Bathing Tips: ಪ್ಲಾಸ್ಟಿಕ್ ಸ್ಕ್ರಬ್ ಬಳಸೋದ್ರಿಂದ ಆಗಬಹುದು ಸಮಸ್ಯೆ!

First Published | Dec 15, 2021, 8:44 PM IST

ಸ್ನಾನ ಮಾಡುವಾಗ ಚೆನ್ನಾಗಿ ಮೈಯಲ್ಲಿರುವ ಕೊಳೆ ತೆಗೆಯಲು ಪ್ಲಾಸ್ಟಿಕ್ ಸ್ಕ್ರಬ್ (Plastic Scrub) ಬಳಸುತ್ತಾರೆ. ಇದು ಚೆನ್ನಾಗಿ ಸ್ನಾನ (Bath) ಮಾಡಲು ಸಹಾಯಕವಾಗಿದೆ ಎಂದು ಅಂದುಕೊಳ್ಳುತ್ತೇವೆ. ಆದರೆ  ಸ್ನಾನ ಮಾಡಲು ಪ್ಲಾಸ್ಟಿಕ್ ಸ್ಕ್ರಬ್ ಬಳಸಿದರೆ ಇದು ನಿಮಗೆ ಹಾನಿ ಮಾಡಬಹುದು. ಪ್ಲಾಸ್ಟಿಕ್ ಸ್ಕ್ರಬ್ ಗಳು ಅಥವಾ ಲುಫಾ ಬಳಕೆಯು ಚರ್ಮದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. 

ಸೋಂಕಿನ ಅಪಾಯ
ಹೆಚ್ಚಿನ ಜನರು ಪ್ಲಾಸ್ಟಿಕ್ ಸ್ಕ್ರಬ್ ಅನ್ನು ಬಳಸುತ್ತಾರೆ ಏಕೆಂದರೆ ಇದು ನೊರೆಯನ್ನು ಹೆಚ್ಚು ಮಾಡುತ್ತದೆ ಮತ್ತು  ದೇಹವನ್ನು ಸ್ವಚ್ಛಗೊಳಿಸುತ್ತದೆ ಎಂದು ಜನರು ಭಾವಿಸುತ್ತಾರೆ, ಆದರೆ ಇದು ಬ್ಯಾಕ್ಟೀರಿಯಾ (Bacteria) ಮೂಲವೂ ಆಗಬಹುದು. 

ಹೌದು ಪ್ಲಾಸ್ಟಿಕ್ ಸ್ಕ್ರಬ್ ಗಳಲ್ಲಿ ಇರುವ ಇ ಕೋಲಿ, ಸೂಡೋಮೊನಾಸ್ ಎರುಜಿನೋಸಾ, ಸ್ಟಾಫಿಲೋಕೊಕಸ್, ಸ್ಟ್ರೆಪ್ಟೊಕಾಕಸ್ ನಂತಹ ಬ್ಯಾಕ್ಟೀರಿಯಾಗಳು ಚರ್ಮಕ್ಕೆ ಸೋಂಕು ಉಂಟುಮಾಡಬಹುದು. ಇದನ್ನು ಪದೇ ಪದೇ ಬಳಕೆ ಮಾಡುವುದರಿಂದ ಅದರಲ್ಲಿ ಉಳಿಯುವ ಕೊಳೆ, ಬ್ಯಾಕ್ಟೀರಿಯಾ ಮತ್ತಷ್ಟು ಸಮಸ್ಯೆಯನ್ನು ಉಂಟು ಮಾಡುತ್ತದೆ. 

Tap to resize

ಚರ್ಮಕ್ಕೆ ಕಿರಿಕಿರಿಯಾಗಬಹುದು
ಸ್ಕ್ರಬ್ ಗಳನ್ನು ಬಳಸುವುದರಿಂದ ಚರ್ಮದ ಎಕ್ಸ್ ಫೋಲಿಯೇಟೇಶನ್ (exfoliation)  ಉಂಟಾಗುತ್ತದೆ, ಆದರೆ ಇದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾಗಳ ಜೊತೆಗೆ, ಸ್ಕ್ರಬ್ ಗಳು ಶಿಲೀಂಧ್ರದ ಸೋಂಕುಗಳನ್ನು ಸಹ ಉಂಟುಮಾಡಬಹುದು. ಇದು ಚರ್ಮಕ್ಕೆ ಕಿರಿಕಿರಿ ಉಂಟು ಮಾಡಬಹುದು. 

ಚರ್ಮವು ಉರಿಯೂತಕ್ಕೆ ಕಾರಣವಾಗಬಹುದು
ಸ್ಕ್ರಬ್ ಗಳು ನಿಮಗೆ ಹಾನಿ ಮಾಡುವ ವಿವಿಧ ಕೀಟಾಣುಗಳನ್ನು ಹೊಂದಿರುತ್ತವೆ. ಇದು ಚರ್ಮದ ಮೇಲೆ ಊತವನ್ನು ಉಂಟುಮಾಡಬಹುದು. ಇದರಿಂದ ಚರ್ಮದ ಹಲವು ಸಮಸ್ಯೆಗಳು ಉಂಟಾಗಬಹುದು. ಆದುದರಿಂದ ಹಚ್ಚು ಜಾಗರೂಕತೆಯಿಂದ ಇರುವುದು ಮುಖ್ಯ. 

ಕೆಂಪಾಗುವಿಕೆ ಸಮಸ್ಯೆ
ಕೆಲವೊಮ್ಮೆ ಚರ್ಮವು ಸ್ಕ್ರಬ್ ಗಳನ್ನು ಸಹಿಸಲು ಚರ್ಮಕ್ಕೆ ಸಾಧ್ಯವಿಲ್ಲ ಮತ್ತು ಕೆಂಪಾಗುವಿಕೆ ಸಮಸ್ಯೆಗಳು ಇರಬಹುದು. ಅಂದರೆ rashes ಸಮಸ್ಯೆ ಉಂಟಾಗುತ್ತದೆ. ಚರ್ಮ ಕೆಂಪಾಗಿ ದದ್ದು (red rashes) ಉಂಟಾಗುವ ಸಾಧ್ಯತೆ ಇದೆ. ಉತ್ತಮ ಚರ್ಮದ ಆರೈಕೆಗೆ ಇದನ್ನು ಬಳಕೆ ಮಾಡದೆ ಇರುವುದು ಮುಖ್ಯ. 
 

ಚರ್ಮದ ಗಾಯಗಳ ಭಯ
ಸ್ಕ್ರಬ್ ನಿಂದ ಹೆಚ್ಚು ಉಜ್ಜುವುದು ಚರ್ಮದ ಜೀವಂತ ಜೀವಕೋಶಗಳ ಪದರವನ್ನು ಉಜ್ಜುತ್ತದೆ, ಇದು ಚರ್ಮದ ಮೇಲೆ ಗಾಯಗಳನ್ನು ಉಂಟುಮಾಡಬಹುದು. ಚರ್ಮದ ಮೇಲೆ ಹೆಚ್ಚು ಪ್ರೆಶರ್ ಉಂಟಾಗಿರುವುದರಿಂದ ಗಾಯ ಉಂಟಾಗುವ ಸಾಧ್ಯತೆ ಇದೆ. 

ನಿಮ್ಮ ಬಾತ್ ಸ್ಕ್ರಬ್ಬರ್ ಅನ್ನು, ನೈಸರ್ಗಿಕ ಲೂಫಾಗಳು ಮತ್ತು ಸ್ಪಾಂಜ್ ಗಳನ್ನು 20 ಸೆಕೆಂಡುಗಳ ಕಾಲ ಸೋಂಕು ಮುಕ್ತಗೊಳಿಸಲು ಅಥವಾ ಐದು ಪ್ರತಿಶತ ಬ್ಲೀಚ್ ದ್ರಾವಣದಲ್ಲಿ ನೆನೆಸಿ. ಇದರಿಂದ ಲೂಫಾದಲ್ಲಿರುವ ಬ್ಯಾಕ್ಟೀರಿಯಾ ಸಂಪೂರ್ಣವಾಗಿ ನಾಶವಾಗುತ್ತದೆ. 

Latest Videos

click me!