ವಾಕಿಂಗ್ ಮಾಡುವುದು ದೇಹಕ್ಕೆ ತುಂಬಾ ಒಳ್ಳೆಯದು. ಕೊರೊನಾ ಬಂದ ಮೇಲೆ ಜನ ಆರೋಗ್ಯದ ಬಗ್ಗೆ ಜಾಸ್ತಿ ಗಮನ ಕೊಡೋಕೆ ಶುರು ಮಾಡಿದ್ದಾರೆ. ಅದಕ್ಕೆ ವಾಕಿಂಗ್, ಎಕ್ಸಸೈಜ್ ಅಂತ ಮಾಡ್ತಿದ್ದಾರೆ. ಈ ಲೇಖನದಲ್ಲಿ ವಾರಕ್ಕೆ ಎಷ್ಟು ದಿನ ವಾಕಿಂಗ್ ಮಾಡಬೇಕು ಅಂತ ನೋಡೋಣ.
25
ವಾರಕ್ಕೆ ಎಷ್ಟು ದಿನ ನಡೆಯಬೇಕು?
ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಯುವಕರಿಂದ ಹಿಡಿದು ದೊಡ್ಡವರವರೆಗೂ ವಾರಕ್ಕೆ ಸುಮಾರು 150 ನಿಮಿಷಗಳ ಕಾಲ ಲಘು ಮತ್ತು ತೀವ್ರವಾದ ಏರೋಬಿಕ್ ವ್ಯಾಯಾಮ ಮಾಡಬೇಕು ಅಂತ ಹೇಳಿದೆ. ಈ ನಿಮಿಷಗಳನ್ನು ಪೂರೈಸಲು ವಾರದಲ್ಲಿ ಐದು ದಿನ, ಪ್ರತಿದಿನ 30 ನಿಮಿಷ ನಡೆಯಬೇಕು. ಹೀಗೇ ಮಾಡಬೇಕು ಅಂತೇನಿಲ್ಲ. ಇದಕ್ಕೆ ಇನ್ನೊಂದು ಸುಲಭವಾದ ದಾರಿ ಇದೆ.
35
150 ನಿಮಿಷಗಳನ್ನು ಸುಲಭವಾಗಿ ಹೇಗೆ ಪೂರೈಸಬಹುದು?
ಈ 150 ನಿಮಿಷಗಳನ್ನು ವಾರ ಪೂರ್ತಿ ಸ್ವಲ್ಪ ಸ್ವಲ್ಪ ಭಾಗವಾಗಿ ವಿಂಗಡಿಸಿ ನಡೆಯಬಹುದು. ಬೆಳಗ್ಗೆ 15 ನಿಮಿಷ, ಸಂಜೆ 15 ನಿಮಿಷ ನಡೆಯಬಹುದು. ಊಟ ಆದ್ಮೇಲೆ 10 ನಿಮಿಷ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮೂರು ಹೊತ್ತು ನಡೆಯಬಹುದು. ಇದರಿಂದ ವಾರದಲ್ಲಿ 150 ನಿಮಿಷಗಳ ಗುರಿಯನ್ನು ಸುಲಭವಾಗಿ ತಲುಪಬಹುದು.
45
ಇತರ ವ್ಯಾಯಾಮಗಳು:
ವಾಕಿಂಗ್ ಜೊತೆಗೆ ಇನ್ನೂ ಹೆಚ್ಚು ಲಾಭ ಸಿಗಬೇಕೆಂದರೆ ಮೆಟ್ಟಿಲು ಹತ್ತುವ ಅಭ್ಯಾಸ ಮಾಡಿಕೊಳ್ಳಿ. ಆಫೀಸ್‌ನಲ್ಲಿ ಲಿಫ್ಟ್ ಬಳಸದೆ ಮೆಟ್ಟಿಲುಗಳನ್ನೇ ಹತ್ತಿ. ಮನೆಯ ಮೆಟ್ಟಿಲುಗಳ ಮೇಲೆ ಹತ್ತಿ ಇಳಿಯುವ ವ್ಯಾಯಾಮ ಮಾಡಬಹುದು.
55
ವಾಕಿಂಗ್‌ನಿಂದ ಆಗುವ ಉಪಯೋಗಗಳು
- ಹೃದಯದ ಆರೋಗ್ಯ ಚೆನ್ನಾಗಿ ಇರತ್ತೆ. ರಕ್ತ ಸಂಚಾರ ಸರಿಯಾಗಿ ಆಗತ್ತೆ.
- ಕೆಳ ದೇಹಕ್ಕೆ ಒಳ್ಳೆ ವ್ಯಾಯಾಮ ಆಗತ್ತೆ. ಇದರಿಂದ ಮೂಳೆಗಳು ಗಟ್ಟಿಯಾಗತ್ತೆ.
- ದೇಹದಲ್ಲಿರೋ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗತ್ತೆ.
- ಮಾಂಸಖಂಡಗಳು ಬಲವಾಗತ್ತೆ. ದೇಹದಲ್ಲಿ ಸಹಿಸಿಕೊಳ್ಳುವ ಶಕ್ತಿ ಜಾಸ್ತಿ ಆಗತ್ತೆ.
- ಹೃದಯ ರೋಗ, ಟೈಪ್ 2 ಮಧುಮೇಹ, ಆಸ್ಟಿಯೊಪೊರೋಸಿಸ್, ಕೆಲವು ಕ್ಯಾನ್ಸರ್‌ನಂತಹ ಕಾಯಿಲೆಗಳು ಇದ್ದೋರಿಗೆ ಕಾಯಿಲೆ ಕಮ್ಮಿ ಆಗತ್ತೆ.