ಮುಖ ಕೆಂಪಾಗಿಸಿಕೊಂಂಡು ಕೋಪಿಸಿಕೊಳ್ತೀರಾ? ಹೀಗ್ ಮಾಡಿ ತಡೆದುಕೊಳ್ಳಿ...

First Published Mar 19, 2021, 5:04 PM IST

ಕೆಲವೊಮ್ಮೆ ಯಾವುದೋ ಕಾರಣಕ್ಕೆ ಎಲ್ಲರಿಗೂ ಕೋಪವೂ ಬರುತ್ತದೆ. ಯಾರಾದರೂ ನಾನು ಯಾವತ್ತೂ ಕೋಪಗೊಳ್ಳುವುದಿಲ್ಲ ಎಂದು ಹೇಳಬಹುದು, ಆದರೆ ಅದು ನಿಜವಲ್ಲ. ಏಕೆಂದರೆ ಕೋಪಗೊಳ್ಳುವುದು ಒಂದು ಸಾಮಾನ್ಯ ಭಾವನಾತ್ಮಕ ಪ್ರತಿಕ್ರಿಯೆ. ಹೌದು, ಕೋಪದ ವೇಗ ಮತ್ತು ಸನ್ನಿವೇಶಗಳ ನಡುವೆ ವ್ಯತ್ಯಾಸವಿದೆ. ಕೆಲವರು ಸಣ್ಣ ಸಣ್ಣ ವಿಷಯಕ್ಕೆ ಕೋಪಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸನ್ನವೇಶದಿಂದಾಗಿ ಕೋಪಗೊಳ್ಳುತ್ತಾರೆ.ಇಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಮೇಲೆ ತಾವೇ ನಿಯಂತ್ರಣ ಕಳೆದುಕೊಂಡು ಮುಂದೆ ಪಶ್ಚಾತ್ತಾಪ ಪಡುವಂತೆ ಮಾತನಾಡುತ್ತಾರೆ. ಅಂತಹವರನ್ನು ಶಾರ್ಟ್ -ಟೆಂಪರ್ಡ್ ಎಂದು ಕರೆಯಲಾಗುತ್ತದೆ. 

ನೀವು ತುಂಬಾ ಬೇಗ ಕೋಪಗೊಳ್ಳುತ್ತೀರಿ ಮತ್ತು ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದಾದರೆ ಆ ಅಭ್ಯಾಸವನ್ನು ಕಡಿಮೆ ಮಾಡಲು ಏನಾದರೂ ಮಾಡಲೇಬೇಕು. ಯಾಕೆಂದರೆ ಕೋಪವನ್ನು ನಿಯಂತ್ರಿಸಲು ಸಾಧ್ಯವಿರದಿದ್ದರೆ, ಇದರಿಂದ ಮುಂದೆ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದರಿಂದ ಆರೋಗ್ಯಕ್ಕೂ ಒಳ್ಳೆಯದಲ್ಲ. ಕೋಪವನ್ನು ನಿಯಂತ್ರಿಸಲು ಕೆಲವು ಮಾರ್ಗಗಳು ಇಲ್ಲಿವೆ.
undefined
ದೀರ್ಘವಾಗಿ ಉಸಿರಾಡಿಒಂದು ವೇಳೆ ಹೆಚ್ಚು ಹೆಚ್ಚು ಕೋಪಗೊಳ್ಳುತ್ತೀರಿ ಎಂದಾದಲ್ಲಿ, ಅಂತಹ ಸನ್ನಿವೇಶದಲ್ಲಿ ದೀರ್ಘವಾಗಿ ಉಸಿರಾಡಲು ಪ್ರಯತ್ನಿಸಿ. ಈ ಪರಿಹಾರವು ಧ್ಯಾನವಾಗಿ ಕೆಲಸ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ.
undefined
ಕೌಂಟ್ ಡೌನ್ ಮಾಡಿಕೋಪ ಬಂದಾಗ ಏನಾದರೂ ಮಾತನಾಡುವ ಮೊದಲು ಕೌಂಟ್ ಡೌನ್ ಮಾಡಲು ಪ್ರಾರಂಭಿಸಿ. ಇದು ಕೋಪದ ತೀವ್ರತೆಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ಹೇಳ ಹೊರಟಿರುವ ತಪ್ಪು ಪದಗಳನ್ನು ಆಡುವಾಗ ನಿಮ್ಮನ್ನು ನಿಯಂತ್ರಿಸಿಕೊಳ್ಳಬಹುದು.
undefined
ತಣ್ಣನೆಯ ನೀರು ಕುಡಿಯಿರಿಕೋಪ ಶಮನಗೊಳಿಸಲು ಒಂದು ಲೋಟ ತಣ್ಣೀರನ್ನು ಬಳಸಬಹುದು. ಕೋಪದ ತೀವ್ರತೆಯನ್ನು ಕಡಿಮೆ ಮಾಡುವ ಸಾಧ್ಯತೆ ಯಿದ್ದರೂ, ಪದಗಳ ಆಯ್ಕೆಯಿಂದಕೋಪ ನಿಯಂತ್ರಣ ಮಾಡಬಹುದು. ಇದರ ಜೊತೆಗೆ ಕೋಪ ಬಂದಾಗ ತಣ್ಣನೆಯ ನೀರು ಕುಡಿಯಿರಿ. ಇದು ಕೋಪವನ್ನು ನಿಯಂತ್ರಿಸಿ ನಿಮ್ಮ ಆರೋಗ್ಯ ಉತ್ತಮವಾಗಿರಲು ಪ್ರಯೋಜನಕಾರಿ.
undefined
ಸಂಗೀತವನ್ನು ಕೇಳಿಯಾವುದೋ ವಿಷಯದ ಬಗ್ಗೆ ಕೋಪದಲ್ಲಿದ್ದರೆ, ಮ್ಯೂಸಿಕ್ ಥೆರಪಿಮೊರೆ ಹೋಗಬೇಕು. ಕೋಪ ಬಂದರೆ, ಸಮಾಧಾನ ನೀಡುವಂತಹ ಹಾಡನ್ನು ಕೇಳಲು ಪ್ರಯತ್ನಿಸಿ, ಇದರಿಂದ ಕೋಪ ನಿಯಂತ್ರಣ ಮಾಡಬಹುದು.
undefined
ಧ್ಯಾನ ಮಾಡಿಕೋಪಕ್ಕೆ ಒಳಗಾಗುವುದು ಮತ್ತು ಬೇಗ ಕೋಪ ಮಾಡುವವರು ಪ್ರತಿದಿನ ಸ್ವಲ್ಪ ಧ್ಯಾನಮಾಡಬೇಕು. ಧ್ಯಾನವನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಕ್ರಮೇಣ ವ್ಯಕ್ತಿಯು ಕೋಪವನ್ನು ನಿಯಂತ್ರಿಸಲು ಕಲಿಯುತ್ತಾನೆ.
undefined
ಒಳ್ಳೆಯ, ಗಾಢ ನಿದ್ರೆ ಪಡೆಯಿರಿನಿದ್ದೆ ಮತ್ತು ಆಯಾಸದ ಅನುಪಸ್ಥಿತಿಯಲ್ಲಿ ಕೂಡ, ಜನರು ಕಿರಿಕಿರಿಗೆ ಒಳಗಾಗುತ್ತಾರೆ ಮತ್ತು ಬೇಗನೆ ಕೋಪಗೊಳ್ಳುತ್ತಾರೆ ಎಂದು ಅನೇಕ ಬಾರಿ ಗಮನಿಸಲಾಗಿದೆ. ಸಣ್ಣ ಮಾತುಗಳ ಬಗ್ಗೆ ಕೋಪ ವಿದ್ದರೆ, ಒಳ್ಳೆಯ ಮತ್ತು ಗಾಢವಾದ ನಿದ್ರೆಯನ್ನು ಪಡೆಯಬೇಕಾಗುತ್ತದೆ. ಇದು ಕೋಪವನ್ನು ಸುಧಾರಿಸುತ್ತದೆ
undefined
click me!