ನೆಲನೆಲ್ಲಿ ತಂಬುಳಿ ಮಾಡಿ ಸೇವಿಸಿ.... ಅದರ ಮ್ಯಾಜಿಕಲ್ ಗುಣಗಳ ಬಗ್ಗೆ ನೀವೇ ತಿಳಿಯಿರಿ..

Suvarna News   | Asianet News
Published : Jun 14, 2021, 05:06 PM IST

ಕೆಲವು ಗಿಡಗಳು ಚಿಕ್ಕದಾಗಿದ್ದರೂ ಕೂಡಾ ಅದರಿಂದ ಪ್ರಯೋಜನಗಳು ಹೆಚ್ಚು. ನಮ್ಮ ಸುತ್ತಮುತ್ತಲೂ ಸಹ ಹಲವಾರು ಔಷಧೀಯ ಸಸ್ಯಗಳಿವೆ. ಅವುಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ನೆಲನೆಲ್ಲಿ ಸಸ್ಯವೂ ಕೂಡಾ ಆರೋಗ್ಯಕ್ಕೆ ಒಳ್ಳೆಯದು.

PREV
111
ನೆಲನೆಲ್ಲಿ ತಂಬುಳಿ ಮಾಡಿ ಸೇವಿಸಿ.... ಅದರ ಮ್ಯಾಜಿಕಲ್ ಗುಣಗಳ ಬಗ್ಗೆ ನೀವೇ ತಿಳಿಯಿರಿ..

ಮೊದಲೆಲ್ಲಾ ಜ್ವರ, ಶೀತ, ನೆಗಡಿಯಂತಹ ಲಕ್ಷಣಗಳು ಕಂಡು ಬಂದರೆ ನೆಲನೆಲ್ಲಿ ತಂಬುಳಿ ಅಥವಾ ಕಷಾಯವನ್ನು ಮಾಡಿ ಸೇವಿಸುತ್ತಿದ್ದರು. ದಿನನಿತ್ಯ ಒಂದು ಲೋಟ ಕಷಾಯ ಸೇವಿಸಿದರೆ ಜ್ವರ, ನೆಗಡಿ ತಲೆನೋವು ಎರಡೇ ದಿನಕ್ಕೆ ಮಾಯವಾಗಿ ಬಿಡುತ್ತದೆ. ಹೀಗಾಗಿ ನೆಲನೆಲ್ಲಿಗೆ ವಿಶೇಷ ಪ್ರಾಮುಖ್ಯತೆ ಅಂದಿನಿಂದಲೂ ಇದೆ.
 
211

ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಕೊರೊನಾ ಸೋಂಕು ತಗುಲದಿರಲು ರೋಗನಿರೋಧಕ ಶಕ್ತಿ ಹೆಚ್ಚಿರುವ ಪೌಷ್ಠಿಕಾಂಶಯುಕ್ತ ಆಹಾರ ನಮ್ಮದಾಗಿರಬೇಕು.

311

ಅನಾರೋಗ್ಯ ಸಮಸ್ಯೆ ಇದ್ದರೆ ಮನೆಯಲ್ಲಿಯೇ ಸಿಗುವ ಒಳ್ಳೆಯ ಸಸ್ಯಗಳಿಂದ ಪೌಷ್ಠಿಕಾಂಶವನ್ನು ಪಡೆದುಕೊಳ್ಳುವುದು ಉತ್ತಮ. 

411

ನೆಲನೆಲ್ಲಿಯಲ್ಲಿರುವ ರೋಗನಿರೋಧಕ ಶಕ್ತಿ  ಆರೋಗ್ಯವಾಗಿಡುವಂತೆ ನೋಡಿಕೊಳ್ಳುವುದರಿಂದ ಅದರ ಸದುಪಯೋಗ ಪಡೆದುಕೊಳ್ಳಬಹುದು.

511

ಸಾಮಾನ್ಯವಾಗಿ ಸರ್ಪಸುತ್ತು, ಏಡ್ಸ್, ನ್ಯುಮೋನಿಯಾ, ಚಿಕನ್ ಗುನ್ಯಾ ಕಾಯಿಲೆಗಳಿಗೆ ಕಾರಣವಾಗುವಂತಹ ವೈರಸ್ ಅನ್ನು ನಾಶಪಡಿಸುವ ಗುಣ ನೆಲನೆಲ್ಲಿ ಸಸ್ಯದಲ್ಲಿದೆ. 

611

ದೇಹದಲ್ಲಿ ಉರಿಯೂತ, ಮೂತ್ರದ ಸಮಸ್ಯೆಗಳಿಗೆ ಕೂಡಾ ಪರಿಹಾರವಾಗಿ ಕೆಲಸ ಮಾಡುತ್ತದೆ. ಮನೆಯಲ್ಲಿಯೇ ಅತಿ ಸುಲಭದಲ್ಲಿ ಸಿಗುವ ಈ ಸಸ್ಯದ ಪ್ರಯೋಜನ ಒಂದೆರಡಲ್ಲ.

711

ಪ್ರಸ್ತುತ ಸಮಯದಲ್ಲಂತೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಜ್ವರ, ಶೀತದಂತಹ ಲಕ್ಷಣಗಳು ಕಂಡು ಬಂದರೆ ಕಡೆಗಣಿಸುವಂತಿಲ್ಲ. ಹೀಗಿರುವಾಗ ನಮ್ಮ ಆರೋಗ್ಯದ ಸುರಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. 

811

ನೆಲನೆಲ್ಲಿಯ ಕಷಾಯ ಅಥವಾ ತಂಬುಳಿ ಮಾಡಿ ಸವಿಯುವ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

911

ನೆಲನೆಲ್ಲಿ ಎಂಬ ಹೆಸರೇ ಸೂಚಿಸುವಂತೆ ನೆಲದ ಮೇಲೆ ಚಿಕ್ಕ ಗಿಡಗಳಾಗಿ ಬೆಳೆಯುತ್ತವೆ. ಚಿಕ್ಕ ಸಸ್ಯಕ್ಕೆ ಚಿಕ್ಕದಾದ ಕಾಯಿ ಬಿಡುತ್ತದೆ. ಹಾಗಾಗಿ ನೆಲನೆಲ್ಲಿ ಎಂಬ ಹೆಸರು ಬಂದಿದೆ. 

1011

ಗಾಯ, ಕಜ್ಜಿ, ತುರಿಕೆ ಹಾಗೂ ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಹಳ್ಳಿಗಳಲ್ಲಿ ಹೆಚ್ಚು ಬಳಸುತ್ತಾರೆ. ಸಾಮಾನ್ಯವಾಗಿ ಚರ್ಮರೋಗದ ನಿವಾರಣೆಗೆ ಈ ಸಸ್ಯ ಬಳಸುವುದು ಹೆಚ್ಚು.

1111

ಮಹಿಳೆಯರಿಗೆ ಮಾಸಿಕ ಋತುಸ್ರಾವದಲ್ಲಿ ಅಧಿಕ ರಕ್ರಸ್ರಾವವಾಗುತ್ತದೆ. ಇಂತಹ ಸಮಯದಲ್ಲಿ ನೆಲನೆಲ್ಲಿಯನ್ನು ಸೇವಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

click me!

Recommended Stories