ಅರಿಶಿನದಿಂದ ಆಗುವ ನಷ್ಟಗಳಿವು
ನಿಮಗೆ ಗೊತ್ತಾ? ಅರಿಶಿನವನ್ನ ಮಿತಿಮೀರಿ ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ವೇಳೆ ಅರಿಶಿನವನ್ನ ಹೆಚ್ಚಾಗಿ ಸೇವಿಸಿದ್ರೆ ಹೊಟ್ಟೆ ಉಬ್ಬರ ಸಮಸ್ಯೆ ಬರುತ್ತೆ. ಇದರಿಂದ ಗ್ಯಾಸ್, ಅಪಾನವಾಯು, ಆಸಿಡಿಟಿ ಹೀಗೆ ಜೀರ್ಣಕ್ರಿಯೆ ಸಮಸ್ಯೆಗಳು ಬರುತ್ತವೆ. ಹಾಗೇ ಭೇದಿ ಸಮಸ್ಯೆ ಕೂಡ ಬರುತ್ತೆ. ಅದಕ್ಕೇ ಅರಿಶಿನವನ್ನ ಹೆಚ್ಚಾಗಿ ಸೇವಿಸೋದನ್ನ ಬಿಡಿ.