Turmeric on Belly: ರಾತ್ರಿ ಮಲಗೋ ಮೊದಲು ನಾಭಿ ಮೇಲೆ ಅರಿಶಿನ ಹಚ್ಚಿ ನೋಡಿ

First Published Dec 15, 2021, 9:28 PM IST

ಅರಿಶಿನಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಮಹತ್ವವಿದೆ. ಇದರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ (immunity power) ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಚರ್ಮದ ಅಂದವನ್ನು ಹೆಚ್ಚಿಸುತ್ತದೆ, ಜೊತೆಗೆ ಗಾಯವನ್ನು ಸಹ ನಿವಾರಣೆ ಮಾಡುತ್ತದೆ. ಇದನ್ನು ನಾಭಿಗೆ ಹಾಕುವುದರಿಂದಲು ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. 

ಹೊಕ್ಕಳಿಗೆ ಅರಿಶಿನವನ್ನು (turmeric) ಹಚ್ಚಿದರೆ ನಿಮಗೆ ಅನೇಕ ವಿಧಗಳಲ್ಲಿ ಪ್ರಯೋಜನವಾಗುತ್ತದೆ. ಅರಿಶಿನದಲ್ಲಿ ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣ ದಂತಹ ಅನೇಕ ಅಂಶಗಳು ಇರುತ್ತವೆ.  ಇದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. 

ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಗುಣವೂ ಇದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಕ್ಕಳಿನ ಮೇಲೆ ಅರಿಶಿನದ ಪೇಸ್ಟ್ ಹಚ್ಚುವುದರಿಂದ ಕೂಡ ಚರ್ಮದ ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ. ಇನ್ನೇನು ಪ್ರಯೋಜನಗಳಿವೆ ನೋಡೋಣ. 

ವಿಸರ್ಜಿಸಲು ಸಹಾಯಕವಾಗಿದೆ
ಅರಿಶಿನವನ್ನು ಹಚ್ಚುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು (digestion system) ಆರೋಗ್ಯವಾಗಿಡಲು ನೆರವಾಗುತ್ತದೆ. ಅರಿಶಿನದಲ್ಲಿ ಫೈಬರ್ ಸಮೃದ್ಧವಾಗಿದೆ. ಅದನ್ನು ತಿನ್ನುವುದು ಮತ್ತು ಹಚ್ಚುವುದು ಎರಡೂ ನಿಮಗೆ ಪ್ರಯೋಜನಕಾರಿ. ಆಹಾರವನ್ನು ಜೀರ್ಣಿಸಿಕೊಳ್ಳಲು ಫೈಬರ್ ಅತ್ಯಗತ್ಯ ಅಂಶವಾಗಿದೆ. ಇದು ಹೊಟ್ಟೆ ನೋವು ಅಥವಾ ಅಜೀರ್ಣವನ್ನು ಉಂಟುಮಾಡುವುದಿಲ್ಲ. 

ಪಿರಿಯಡ್ಸ್ ನೋವು (periods pain) ಪರಿಹಾರ
ಅರಿಶಿನವನ್ನು ಸೇವಿಸುವುದರಿಂದ ಋತುಚಕ್ರದ ಸಮಯದಲ್ಲಿ ನೋವು ಮತ್ತು ಹೊಟ್ಟೆ ಸೆಳೆತದ ಸಮಸ್ಯೆಯಲ್ಲೂ ಪ್ರಯೋಜನವಾಗಲಿದೆ. ಇದರಿಂದ ಋತುಚಕ್ರದ ಸಮಯದಲ್ಲಿ ನೋವು ನಿವಾರಣೆಯಾಗುತ್ತದೆ. ಆರಾಮದಾಯಕ ಪಿರಿಯಡ್ಸ್ ನಿಮ್ಮದಾಗುತ್ತದೆ. 


ಸೋಂಕಿನ ತಡೆಗಟ್ಟುವಿಕೆ
ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣವಿದೆ. ಹೊಕ್ಕಳಿಗೆ ಅರಿಶಿನ ಮತ್ತು ಸಾಸಿವೆ ಎಣ್ಣೆಯನ್ನು ಹಚ್ಚಿ, ಇದು ಬ್ಯಾಕ್ಟೀರಿಯಾ ಮತ್ತು ಚಳಿಗಾಲದ ವೈರಲ್ ಸೋಂಕುಗಳನ್ನು ತಡೆಯುತ್ತದೆ.

ಹೊಟ್ಟೆಯಲ್ಲಿ ಉರಿಯೂತದ ಸಮಸ್ಯೆ ಕಡಿಮೆಯಾಗುತ್ತದೆ
ಅಜೀರ್ಣ ಅಥವಾ ಮಲಬದ್ಧತೆಯ ಕಾರಣದಿಂದ ಹೊಟ್ಟೆ ನೋವು ಅಥವಾ ಊತ ಉಂಟಾಗುತ್ತಿದ್ದರೆ, ನೀವು ಹೊಕ್ಕಳಿನ ಮೇಲೆ ಅರಿಶಿನ ಮತ್ತು ತೆಂಗಿನ ಎಣ್ಣೆಯನ್ನು ಸಹ ಹಚ್ಚಬಹುದು. ಇದು ಉರಿಯೂತವನ್ನು ಸಹ ನಿವಾರಿಸುತ್ತದೆ.

ರೋಗನಿರೋಧಕ ವ್ಯವಸ್ಥೆಯನ್ನು ಬಲವಾಗಿ ಇರಸಿಲು 
ಅರಿಶಿನದಲ್ಲಿ ಅನೇಕ ಆಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ (anti bacteria)  ಗುಣವಿದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ರಾತ್ರಿ ಹೊಕ್ಕಳಿಗೆ ಅರಿಶಿನವನ್ನು ಬಳಿಸಿ ಮಲಗುವುದು. ತೂಕ ಇಳಿಸಲು ಕೂಡ ಇದು ನೆರವಾಗಲಿದೆ. 

ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿಕೊಳ್ಳುವುದು ಏಕೆ?
ಹೊಕ್ಕಳಿಗೆ ಅರಿಶಿನ ಹಚ್ಚಿದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿರಿ. ಇದರಿಂದ ದೇಹವು ಅರಿಶಿನದ ಗುಣಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದಲೇ ರಾತ್ರಿ ಮಲಗುವ ಮುನ್ನ ಅರಿಶಿನವನ್ನು ಹಚ್ಚುವುದು ಒಳ್ಳೆಯದು. ಹೊಕ್ಕಳಿಗೆ ಅರಿಶಿನ ಸಾಸಿವೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಇದರಿಂದ ಅರಿಶಿನದ ಗುಣಗಳು ಚರ್ಮದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

click me!