ಎರಡನೇ ಹಂತದ ಪಿತ್ತಜನಕಾಂಗದ ಕ್ಯಾನ್ಸರ್ ಲಕ್ಷಣಗಳು:
ಈ ಅಂಗವು ದೇಹದಲ್ಲಿ ಗ್ಲೈಕೊಜೆನ್ ಮತ್ತು ಅನೇಕ ಜೀವಸತ್ವಗಳನ್ನು ಸಂಗ್ರಹಿಸುತ್ತದೆ. ಇದು ವಿಷವನ್ನು ತೆಗೆದುಹಾಕಿ ಆಹಾರವನ್ನು ಜೀರ್ಣಿಸಿಕೊಳ್ಳಲು ಪಿತ್ತರಸವನ್ನು ಉತ್ಪಾದಿಸುತ್ತದೆ. ಪಕ್ಕೆಲುಬಿನ ಕೆಳಗೆ ಬಲಭಾಗದಲ್ಲಿ ಗಡ್ಡೆ, ಈ ಭಾಗದಲ್ಲಿ ನೋವು, ಹೊಟ್ಟೆಯಲ್ಲಿ ಊತ, ಕಾಮಾಲೆ, ಯಾವಾಗಲೂ ದಣಿದ ಮತ್ತು ದುರ್ಬಲ ಭಾವನೆ, ಹಸಿವಿನ ಕೊರತೆ, ತೂಕ ನಷ್ಟ, ಗಾಢ ಬಣ್ಣದ ಮೂತ್ರವು ಲಿವರ್ ಕ್ಯಾನ್ಸರ್‌ನ (liver cancer) ಲಕ್ಷಣಗಳಾಗಿರಬಹುದು.