ಇತ್ತೀಚೆಗೆ 40 ದಾಟಿ ಮಕ್ಕಳನ್ನು ಹೊಂದುವವರ ಸಂಖ್ಯೆ ಹೆಚ್ಚಳವಾಗಿದೆ.. ಈ ವಯಸ್ಸಿನಲ್ಲಿ ಮಕ್ಕಳಿಗೆ ಜನ್ಮ ನೀಡುವುದರಿಂದ ಕೆಲವು ಲಾಭಗಳಿವೆ. ಪೋಷಕರಿಗೆ ತಾಳ್ಮೆ, ಪರಿಪಕ್ವತೆ ಇರುತ್ತದೆ. ಉತ್ತಮ ಆರ್ಥಿಕ ಸ್ಥಿತಿಯಲ್ಲಿರುತ್ತಾರೆ. ಮಕ್ಕಳಿಗೆ ಬೇಕಾದ್ದನ್ನೆಲ್ಲಾ ಒದಗಿಸಬಲ್ಲರು. ಆದರೆ, ಕೆಲವು ಅಪಾಯಗಳೂ ಇವೆ.
40ರ ನಂತರ ಗರ್ಭ ಧರಿಸುವುದು ಸವಾಲಿನ ಕೆಲಸ. ಗರ್ಭ ಧರಿಸುವುದೇ ಕಷ್ಟವಾಗಬಹುದು. ವಯಸ್ಸಾದಂತೆ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ. 35 ದಾಟಿದ ಮೇಲೆ ಗರ್ಭ ಧರಿಸುವುದು ಕಷ್ಟ. ಐವಿಎಫ್ ನಂತಹ ಚಿಕಿತ್ಸೆಗಳು ಬೇಕಾಗಬಹುದು.