ವೃಷಣ ಕ್ಯಾನ್ಸರ್: ಚಿಕಿತ್ಸೆ ಪಡೆಯದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!

First Published Sep 12, 2022, 5:18 PM IST

ವೃಷಣ ಕ್ಯಾನ್ಸರ್ ಅಥವಾ ಟೆಸ್ಟಿಕ್ಯುಲರ್ ಕ್ಯಾನ್ಸರ್ ಪುರುಷರಿಗೆ ಸಂಬಂಧಿಸಿದ ಗಂಭೀರ ಕಾಯಿಲೆಯಾಗಿದ್ದು, ಇದು ಹೆಚ್ಚಾಗಿ 15 ರಿಂದ 35 ವರ್ಷ ವಯಸ್ಸಿನ ನಡುವೆ ಕಂಡು ಬರುತ್ತದೆ. ಟೆಸ್ಟಿಕ್ಯುಲರ್ ಕ್ಯಾನ್ಸರ್ ಅನ್ನು ವೃಷಣ ಕ್ಯಾನ್ಸರ್ ಮತ್ತು ಅಂಡಾಶಯ ಕ್ಯಾನ್ಸರ್ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ, ಈ ರೋಗ 20 ರಿಂದ 35 ವರ್ಷ ವಯಸ್ಸಿನವರಲ್ಲಿ ಕಂಡುಬರುತ್ತದೆ, ಆದರೆ ಈ ರೋಗವು ಯಾವುದೇ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ವೃಷಣ ಕ್ಯಾನ್ಸರ್ ಅನ್ನು ಮಾರಣಾಂತಿಕ ಕಾಯಿಲೆ (Deadly Disease) ಎಂದು ಪರಿಗಣಿಸಲಾಗುತ್ತದೆ, ಈ ರೋಗಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ರೋಗಿಯ ಬದುಕುಳಿಯುವ ಸಾಧ್ಯತೆ ಕೂಡ ತುಂಬಾ ಕಡಿಮೆ.

ಅನೇಕ ಕಾರಣಗಳಿಂದ ವೃಷಣ ಕ್ಯಾನ್ಸರ್ (Testicular cancer) ಉಂಟಾಗುತ್ತೆ ಮತ್ತು ಈ ರೋಗದಲ್ಲಿ, ವೃಷಣಗಳಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುತ್ತವೆ. ವೃಷಣ ಕ್ಯಾನ್ಸರ್ ಇದ್ದರೆ, ರೋಗಿಯು ಮೂತ್ರವಿಸರ್ಜನೆ ಮಾಡಲು ಕಷ್ಟಪಡಬೇಕಾಗುತ್ತೆ, ಅಷ್ಟೇ ಅಲ್ಲ, ವೃಷಣಗಳಲ್ಲಿ ಗಡ್ಡೆಗಳು, ಹೊಟ್ಟೆಯ (Stomach) ತೊಂದರೆಗಳು ಮತ್ತು ಅಸಹಜ ಕೆಮ್ಮು ಉಂಟಾಗಬಹುದು. ವೃಷಣ ಕ್ಯಾನ್ಸರ್ ಅನ್ನು ತಡೆಗಟ್ಟಲು, ನೀವು ನಿಮ್ಮ ಜೀವನಶೈಲಿಯಲ್ಲಿ (Lifestyle) ಕೆಲವು ಬದಲಾವಣೆಗಳನ್ನು ತರಬೇಕು. ವೃಷಣ ಕ್ಯಾನ್ಸರ್ ತಡೆಗಟ್ಟುವುದು ಹೇಗೆ ಎಂದು ತಿಳಿಯೋಣ.

ವೃಷಣ ಕ್ಯಾನ್ಸರ್ ಲಕ್ಷಣಗಳು

ವೃಷಣಗಳ ಕ್ಯಾನ್ಸರ್ ನ ಸಮಸ್ಯೆಯಲ್ಲಿ, ಆರಂಭಿಕ ಹಂತದಲ್ಲಿಯೇ ರೋಗ ಲಕ್ಷಣಗಳನ್ನು ರೋಗಿಯು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮೊದಲನೆಯದಾಗಿ, ರೋಗಿಯ ವೃಷಣಗಳಲ್ಲಿ ಗಡ್ಡೆಗಳು ಅಥವಾ ಊತದ ಸಮಸ್ಯೆ ಪ್ರಾರಂಭವಾಗುತ್ತದೆ. ವೃಷಣ ಕ್ಯಾನ್ಸರ್ ಇದ್ದಾಗ ರೋಗಿಯಲ್ಲಿ ಕಾಣಿಸಿಕೊಳ್ಳುವ ಕೆಲವು ಪ್ರಮುಖ ರೋಗಲಕ್ಷಣಗಳು (Symptoms) ಈ ಕೆಳಗಿನಂತಿವೆ.

ವೃಷಣಗಳ ಕೆಳಭಾಗದಲ್ಲಿ ಉರಿಯೂತ.
ವೃಷಣಗಳಲ್ಲಿ ಗಡ್ಡೆಗಳ ರಚನೆ.
ಬೆನ್ನು ಮತ್ತು ಕಿಬ್ಬೊಟ್ಟೆಯಲ್ಲಿ ತೀವ್ರವಾದ ನೋವು.
ವೃಷಣಗಳಲ್ಲಿ ತೀವ್ರವಾದ ನೋವು.
ಕಿಬ್ಬೊಟ್ಟೆಯ ನೋವು(Pain) ಮತ್ತು ಕರುಳಿನ ಚಲನೆಯಲ್ಲಿ ತೊಂದರೆ.
ವೃಷಣಗಳಲ್ಲಿ ದ್ರವ ಹೆಪ್ಪುಗಟ್ಟುವುದು.
ವೃಷಣಗಳ ಗಾತ್ರದಲ್ಲಿ ಬದಲಾವಣೆಗಳು.
ತೀವ್ರ ಕೆಮ್ಮು ಮತ್ತು ತಲೆನೋವು

ವೃಷಣ ಕ್ಯಾನ್ಸರ್ ತಡೆಗಟ್ಟಲು ಸಲಹೆಗಳು

ವೃಷಣ ಕ್ಯಾನ್ಸರ್ ರೋಗಲಕ್ಷಣಗಳು ಕಾಣಿಸಿಕೊಂಡರೆ, ರೋಗಿಯು ಮೊದಲು ವೈದ್ಯರನ್ನು(Doctor) ಸಂಪರ್ಕಿಸಬೇಕು. ಟೆಸ್ಟ್ ಮಾಡಿದ ಬಳಿಕ ವೈದ್ಯರು ಚಿಕಿತ್ಸೆ ಪ್ರಾರಂಭಿಸುತ್ತಾರೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದ್ರೆ, ರೋಗಿ ಬೇಗ ಚೇತರಿಸಿಕೊಳ್ಳಬಹುದು. ಚಿಕಿತ್ಸೆ ವಿಳಂಬವಾದರೆ, ವೃಷಣ ಕ್ಯಾನ್ಸರ್ ರೋಗಿಗಳು ಚೇತರಿಸಿಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ. 

ನಿಮಗೆ ಈ ಸಮಸ್ಯೆ ಇದ್ರೆ, ನೀವು ಜೀವನಶೈಲಿಯಲ್ಲಿ ಕೆಲವು ಪ್ರಮುಖ ಬದಲಾವಣೆ ಮಾಡಲೇಬೇಕು. ವೃಷಣ ಕ್ಯಾನ್ಸರ್ ಹೆಚ್ಚಾಗಿ ಯುವಜನರಲ್ಲಿ ಕಂಡುಬರುತ್ತದೆ. ಅಂತಹ ಕ್ಯಾನ್ಸರ್ ಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ, ಈ ಕಾರಣದಿಂದಾಗಿ ಅದನ್ನು ತಡೆಗಟ್ಟಲು ಯಾವುದೇ ಕ್ರಮಗಳನ್ನು ಹೇಳಲು ಸಾಧ್ಯವಿಲ್ಲ. ಆದರೆ ಜೀವನಶೈಲಿ ಮತ್ತು ಆಹಾರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ನೀವು ಕಾಳಜಿ ವಹಿಸಿದರೆ, ವೃಷಣ ಕ್ಯಾನ್ಸರ್(Cancer) ತಡೆಗಟ್ಟಲು ಸಹಾಯ ಮಾಡುತ್ತದೆ.

ವೃಷಣ ಕ್ಯಾನ್ಸರ್ ತಪ್ಪಿಸಲು, ನೀವು ಈ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು

ವೃಷಣಗಳ ಮೇಲೆ ಯಾವುದೇ ಗಾಯವಾದಲ್ಲಿ, ಮೊದಲನೆಯದಾಗಿ, ವೈದ್ಯರನ್ನು ಸಂಪರ್ಕಿಸಿ. ಅನೇಕ ಬಾರಿ ಸ್ಪೋರ್ಟ್ಸ್(Sports) ಅಥವಾ ಇತರ ದೈಹಿಕ ಚಟುವಟಿಕೆಯ (Physical Activity) ಸಮಯದಲ್ಲಿ ವೃಷಣಗಳ ಮೇಲಿನ ಉಂಟಾಗುವ ಗಾಯವನ್ನು ನಿರ್ಲಕ್ಷಿಸುತ್ತಾರೆ. ಹೀಗೆ ಮಾಡೋದ್ರಿಂದ, ಈ ಗಾಯವು ಭವಿಷ್ಯದಲ್ಲಿ ವೃಷಣ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.  

ಕ್ರೀಡೆಯ ಸಮಯದಲ್ಲಿ ವೃಷಣಗಳಿಗೆ ಗಾಯವಾಗುವುದನ್ನು ತಡೆಯಲು ಗಾರ್ಡ್ ಗಳನ್ನು(Guard) ಬಳಸಬೇಕು. ಹೆಚ್ಚಿನ ಜನರು ಕ್ರಿಕೆಟ್ ಆಡುವಾಗ ವೃಷಣಗಳ ಗಾಯಕ್ಕೆ ಒಳಗಾಗುತ್ತಾರೆ. ಈ ಸಮಯದಲ್ಲಿ, ಗಾಯವನ್ನು ತಪ್ಪಿಸಲು ನೀವು ಗಾರ್ಡ್ ಧರಿಸಬೇಕು. ಇದು ನಿಮ್ಮ ರಕ್ಷಣೆಗೆ ಉತ್ತಮವಾಗಿದೆ.

ಎಚ್ಐವಿ(HIV) ಸಮಸ್ಯೆ ವೃಷಣ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಚ್ಐವಿ ಹೊಂದಿರುವ ಪುರುಷರು ನಿರಂತರವಾಗಿ ತಮ್ಮ ವೃಷಣಗಳನ್ನು ಪರೀಕ್ಷಿಸಬೇಕು. ವೃಷಣ ಕ್ಯಾನ್ಸರ್‌ಗೆ ಸಂಬಂಧಿಸಿದ ಯಾವುದೇ ರೋಗ ಲಕ್ಷಣಗಳನ್ನು ನೀವು ಗಮನಿಸಿದರೆ, ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ವೃಷಣಗಳ(Testicle) ಗಾತ್ರದಲ್ಲಿ ಅಸಹಜ ಹೆಚ್ಚಳ ಕಂಡುಬಂದರೆ, ನೀವು ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯವಿದ್ದರೆ, ಅದನ್ನು ಪರೀಕ್ಷಿಸಿ ಚಿಕಿತ್ಸೆ ನೀಡಬೇಕು. ನೀವು ತಡ ಮಾಡಿದಷ್ಟು ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಆದುದರಿಂದ ಈ ಬಗ್ಗೆ ಜಾಗರೂಕತೆ ವಹಿಸಿದರೆ ಉತ್ತಮ.

ತಮ್ಮ ಕುಟುಂಬದಲ್ಲಿ ವೃಷಣ ಕ್ಯಾನ್ಸರ್ ನ ಇತಿಹಾಸ ಹೊಂದಿರುವ ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ. ಆದ್ದರಿಂದ, ಅಂತಹ ಜನರು ಇದರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಅಗತ್ಯವಿದ್ದರೆ ಖಂಡಿತವಾಗಿಯೂ ಪರೀಕ್ಷೆಗೆ(Test) ಒಳಗಾಗಬೇಕು.

ಬೇಸಿಗೆಯಲ್ಲಿ ವೃಷಣಗಳನ್ನು ಪರೀಕ್ಷಿಸಿ. ಇದನ್ನು ಮಾಡಲು, ಮೊದಲು ನಿಮ್ಮ ಎರಡೂ ಕೈಗಳಿಂದ ವೃಷಣಗಳನ್ನು ಹಿಡಿದುಕೊಳ್ಳಿ ಮತ್ತು ತೋರು ಬೆರಳು ಮತ್ತು ಮಧ್ಯದ ಬೆರಳಿನ ನಡುವೆ ವೃಷಣಗಳನ್ನು ರೋಲ್ ಮಾಡಿ. ಇದನ್ನು ಮಾಡುವುದರಿಂದ ವೃಷಣಗಳಲ್ಲಿ ಗಡ್ಡೆ ಅಥವಾ ಅಸಹಜತೆ ಇದ್ದರೆ ಕಂಡು ಹಿಡಿಯಬಹುದು. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.

click me!