ಅಡುಗೆ ಮನೆಯಲ್ಲಿ ಇರುವೆಗಳ ಕಾಟವೆ? ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ...

First Published | Apr 1, 2021, 5:27 PM IST

ಅಡುಗೆ ಕೋಣೆಯಲ್ಲಿ ಏನಾದರೂ ಸಿಹಿ ಪದಾರ್ಥಗಳನ್ನು ಮಾಡಿಟ್ಟರೆ ಸಾಕು, ಇರುವೆಗಳು ಎಲ್ಲಿಂದಲೋ ಬಂದು ಸೇರುತ್ತವೆ. ನಿಮ್ಮ ಮನೆಯಲ್ಲೂ ಇದೇ ಸಮಸ್ಯೆ ಇದೆಯೇ? ಇರುವೆ ಕಾಟದಿಂದ ಸಾಕಾಗಿ ಹೋಗಿದೆಯೇ? ಹಾಗಿದ್ದರೆ ಇಲ್ಲಿದೆ ಸಿಂಪಲ್ ಟ್ರಿಕ್ಸ್, ಅರಿಶಿನ ಮತ್ತು ಕುಂಕುಮ, ಬಿಳಿ ವಿನೆಗರ್, ಕರ್ಪೂರ.. ಇರುವೆಗಳ ವಿರುದ್ಧ ಹೋರಾಡಲು ನೆರವಾಗುವ ಇನ್ನಷ್ಟು ನೈಸರ್ಗಿಕ ವಿಧಾನಗಳು ಇಲ್ಲಿವೆ. 
 

ಮನೆಯಲ್ಲಿ ಇರುವೆಗಳು ಇದ್ದರೆ ಮತ್ತು ಏನು ಮಾಡಬೇಕೆಂದು ಯೋಚಿಸುತ್ತಿದ್ದರೆ, ಇರುವೆಗಳನ್ನು ನಿವಾರಿಸಲು ತ್ವರಿತ ಸಲಹೆಗಳು ಇಲ್ಲಿವೆ. ಇವುಗಳಿಂದ ಇರುವೆಗಳನ್ನು ವೇಗವಾಗಿ ಓಡಿಸಬಹುದು. ಮುಂದಿನ ಬಾರಿ ಇರುವೆ ಬಂದಾಗ ನೀವೆ ಟ್ರೈ ಮಾಡಿ ನೋಡಿ...
ಅರಿಶಿನ ಕುಂಕುಮಇರುವೆಗಳನ್ನು ಹೋಗಲಾಡಿಸಲು ಮಾಡಬಹುದಾದ ಒಂದು ತಂತ್ರವೆಂದರೆ ಅರಿಶಿನ ಮತ್ತು ಕುಂಕುಮ. ಇರುವೆಗಳಿಂದ ತುಂಬಿದ ಜಾಗದಲ್ಲಿ ಸ್ವಲ್ಪ ಅರಿಶಿನ, ಕುಂಕುಮವನ್ನು ಇಟ್ಟು ನೋಡಿ!!
Tap to resize

ಕರ್ಪೂರಕರ್ಪೂರವನ್ನು ಇರುವೆ ಇರುವ ಜಾಗಕ್ಕೆ ಹಾಕಿ ಮ್ಯಾಜಿಕ್ ನೋಡಿ!! ಕರ್ಪೂರದ ಪರಿಮಳಕ್ಕೆ ಇರುವೆಗಳು ಜಾಗ ಖಾಲಿ ಮಾಡುತ್ತವೆ.
ಪೆಪ್ಪರ್ ಮಿಂಟ್ ಎಣ್ಣೆ: ಇರುವೆಗಳ ಬಾಧೆ ಇದ್ದರೆ ನಿವಾರಿಸಲು ಇರುವೆಗಳು ಬರುವ ಜಾಗಕ್ಕೆ ಈ ಸಾರಭೂತ ತೈಲದ 10 ಹನಿಗಳನ್ನು ಸೇರಿಸಿ.
ಸಕ್ಕರೆ: ಹೌದು!! ಸಣ್ಣ ಕಪ್ಪು ಇರುವೆಗಳಿದ್ದರೆ, ಸಕ್ಕರೆಯ ಕೆಲವು ಕಣಗಳನ್ನು ಚಿಮುಕಿಸಿ. 5 ನಿಮಿಷಗಳ ನಂತರ ಪರಿಶೀಲಿಸಿ ಮತ್ತು ನಿಮಗೆ ಆಶ್ಚರ್ಯವಾಗುತ್ತದೆ!
ವಿನೆಗರ್: 1 ಕಪ್ ವಿನೇಗರ್ ಅನ್ನು ಸಮ ಪ್ರಮಾಣದ ನೀರಿನಲ್ಲಿ ಬೆರೆಸಿ, ಮನೆ ಮತ್ತು ಇರುವೆಗಳು ಬರುವ ಸ್ಥಳಗಳಿಗೆ ಸ್ಪ್ರೇ ಮಾಡಿ ನೋಡಿ..
ಕಿತ್ತಳೆ ಸಿಪ್ಪೆ: ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಇರುವೆಗಳು ಬರುವ ಜಾಗದಲ್ಲಿಡಿ. ಕಿತ್ತಳೆ ಹಣ್ಣಿನ ಪರಿಮಳಕ್ಕೆ ಇರುವೆಗಳು ಓಡಿ ಹೋಗುತ್ತವೆ.

Latest Videos

click me!