memory power
ಮಗುವಿನ(Children) ದೈಹಿಕ ಬೆಳವಣಿಗೆ ಅಥವಾ ಮಾನಸಿಕ ಬೆಳವಣಿಗೆಯ ವಿಷಯವೇ ಆಗಿರಬಹುದು, ಪೌಷ್ಟಿಕಾಂಶವು ಎಲ್ಲದರಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡುವ ಜೊತೆಗೆ ಕೆಲವೊಂದಿಷ್ಟು ವ್ಯಾಯಾಮಗಳನ್ನ ಮಾಡಿಸುವುದರಿಂದ ಮಕ್ಕಳು ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ.
memory power
ವ್ಯಾಯಾಮ(Exercise)
ದೈಹಿಕ ಚಟುವಟಿಕೆಯ ಹೊರತಾಗಿ, ಮಕ್ಕಳನ್ನು ಕೆಲವು ವ್ಯಾಯಾಮಗಳನ್ನು ಮಾಡುವಂತೆ ಮಾಡಬಹುದು, ಇದು ಅವರ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಯಾವೆಲ್ಲ ರೀತಿಯ ಚಟುವಟಿಕೆಗಳ ಮೂಲಕ ಮಕ್ಕಳನ್ನು ಆಕ್ಟಿವ್ ಆಗಿಡಬೇಕು ಎಂಬುದನ್ನು ನೋಡೋಣ..
memory power
ಚಟುವಟಿಕೆ(Activity)
ಈ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಮೆದುಳಿನ ವ್ಯಾಯಾಮಗಳನ್ನು ಪರಿಚಯಿಸಬಹುದು.
ಮಗುವನ್ನು ದಿನವಿಡೀ ದೈಹಿಕವಾಗಿ ಸಕ್ರಿಯವಾಗಿಡಲು, ನೀವು ಅವರಿಗೆ ಯೋಗ ಮತ್ತು ಉಸಿರಾಟದ ವ್ಯಾಯಾಮಗಳನ್ನು ಕಲಿಸಬಹುದು. ಇದು ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ.
memory power
ತಾಲೀಮು
ಆದಾಗ್ಯೂ ಇದನ್ನು ಸ್ವಲ್ಪ ಮಟ್ಟಿಗೆ ವ್ಯಾಯಾಮದಿಂದ ಸರಿಪಡಿಸಲು ಪರಿಗಣಿಸಬಹುದು, ಇದರಲ್ಲಿ ಜಂಪಿಂಗ್ ರೋಪ್(Jumping rope), ಸಾಹಸಗಳನ್ನು ಮಾಡುವುದು ಸೇರಿವೆ. ಮನೆಯಲ್ಲಿಯೇ ಮಕ್ಕಳಿಗೆ ಇಂತಹ ಮೆದುಳಿಗೆ ಕಾರ್ಯ ನೀಡುವಂತಹ ಕೆಲಸವನ್ನು ನೀಡಬೇಕು.
memory power
ಸ್ಮರಣೆ ಆಟಗಳು(Memory Games)
ನಿಮ್ಮ ಮಕ್ಕಳಿಗೆ ಮೆಮೊರಿ ಆಟಗಳನ್ನು ಕಲಿಸಿ, ಅದು ಅವರ ಸ್ಮರಣೆಯನ್ನು ತೀಕ್ಷ್ಣಗೊಳಿಸುತ್ತದೆ. ಪಜಲ್ ಗೇಂ, ಇನ್ನಿತರ ಸಣ್ಣ ಪುಟ್ಟ ಮೆದುಳನ್ನು ಚುರುಕುಗೊಳಿಸುವಂತಹ ಆಟಗಳನ್ನು ಆಡುವ ಮೂಲಕ ಮಕ್ಕಳು ಹೆಚ್ಚು ಆಕ್ಟಿವ್ ಆಗಿರುವಂತೆ ನೋಡಿಕೊಳ್ಳಬೇಕು.
memory power
ಒಗಟು(Riddles)
ಮಕ್ಕಳ ವಯಸ್ಸಿಗೆ ಅನುಗುಣವಾಗಿ, ನೀವು ಅವರಿಗೆ ಪರಿಹರಿಸಲು ಕೆಲವು ಒಗಟುಗಳನ್ನು ನೀಡಬಹುದು. ಇದರಿಂದ ಅವರ ಯೋಚನಾ ಲಹರಿ ಕೂಡ ಹೆಚ್ಚುತ್ತದೆ. ಒಗಟಿನ ಬಗ್ಗೆ ಕುತೂಹಲ ಕೂಡ ಮೂಡುತ್ತದೆ. ಇದರಿಂದ ನೆನಪಿನ ಶಕ್ತಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
memory power
ನೃತ್ಯ(Dance)
ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಪ್ರಕಾರ, ಮೆದುಳಿನ ಆರೋಗ್ಯ ಮತ್ತು ಸ್ಮರಣೆಯನ್ನು ಹೆಚ್ಚಿಸಲು ನೃತ್ಯವು ತುಂಬಾ ಪ್ರಯೋಜನಕಾರಿಯಾಗಿದೆ. ನೃತ್ಯ ಮಾಡುವುದರಿಂದ ಮಕ್ಕಳ ಮನಸ್ಸು ಕೇಂದ್ರೀಕೃತವಾಗಿರಲು ಸಾಧ್ಯವಾಗುತ್ತದೆ. ಇದರಿಂದ ಮೆಮೊರಿ ಪವರ್ ಕೂಡ ಹೆಚ್ಚುತ್ತದೆ.