತ್ರಿಸಲು ನಿಯಮಿತವಾಗಿ ಉಪ್ಪು ಸೇವಿಸಿ.

click me!

Recommended Stories