ಪ್ರತಿದಿನ ಬೆಳಗ್ಗೆ ನೆನೆಸಿದ ಅಂಜೂರವನ್ನು ಏಕೆ ಸೇವಿಸಬೇಕು?

First Published Mar 17, 2021, 4:51 PM IST

ಅಂಜೀರ್ ಅಥವಾ ಒಣ ಅಂಜೂರವು ಹಿಪ್ಪು ನೇರಳೆ ಕುಟುಂಬಕ್ಕೆ ಸೇರಿದೆ. ರುಚಿಯ ಒಣ  1-2 ಅಂಜೂರವನ್ನು ರಾತ್ರಿ 1/2 ಕಪ್ ನೀರಿನಲ್ಲಿ ನೆನೆಸಿ ಮತ್ತು ರಾತ್ರಿಯಿಡೀ ನೆನೆಯಲು ಬಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬಾದಾಮಿ, ವಾಲ್‌ನಟ್‌ನಂತಹ ಇತರೆ ಕೆಲವು ನೆನೆಸಿದ ಬೀಜಗಳನ್ನು ಕೂಡ ನೀವು ಹೀಗೆ ಮಾಡಿ ಸೇವಿಸಬಹುದು. ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಆಗುವ ಹಲವಾರು ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿ.

ಪಿಎಂಎಸ್ ಸಮಸ್ಯೆಪಿಎಂಎಸ್ ಸಮಸ್ಯೆಗಳನ್ನು ಎದುರಿಸುವ ಮಹಿಳೆಯರು ಅಂಜೂರವನ್ನು ತಿನ್ನುವ ಮೂಲಕ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ.
undefined
ಸಂತಾನೋತ್ಪತ್ತಿಗೆಅಂಜೂರಾ ಖನಿಜಗಳಾದ ಸತು, ಮ್ಯಾಂಗನೀಸ್, ಮೆಗ್ನೀಷಿಯಂ, ಕಬ್ಬಿಣಾಂಶಗಳ ಒಂದು ಪವರ್ ಹೌಸ್ ಆಗಿದ್ದು, ಇದು ಸಂತಾನೋತ್ಪತ್ತಿ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಒಣ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಾಂಶಗಳು ಅಧಿಕ ಪ್ರಮಾಣದಲ್ಲಿರುವ ಕಾರಣ ಹಾರ್ಮೋನುಗಳ ಅಸಮತೋಲನ ಮತ್ತು ಋತುಬಂಧದ ನಂತರದ ಸಮಸ್ಯೆಗಳಿಂದ ರಕ್ಷಿಸುತ್ತದೆ.
undefined
ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆಅಂಜೂರದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಷಿಯಂ ಇದ್ದು, ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುತ್ತದೆ. ಅಂಜೂರದಲ್ಲಿರುವಕ್ಲೋರೋಜೆನಿಕ್ ಆಮ್ಲವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ.
undefined
ಆರೋಗ್ಯಕರ ಮೂಳೆಗಳಿಗಾಗಿಅಂಜೂರವು ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಒದಗಿಸುವ ಮೂಲಕ ಮೂಳೆಗಳನ್ನು ಆರೋಗ್ಯವಾಗಿಡಲು ನೆರವಾಗುತ್ತದೆ. ದೇಹವು ಸ್ವತಃ ಕ್ಯಾಲ್ಸಿಯಂ ಅನ್ನು ಉತ್ಪಾದಿಸುವುದಿಲ್ಲ, ಆದ್ದರಿಂದ ಹಾಲು, ಸೋಯಾ, ಹಸಿರು ಸೊಪ್ಪು ಮತ್ತು ಅಂಜೂರಗಳಂತಹ ಬಾಹ್ಯ ಮೂಲಗಳನ್ನು ಅವಲಂಬಿಸಬೇಕಾಗುತ್ತದೆ.
undefined
ಟೈಪ್-II ಮಧುಮೇಹನೆನೆಸಿದ ಅಂಜೀರ್ ಅನ್ನು ತಿನ್ನುವ ಮೂಲಕ ಟೈಪ್-II ಮಧುಮೇಹದಲ್ಲಿ ರಕ್ತದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು. ಸಲಾಡ್, ಸ್ಮೂತಿಗಳು, ಕಾರ್ನ್ ಫ್ಲೇಕ್ಸ್ ಬೌಲ್ ಅಥವಾ ಓಟ್ಸ್‌ನಲ್ಲಿ ಕತ್ತರಿಸಿದ ಅಂಜೂರವನ್ನು ಸೇರಿಸುವ ಮೂಲಕ ಈ ಡ್ರೈ ಫ್ರೂಟ್ ಅನ್ನುಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು.
undefined
ಅಂಜೂರವು ಹೃದಯ ಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿರುವ ದೇಹದಲ್ಲಿನಟ್ರೈಗ್ಲಿಸರೈಡ್ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ.
undefined
ಮಲಬದ್ಧತೆತಡೆಯುತ್ತದೆಅಂಜೂರದಲ್ಲಿ ನಾರಿನಂಶವಿದ್ದು, ಇದು ನಿಯಮಿತವಾಗಿ ಮಲವಿಸರ್ಜನೆಯನ್ನು ನಿರ್ವಹಿಸಲು ಸಹಕರಿಸುತ್ತದೆ. ಮಲಬದ್ಧತೆ ಹೊಂದಿರುವವರು ತಮ್ಮ ಆಹಾರ ಕ್ರಮದಲ್ಲಿ ಅಂಜೂರವನ್ನು ಸೇರಿಸಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
undefined
ತೂಕ ಇಳಿಸಲು ಸಹಾಯ ಮಾಡುತ್ತದೆತೂಕ ಇಳಿಸುವ ಡಯಟ್ ಅನ್ನು ಅನುಸರಿಸುತ್ತಿದ್ದರೆ ಡಯಟ್ ಚಾರ್ಟ್ ಗೆ ಅಂಜೀರ್ ಅನ್ನು ಕೂಡ ಸೇರಿಸಬಹುದು. ಫೈಬರ್ ಯುಕ್ತ ಆಹಾರಗಳು ತೂಕ ಕಳೆದುಕೊಳ್ಳಲು ಅಗತ್ಯವಾಗಿದ್ದು, ದೇಹಕ್ಕೆ ಉತ್ತಮ ಪ್ರಮಾಣದ ನಾರಿನಂಶವನ್ನು ನೀಡುತ್ತದೆ.
undefined
ಅಂಜೂರವನ್ನು ಮಿತವಾಗಿ ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ ಏಕೆಂದರೆ ಇದರಲ್ಲಿ ಕ್ಯಾಲೋರಿಗಳು ಮತ್ತು ಅಧಿಕ ಪ್ರಮಾಣದ ಅಂಜೀರ್ ಇರುವುದರಿಂದ ತೂಕ ಹೆಚ್ಚಿಸಿಕೊಳ್ಳುವ ಮೂಲಕ ವಿರುದ್ಧವಾದ ಕೆಲಸ ಮಾಡಬಹುದು.
undefined
ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆಅಂಜೂರದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಫ್ರೀ ರೇಡಿಕಲ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುವುದು. ಇದರಿಂದ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.
undefined
click me!